Women T20 World Cup 2023: ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿದೆ. ಭಾನುವಾರದ ಈ ಗೆಲುವಿನ ನಂತರ ನಾಯಕಿ ಹರ್ಮನ್‌ಪ್ರೀತ್ ಕೌರ್ ತಮ್ಮ ತಂಡದ ಆಟಗಾರರನ್ನು ಹೊಗಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿದೆ ‘ಭೂತ ಗ್ರಾಮ’: ದೆಹಲಿಯ ಈ ಸ್ಥಳದ ಕಥೆ ಕೇಳಿದ್ರೆ ದಂಗಾಗೋದು ಖಂಡಿತ!


ಪಾಕಿಸ್ತಾನ ಭಾರತದ ಮುಂದೆ 150 ರನ್‌ಗಳ ಗುರಿಯನ್ನು ನೀಡಿತ್ತು. ಜೆಮಿಮಾ ರೊಡ್ರಿಗಸ್ ಅವರ ಅಜೇಯ 53 ಮತ್ತು ರಿಚಾ ಘೋಷ್ ಅವರ ಅಜೇಯ 31 ರನ್‌ಗಳ ನೆರವಿನಿಂದ ಭಾರತ 19 ಓವರ್‌ಗಳಲ್ಲಿ 3 ವಿಕೆಟ್‌ಗೆ 151 ರನ್ ಗಳಿಸಿ ಗೆಲುವು ಸಾಧಿಸಿತು. ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಜೆಮಿಮಾ ರೊಡ್ರಿಗಸ್ ಮತ್ತು ರಿಚಾ ಅವರನ್ನು ಹರ್ಮನ್‌ಪ್ರೀತ್ ಶ್ಲಾಘಿಸಿದರು. ಯಾವ ಆಟಗಾರ್ತಿಗೆ ಅವಕಾಶ ಸಿಗುತ್ತದೋ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಹರ್ಮನ್‌ಪ್ರೀತ್ ಹೇಳಿದ್ದಾರೆ.


ಪಂದ್ಯದ ನಂತರ ಮಾತನಾಡಿದ ಹರ್ಮನ್‌ಪ್ರೀತ್, 'ಜೆಮಿಮಾ ಮತ್ತು ರಿಚಾ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ತಂಡದ ಪರ ಉತ್ತಮ ಪ್ರದರ್ಶನ ನೀಡಲು ಎಲ್ಲ ಆಟಗಾರರು ಉತ್ಸುಕರಾಗಿದ್ದಾರೆ. ಯಾರಿಗೆ ಅವಕಾಶ ಸಿಕ್ಕರೂ ಅವರು ಚೆನ್ನಾಗಿಯೇ ಮಾಡುತ್ತಿದ್ದಾರೆ. ಪ್ರತಿಯೊಂದು ಪಂದ್ಯವೂ ಬಹಳ ಮುಖ್ಯ. ಖಂಡಿತವಾಗಿಯೂ ಪಾಕಿಸ್ತಾನದ ವಿರುದ್ಧದ ಪಂದ್ಯವು ದೊಡ್ಡದಾಗಿದೆ. ನಾವು ನೆಟ್ಸ್‌ನಲ್ಲಿ ಸ್ವಲ್ಪ ಸಮಯವನ್ನು ಕಳೆಯಲು ಇಷ್ಟಪಡುತ್ತೇವೆ. ನಾವು ಕೆಲವು ವಿಷಯಗಳಲ್ಲಿ ಕೆಲಸ ಮಾಡಲು ಬಯಸುತ್ತೇವೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: Siddharth-Kiara reception: ಸಿದ್ಧಾರ್ಥ್-ಕಿಯಾರಾ ಆರತಕ್ಷತೆಯಲ್ಲಿ ಆಲಿಯಾ: ಮಾಜಿ ಗೆಳತಿ ಬರುತ್ತಿದ್ದಂತೆ ಸಿದ್ ಮಾಡಿದ್ದೇನು?


ಜೆಮಿಮಾ ಪಂದ್ಯದ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ. ತನ್ನ ಇನ್ನಿಂಗ್ಸ್ ಅನ್ನು ತನ್ನ ಹೆತ್ತವರಿಗೆ ಅರ್ಪಿಸಿ ಮಾತನಾಡಿದ ಅವರು, 'ನನಗೆ ಉತ್ತಮ ಪಾಲುದಾರಿಕೆಯ ಅಗತ್ಯವಿದೆ ಎಂದು ನನಗೆ ತಿಳಿದಿತ್ತು. ನನ್ನ ಪೋಷಕರು ಇಲ್ಲಿದ್ದಾರೆ ಮತ್ತು ನಾನು ಅವರಿಗೆ ಈ ಇನ್ನಿಂಗ್ಸ್ ಅನ್ನು ಅರ್ಪಿಸಲು ಬಯಸುತ್ತೇನೆ. ಕೊನೆಯವರೆಗೂ ಉಳಿದುಕೊಂಡರೆ ಸುಲಭವಾಗಿ ಗೆಲುವು ಸಾಧಿಸಬಹುದು ಎಂದು ತಿಳಿದಿದ್ದೆ. ಸಡಿಲವಾದ ಬೌಲಿಂಗ್ ಮಾಡುತ್ತಾರೆ ಎಂದು ನಮಗೆ ತಿಳಿದಿತ್ತು. ನಾವು ಅದರ ಸಂಪೂರ್ಣ ಲಾಭವನ್ನು ಪಡೆದುಕೊಂಡಿದ್ದೇವೆ” ಎಂದು ಹೇಳಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.