ಬೆಂಗಳೂರು: ವಿಶ್ವದ ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಕ್ರಿಕೆಟ್ ಮಹಾಹಬ್ಬ ‘ವಿಶ್ವಕಪ್ 2023’ರ ದಿನಗಣನೆ ಆರಂಭವಾಗಿದೆ.


COMMERCIAL BREAK
SCROLL TO CONTINUE READING

ಇದು 13ನೇ ಆವೃತಿಯ ವಿಶ್ವಕಪ್ ಆಗಲಿದ್ದು, 2011ರ ನಂತರ ಮರಳಿ ಭಾರತಕ್ಕೆ ಐಸಿಸಿಯ ಒಂದು ಮಹತ್ತರ ಟೂರ್ನಮೆಂಟ್ ಆಯೋಜಿಸುವ ಅವಕಾಶ ಸಿಕ್ಕಿದೆ. 2011ರ ವಿಶ್ವಕಪ್ ಅನ್ನು ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳು ಜಂಟಿಯಾಗಿ ಆಯೋಜಿಸಿದ್ದವು. ಆದರೆ ಈ ಭಾರಿಯ ಸಂಪೂರ್ಣ ಟೂರ್ನಮೆಂಟ್ ಅನ್ನು ಭಾರತದಲ್ಲಿ ನಡೆಸಲು ತೀರ್ಮಾನಿಸಿದ್ದು, ವೇಳಾಪಟ್ಟಿಗೆ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ.


ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿ ಸೇವಿಸುವ ಅಕ್ಕಿ ಬೆಲೆ ಕೆಜಿಗೆ ಎಷ್ಟು ