ನವದೆಹಲಿ: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ ಐಪಿಎಲ್ ಟೂರ್ನಿಯ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ದೆಹಲಿ ಕ್ಯಾಪಿಟಲ್ಸ್ ಹೀನಾಯ ಸೋಲು ಕಂಡಿತು. ಕಳಪೆ ಪ್ರದರ್ಶನ ನೀಡಿ ಟೂರ್ನಿಯಿಂದ ಹೊರಬಿದ್ದಿದ್ದ ಮುಂಬೈ ತನ್ನ ಜೊತೆಗೆ ದೆಹಲಿಯನ್ನು ಸಹ ಸೀಸನ್‌ನಿಂದ ಹೊರದಬ್ಬಿದೆ.
5 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿದ ರೋಹಿತ್ ಶರ್ಮಾ ಪಡೆ ಆರ್‌ಸಿಬಿ ತಂಡವು ಪ್ಲೇ ಆಫ್ ಪ್ರವೇಶಿಸಲು ಸಹಕಾರಿಯಾಯಿತು. ಈ ಪಂದ್ಯವನ್ನು ಗೆದ್ದಿದ್ದರೆ ದೆಹಲಿಗೆ ಪ್ಲೇ ಆಫ್ ಪ್ರವೇಶಿಸುವ ಉತ್ತಮ ಅವಕಾಶವಿತ್ತು. ಮುಂಬೈ ವಿರುದ್ಧ ರಿಷಭ್ ಪಂತ್ ಪಡೆಯ ಗೆಲುವಿಗೆ ಉತ್ತಮ ಅವಕಾಶವಿತ್ತು. ಆದರೆ, ಸುಲಭವಾಗಿ ಗೆಲ್ಲುವ ಪಂದ್ಯದಲ್ಲಿ ದೆಹಲಿ ಹೀನಾಯ ಸೋಲು ಕಾಣಬೇಕಾಯಿತು. ತಮ್ಮ ತಂಡದ ಸೋಲಿಗೆ ಕಾರಣವೇನು ಅನ್ನೋದನ್ನು ನಾಯಕ ರಿಷಭ್ ಪಂತ್ ಹೇಳಿದ್ದಾರೆ.
ಇದನ್ನೂ ಓದಿ: ಐಪಿಎಲ್ 2023 ನಲ್ಲಿ ಆಡ್ತಾರಾ ಧೋನಿ? ಏನ್ ಹೇಳಿದ್ರು ಖುದ್ದಾಗಿ..
ಈ ತಪ್ಪಿನಿಂದ ದೆಹಲಿ ಸೋಲಬೇಕಾಯಿತು
.@Jaspritbumrah93 set the ball rolling for @mipaltan & bagged the Player of the Match award. 👏 👏
Scorecard ▶️ https://t.co/sN8zo9RIV4#TATAIPL | #MIvDC pic.twitter.com/yU0O225trK
— IndianPremierLeague (@IPL) May 21, 2022
ಮುಂಬೈ ವಿರುದ್ಧ 5 ವಿಕೆಟ್‌ಗಳಿಂದ ಸೋತ ನಂತರ ಮಾತನಾಡಿದ ದೆಹಲಿ ನಾಯಕ ರಿಷಭ್ ಪಂತ್, ‘ತಮ್ಮ ತಂಡಕ್ಕೆ ಉತ್ತಮ ತಂತ್ರ ಮತ್ತು ಕಾರ್ಯನಿರ್ವಹಣೆಯ ಅಗತ್ಯವಿದೆ’ ಎಂದು ಹೇಳಿದ್ದಾರೆ. ‘ನಾವು ಉತ್ತಮವಾಗಿಯೇ ಆಡಿದೇವು. ಆದರೆ ಕೆಲವು ತಪ್ಪುಗಳಿಂದಾಗಿ ಹೀನಾಯವಾಗಿ ಸೋಲಬೇಕಾಯಿತು. ಬೌಲಿಂಗ್ ಮತ್ತು ಫೀಲ್ಡಿಂಗ್‍ನಲ್ಲಿ ನಾವು ಫೇಲ್ ಆಗಿದ್ದರಿಂದ ಸೋಲು ಕಾಣಬೇಕಾಯಿತು. ಟೂರ್ನಿಯುದ್ದಕ್ಕೂ ನಾವು ಇದೇ ತೊಂದರೆಯನ್ನು ಎದುರಿಸಿದ್ದೇವೆ. ಉತ್ತಮ ಕಾರ್ಯತಂತ್ರ ರೂಪಿಸಿ ಅದನ್ನು ಕಾರ್ಯಗತಗೊಳಿಸುವುದು ಮುಖ್ಯ. ಇಡೀ ಟೂರ್ನಿಯಲ್ಲಿ ಇದರ ಕೊರತೆ ಎದುರಾಗಿದೆ. ನಾವು ನಮ್ಮ ತಪ್ಪುಗಳಿಂದ ಪಾಠ ಕಲಿತಿದ್ದೇವೆ ಮತ್ತು ಮುಂದಿನ ವರ್ಷ ಬಲಿಷ್ಠ ತಂಡವಾಗಿ ಮರಳುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
DRS ತೆಗೆದುಕೊಳ್ಳದ ಪಂತ್
Playoffs spot sealed ✅
Congratulations to the @RCBTweets on making it to the #TATAIPL 2022 playoffs! 👏👏 pic.twitter.com/pipXAVUQQg
— IndianPremierLeague (@IPL) May 21, 2022
ಮುಂಬೈ ಇಂಡಿಯನ್ಸ್ ತಂಡದ ಈ ಗೆಲುವಿನಲ್ಲಿ ಟಿಮ್ ಡೇವಿಡ್ ಪಾತ್ರ ಬಹುಮುಖ್ಯವಾಗಿದೆ. ಕೇವಲ 11 ಎಸೆತಗಳಲ್ಲಿ ಅವರು 34 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಒಂದು ಬಾರಿ ಟಿಮ್ ಡೇವಿಡ್ ಕ್ಲೀನ್ ಔಟ್ ಆಗಿದ್ದರು, ಆದರೆ ಅಂಪೈರ್ ಔಟ್ ನೀಡಲಿಲ್ಲ. ಈ ವೇಳೆ ರಿಷಭ್ ಪಂತ್ DRS ರಿವ್ಯೂ ತೆಗೆದುಕೊಳ್ಳಲಿಲ್ಲ. ಆದರೆ, ಟಿಮ್ ಡೇವಿಡ್ ಸ್ಪಷ್ಟವಾಗಿ ಔಟಾಗಿರುವುದು ಬಳಿಕ ಗೊತ್ತಾಯಿತು. ಇದರಿಂದಾಗಿ ದೆಹಲಿಗೆ ದೊಡ್ಡ ಹೊಡೆತ ಬಿದ್ದಂತಾಯಿತು. ಒಂದು ವೇಳೆ ರಿವ್ಯೂ ತೆಗೆದುಕೊಂಡಿದ್ದರೆ ಟಿಮ್ ಡೇವಿಡ್ ಸ್ಫೋಟಕ ಆಟಕ್ಕೆ ಬ್ರೇಕ್ ಬೀಳುತ್ತಿತ್ತು. ದೆಹಲಿ ಗೆಲುವಿನ ಚಾನ್ಸ್ ಮತ್ತಷ್ಟು ಹೆಚ್ಚುತ್ತಿತ್ತು.
ಇದನ್ನೂ ಓದಿ: Sourav Ganguly New House : 40 ಕೋಟಿ ಕೊಟ್ಟು ಹೊಸ ಬಂಗಲೆ ಖರೀದಿಸಿದ ಗಂಗೂಲಿ!
ಕ್ಯಾಚ್ ಕೈಚೆಲ್ಲಿದ ದೆಹಲಿ ಆಟಗಾರರು
ರಿಷಭ್ ಪಂತ್ ಸೇರಿದಂತೆ ದೆಹಲಿಯ ಕೆಲ ಆಟಗಾರರು ಕೆಲವು ಸುಲಭ ಕ್ಯಾಚ್‍ಗಳನ್ನು ಕೈಚೆಲ್ಲಿದ್ದು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು. ಉತ್ತಮವಾಗಿ ಫೀಲ್ಡಿಂಗ್ ಮಾಡಿದ್ದರೆ ಮುಂಬೈ ವಿರುದ್ಧ ದೆಹಲಿ ಗೆಲುವು ಸಾಧಿಸುವ ಎಲ್ಲಾ ಸಾಧ‍್ಯತೆಗಳು ಇದ್ದವು. ಆದರೆ ಕೈಚೆಲ್ಲಿದ ಕ್ಯಾಚ್‍ಗಳಿಂದ ದೆಹಲಿ ಸೋಲು ಕಾಣಬೇಕಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.