ನವದೆಹಲಿ: ಎಸ್ಸೆಲ್ ಗ್ರೂಪ್ ಅಧ್ಯಕ್ಷ ಮತ್ತು ರಾಜ್ಯಸಭಾ ಸಂಸದ ಡಾ. ಸುಭಾಷ್ ಚಂದ್ರ ಅವರು ಶನಿವಾರ ಮುಂಬೈನ ಮೌಂಟ್ ಲಿಟೆರಾ ಸ್ಕೂಲ್ ಇಂಟರ್‌ನ್ಯಾಶನಲ್‌ನ 2022 ರ ತರಗತಿಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು. ಇದೆ ವೇಳೆ ಮೌಂಟ್ ಲಿಟೆರಾದಲ್ಲಿ ನಂಬಿಕೆಯನ್ನು ಇಟ್ಟು ತಮ್ಮ ಮಕ್ಕಳನ್ನು ಪದವಿಗಾಗಿ ಕಳುಹಿಸಿದ ಎಲ್ಲಾ ಪೋಷಕರಿಗೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು.
ಡೇರ್ ಟು ಡ್ರೀಮ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಎಸ್ಸೆಲ್ ಗ್ರೂಪ್ ಅಧ್ಯಕ್ಷರಾದ ಡಾ. ಸುಭಾಷ್ ಚಂದ್ರ ಅವರು ವಿದ್ಯಾರ್ಥಿಗಳಿಗೆ ಯಶಸ್ಸಿನ ಮಂತ್ರ ನೀಡುತ್ತಾ "ಹಳೆಯ ಆಲೋಚನೆಗಳಲ್ಲಿ ಪಶ್ಚಾತ್ತಾಪ ಇರುತ್ತದೆ, ಅದೇ ರೀತಿ ಭವಿಷ್ಯದಲ್ಲಿ ಆತಂಕ ಮತ್ತು ದುಗುಡವಿರುತ್ತದೆ, ಆದ್ದರಿಂದ ಎಲ್ಲರೂ ವರ್ತಮಾನದಲ್ಲಿ ಬದುಕಲು ಪ್ರಯತ್ನಿಸಬೇಕೆಂದು" ಅವರು ಕರೆ ನೀಡಿದರು.
ಇದನ್ನೂ ಓದಿ: Zee Digital TV: ದೇಶದಲ್ಲಿ ಮೊದಲ ಬಾರಿಗೆ ದಕ್ಷಿಣ ಭಾರತದ ಭಾಷೆಗಳಲ್ಲಿ ಬರುತ್ತಿದೆ ಡಿಜಿಟಲ್ ಟಿವಿ
ಇನ್ನು ಮುಂದುವರೆದು ಮಾತನಾಡಿದ ಅವರು "ವರ್ತಮಾನದಲ್ಲಿ ಜೀವಿಸಿ ಮತ್ತು ವಾಸ್ತವವನ್ನು ಒಪ್ಪಿಕೊಳ್ಳಿ. ಏಕೆಂದರೆ ಅದು ಅರ್ಧದಷ್ಟು ನೋವುಗಳನ್ನು ದೂರ ಮಾಡುತ್ತದೆ" ಎಂದು ವಿದ್ಯಾರ್ಥಿಗಳಿಗೆ ಕೀವಿ ಮಾತನ್ನು ಹೇಳಿದರು.
ಇದೇ ವೇಳೆ ತಮ್ಮ ಜೀವನದ ಅನುಭವನ್ನು ಹಂಚಿಕೊಂಡ ಸುಭಾಷ್ ಚಂದ್ರ ಅವರು " 21 ಮೇ 1926 ರಂದು ನನ್ನ ಮುತ್ತಜ್ಜ ಈ ಗ್ರೂಪ್ ನ್ನು ಸ್ಥಾಪಿಸಿದಾಗ ಮತ್ತು ನಮ್ಮ ಕುಟುಂಬವು ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಆ ಕಲಿಕೆಗಳು ಹೇಳುತ್ತವೆ ದುಃಖಗಳು ಎಲ್ಲೆಡೆ ಇವೆ. ಪ್ರತಿಯೊಬ್ಬರೂ ದೊಡ್ಡವರಾಗಲಿ ಸಣ್ಣವರಾಗಲಿ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ." ಎಂದು ಅವರು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು.
ಇದನ್ನೂ ಓದಿ: ಮಹಿಳಾ ಕ್ರೀಡಾ ಸಾಧಕರಿಗೆ ZEE News Fairplay ಪ್ರಶಸ್ತಿ ನೀಡಿ ಗೌರವಿಸಿದ ಜೀ ಮಿಡಿಯಾ
ಇದು ಮುಂಬೈನ ಮೌಂಟ್ ಲಿಟೆರಾ ಸ್ಕೂಲ್ ಇಂಟರ್‌ನ್ಯಾಶನಲ್‌ನಲ್ಲಿ ಪದವಿ ಪಡೆದ ಎರಡನೇ ಬ್ಯಾಚ್ ಮತ್ತು ಮೊದಲ ಆಚರಣೆಯಾಗಿದೆ. ಕಳೆದ ವರ್ಷ ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ ಯಾವುದೇ ಕಾರ್ಯಕ್ರಮ ನಡೆದಿರಲಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.