IPL 2023: “ಮಾರಾಟ ಆಗದಿರುವುದೇ ಉತ್ತಮ!”: ವಿರಾಟ್ ಸಹ ಆಟಗಾರನ ಹೇಳಿಕೆಯಿಂದ ಕ್ರೀಡಾ ಲೋಕದಲ್ಲಿ ಸಂಚಲನ!

RCB ಪಾಡ್‌’ಕ್ಯಾಸ್ಟ್‌’ನ ಹೊಸ ಸಂಚಿಕೆಯಲ್ಲಿ ಮಾತನಾಡಿದ ಶಹಬಾಜ್ ಅಹ್ಮದ್, “ಬೆಂಗಳೂರು ತಂಡವು ಹರಾಜಿನಲ್ಲಿ ತನಗಾಗಿ ಬಿಡ್ ಮಾಡುತ್ತದೆ ಎಂದು ಯೋಚಿಸಿರಲಿಲ್ಲ. ಮೊದಲ ಸುತ್ತಿನ ಹರಾಜಿನಲ್ಲಿ ಮಾರಾಟವಾಗದೆ ಉಳಿದ ನಂತರ, ಟಿವಿಯನ್ನು ಸ್ವಿಚ್ ಆಫ್ ಮಾಡಿದೆ. ಇದು ಆಶ್ಚರ್ಯಕರವಾಗಿತ್ತು. ನಿಜ ಹೇಳಬೇಕೆಂದರೆ, ಆ ಸಮಯದಲ್ಲಿ ನನಗೆ ಭುಜದ ಗಾಯವಾಗಿತ್ತು” ಎಂದು ಹೇಳಿದ್ದಾರೆ.

Written by - Bhavishya Shetty | Last Updated : Mar 25, 2023, 05:19 PM IST
    • ಐಪಿಎಲ್ 16ನೇ ಸೀಸನ್ ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ.
    • ಪ್ರತಿ ಋತುವಿನಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದೆ.
    • ಐಪಿಎಲ್‌’ನ ಟ್ರೋಫಿಯನ್ನು ಒಮ್ಮೆಯೂ ಗೆಲ್ಲಲು ಆರ್‌ಸಿಬಿ ತಂಡಕ್ಕೆ ಸಾಧ್ಯವಾಗಿಲ್ಲ.
IPL 2023: “ಮಾರಾಟ ಆಗದಿರುವುದೇ ಉತ್ತಮ!”: ವಿರಾಟ್ ಸಹ ಆಟಗಾರನ ಹೇಳಿಕೆಯಿಂದ ಕ್ರೀಡಾ ಲೋಕದಲ್ಲಿ ಸಂಚಲನ! title=
Royal Challengers Bangalore

RCB Star on Virat Kohli: ಇಂಡಿಯನ್ ಪ್ರೀಮಿಯರ್ ಲೀಗ್ (IPL-2023) ನ 16 ನೇ ಸೀಸನ್ ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಈ ಋತುವಿನ ಮೊದಲ ಪಂದ್ಯವು ಹಾಲಿ ಚಾಂಪಿಯನ್ ಗುಜರಾತ್ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಇದಕ್ಕೂ ಮುನ್ನ ಎಲ್ಲಾ ತಂಡಗಳು ಮತ್ತು ಆಟಗಾರರು ತಮ್ಮ ತಯಾರಿಯಲ್ಲಿ ನಿರತರಾಗಿದ್ದಾರೆ. ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ ಸಿ ಬಿ) ತಂಡದ ಆಟಗಾರರೊಬ್ಬರು ತಮ್ಮ ಹೇಳಿಕೆಯಿಂದ ಕ್ರೀಡಾ ಲೋಕದಲ್ಲಿ ಸಂಚಲನ ಮೂಡಿಸಿದ್ದಾರೆ.

ಇದನ್ನೂ ಓದಿ:  IPL 2023 : ಸಿಎಸ್‌ಕೆ ಟೀಂಗೆ ಬಿಗ್ ಶಾಕ್ : ಅತಿ ಹೆಚ್ಚು ವಿಕೆಟ್ ಪಡೆದ ಈ ಬೌಲರ್ ಐಪಿಎಲ್​ನಿಂದ ಔಟ್!

ಐಪಿಎಲ್ 16ನೇ ಸೀಸನ್ ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಪ್ರತಿ ಋತುವಿನಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದೆ. ಐಪಿಎಲ್‌’ನ ಟ್ರೋಫಿಯನ್ನು ಒಮ್ಮೆಯೂ ಗೆಲ್ಲಲು ಆರ್‌ಸಿಬಿ ತಂಡಕ್ಕೆ ಸಾಧ್ಯವಾಗಿಲ್ಲ.

ಕಳೆದ ಋತುವಿನಲ್ಲಿ ವಿರಾಟ್ ಕೊಹ್ಲಿ ಕೂಡ ನಾಯಕತ್ವ ತ್ಯಜಿಸಿದ್ದರು. ಈಗ ತಂಡದ ಕಮಾಂಡ್ ಅನ್ನು ಫಾಫ್ ಡುಪ್ಲೆಸಿ ನಿಭಾಯಿಸುತ್ತಿದ್ದಾರೆ. ಈ ನಡುವೆ ತಂಡದ ಆಲ್ ರೌಂಡರ್ ಶಹಬಾಜ್ ಅಹ್ಮದ್ ಹೇಳಿಕೆ ನೀಡಿದ್ದಾರೆ.

