SRH vs PBK: ಪ್ಲೇ ಆಫ್‌ನಿಂದ ಹೊರಬಿದ್ದರೂ ಜಿದ್ದಾಜಿದ್ದಿ ನಡೆಸಲು ಹೈದರಾಬಾದ್-ಪಂಜಾಬ್ ತಯಾರಿ!
ಈ ಬಾರಿ ನಿಕೋಲಸ್ ಪೂರನ್ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವು ಇದುವರೆಗೆ ಹದಿಮೂರು ಪಂದ್ಯಗಳನ್ನಾಡಿದೆ. ಆ ಪೈಕಿ, ಆರರಲ್ಲಿ ಗೆಲುವು ಸಾಧಿಸಿದ್ದು, ಏಳರಲ್ಲಿ ಸೋಲು ಅನುಭವಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನ ಗಳಿಸಿದೆ.
ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 70ನೇ ಪಂದ್ಯವು ಇಂದು ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆಯಲಿದೆ. ಸಂಜೆ 7.30ಕ್ಕೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಯಾವ ತಂಡ ಗೆದ್ದರೂ ಸೋತರೂ ಯಾವುದೇ ಪ್ರಯೋಜನವಿಲ್ಲ. ಏಕೆಂದರೆ ಉಭಯ ತಂಡಗಳು ಪ್ಲೇ ಆಫ್ ಪ್ರವೇಶದ ಅವಕಾಶವನ್ನು ಕಳೆದುಕೊಂಡಿದೆ. ಆದರೆ ಕೊನೆಯ ಪಂದ್ಯದಲ್ಲಿ ಜಿದ್ದಾಜಿದ್ದಿನ ಪ್ರದರ್ಶನ ನೀಡಲು ಕಾತುರವಾಗಿದೆ ಎನ್ನಬಹುದು.
ಇದನ್ನು ಓದಿ: ಬಿಜೆಪಿಗೆ ಅಡ್ಡದಾರಿಯಲ್ಲಿ ಅಧಿಕಾರ ಹಿಡಿಯುವುದು ಚಾಳಿಯಾಗಿದೆ: ಎಚ್‌ಡಿಕೆ
ಈ ಬಾರಿ ನಿಕೋಲಸ್ ಪೂರನ್ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವು ಇದುವರೆಗೆ ಹದಿಮೂರು ಪಂದ್ಯಗಳನ್ನಾಡಿದೆ. ಆ ಪೈಕಿ, ಆರರಲ್ಲಿ ಗೆಲುವು ಸಾಧಿಸಿದ್ದು, ಏಳರಲ್ಲಿ ಸೋಲು ಅನುಭವಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನ ಗಳಿಸಿದೆ. ಇನ್ನು ಟೂರ್ನಿಯಲ್ಲಿ ಸಮಾಧಾನಕರ ಪ್ರದರ್ಶನ ನೀಡಿದ್ದ ಹೈದರಾಬಾದ್ ತಂಡವು ಪ್ಲೇ ಆಫ್ ಪ್ರವೇಶದ ಅವಕಾಶವನ್ನು ಕಳೆದುಕೊಂಡಿದೆ.
ಪಂಜಾಬ್ ಕಿಂಗ್ಸ್ ತಂಡವನ್ನು ಮಯಾಂಕ್ ಅಗರ್ವಾಲ್ ನಡೆಸುತ್ತಿದ್ದು, ಈ ತಂಡ ಸಹ ಪ್ಲೇ ಆಫ್‌ನಿಂದ ಹೊರಬಿದ್ದಿದೆ. ಇಲ್ಲಿವರೆಗೆ ಆಡಿರುವ ಹದಿಮೂರು ಪಂದ್ಯಗಳ ಪೈಕಿ ಆರರಲ್ಲಿ ಗೆಲುವು ಸಾಧಿಸಿ, ಏಳರಲ್ಲಿ ಸೋಲು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಉಭಯ ತಂಡಗಳು ಸಮಾನ ಅಂಕ ಪಡೆದಿದ್ದರೂ ಸಹ ರನ್‌ರೇಟ್ ವ್ಯತ್ಯಾಸದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಒಂದು ಸ್ಥಾನ ಮೇಲಿದೆ.
ಇದನ್ನು ಓದಿ: Vegetable Price: ಗ್ರಾಹಕರೇ ಗಮನಿಸಿ... ಇಂದಿನ ತರಕಾರಿ ಬೆಲೆ ಹೇಗಿದೆ ಗೊತ್ತಾ?
ಸಂಭಾವ್ಯ ಆಟಗಾರರ ಪಟ್ಟಿ ಇಂತಿದೆ:
ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಪ್ರಿಯಮ್ ಗಾರ್ಗ್, ಗ್ಲೆನ್ ಫಿಲಿಪ್ಸ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (ಕ್ಯಾ&ವಿ.ಕೀ), ವಾಷಿಂಗ್ಟನ್ ಸುಂದರ್, ಫಜಲ್ಹಕ್ ಫಾರೂಕಿ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್
ಪಂಜಾಬ್ ಕಿಂಗ್ಸ್: ಜಾನಿ ಬೈರ್‌ಸ್ಟೋವ್, ಶಿಖರ್ ಧವನ್, ಭಾನುಕಾ ರಾಜಪಕ್ಸೆ, ಲಿಯಾಮ್ ಲಿವಿಂಗ್‌ಸ್ಟೋನ್, ಮಯಾಂಕ್ ಅಗರ್ವಾಲ್ (ಕ್ಯಾ), ಜಿತೇಶ್ ಶರ್ಮಾ (ವಿ.ಕೀ), ಹರ್‌ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಾಹರ್, ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.