RCB ಪಾಡ್‌’ಕ್ಯಾಸ್ಟ್‌’ನ ಹೊಸ ಸಂಚಿಕೆಯಲ್ಲಿ ಮಾತನಾಡಿದ ಶಹಬಾಜ್ ಅಹ್ಮದ್, “ಬೆಂಗಳೂರು ತಂಡವು ಹರಾಜಿನಲ್ಲಿ ತನಗಾಗಿ ಬಿಡ್ ಮಾಡುತ್ತದೆ ಎಂದು ಯೋಚಿಸಿರಲಿಲ್ಲ. ಮೊದಲ ಸುತ್ತಿನ ಹರಾಜಿನಲ್ಲಿ ಮಾರಾಟವಾಗದೆ ಉಳಿದ ನಂತರ, ಟಿವಿಯನ್ನು ಸ್ವಿಚ್ ಆಫ್ ಮಾಡಿದೆ. ಇದು ಆಶ್ಚರ್ಯಕರವಾಗಿತ್ತು. ನಿಜ ಹೇಳಬೇಕೆಂದರೆ, ಆ ಸಮಯದಲ್ಲಿ ನನಗೆ ಭುಜದ ಗಾಯವಾಗಿತ್ತು” ಎಂದು ಹೇಳಿದ್ದಾರೆ.

“ಆರ್‌ ಸಿ ಬಿ ನನ್ನನ್ನು ಖರೀದಿಸುತ್ತದೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ಐಪಿಎಲ್‌ಗೆ ಮತ್ತೆ ಸಮಸ್ಯೆಯಾಗಬಾರದು ಎಂದು ನಾನು ಮಾರಾಟವಾಗದೆ ಹೋದರೆ ಒಳ್ಳೆಯದು ಎಂದು ನಾನು ಯೋಚಿಸಿದೆ. ನಾನು ಫಿಟ್ ಆಗದಿದ್ದರೆ ಆ ಋತುವು ವ್ಯರ್ಥವಾಗುತ್ತದೆ. ನನ್ನ ಸಹೋದ್ಯೋಗಿ ಇಶಾನ್ ಪೊರೆಲ್ ಅವರನ್ನು ಮೊದಲು ಪಂಜಾಬ್ ಆಯ್ಕೆ ಮಾಡಿದೆ. ಇದಾದ ನಂತರ ನನ್ನ ಸರದಿ. ಮೊದಲ ಪ್ರಯತ್ನದಲ್ಲಿ ನಾನು ಮಾರಾಟವಾಗದೆ ಉಳಿದೆ. ನಾನು ತುಂಬಾ ಸಂತೋಷವಾಗಿದ್ದೆ. ನಾನು ಟಿವಿ ಸ್ವಿಚ್ ಆಫ್ ಮಾಡಿದೆ ಮತ್ತು ಸಮಾಧಾನವಾಯಿತು. ಹರಾಜು ಮುಗಿಯುತ್ತಿದ್ದಂತೆ ನನ್ನ ಸ್ನೇಹಿತರು ಆರ್‌ಸಿಬಿಯಿಂದ ಆಯ್ಕೆಯಾಗಿದ್ದೇನೆ ಎಂದು ಹೇಳಿದರು. ಎಲ್ಲರೂ ಇನ್ನೂ ಡ್ರೆಸ್ಸಿಂಗ್ ರೂಮ್‌’ನಲ್ಲಿ ಹರಾಜನ್ನು ನೋಡುತ್ತಿದ್ದರು ಮತ್ತು ಎಲ್ಲರೂ ಸಂತೋಷಪಟ್ಟರು” ಎಂದರು.

ಇದನ್ನೂ ಓದಿ: CCL 2023: ಸೆಮಿಫೈನಲ್’ನಲ್ಲಿ ಮುಗ್ಗರಿಸಿದ ಕರ್ನಾಟಕ ಬುಲ್ಡೋಜರ್ಸ್: ತೆಲುಗು ವಾರಿಯರ್ಸ್ ವಿರುದ್ಧ ಸೋಲುಂಡ ಕಿಚ್ಚ ಪಡೆ

ನನ್ನನ್ನು ಆರ್‌ ಸಿ ಬಿ ತಂಡವು ಆಯ್ಕೆ ಮಾಡಿದಾಗಲೂ ಹೆಚ್ಚಿನ ಆತ್ಮವಿಶ್ವಾಸವಿರಲಿಲ್ಲ. ಫೀಲ್ಡರ್ ಆಗಿ ಎದುರಿಸುವ ತೊಂದರೆಗಳು ಮತ್ತು ಫೀಲ್ಡಿಂಗ್‌’ನಲ್ಲಿ ಕೊಹ್ಲಿ ತುಂಬಾ ಕಟ್ಟುನಿಟ್ಟಾಗಿರುವುದು ನನ್ನ ಸ್ವಲ್ಪ ಆತಂಕಕ್ಕೆ ಕಾರಣವಾಯಿತು ಎಂದು ಅವರು ಹೇಳಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News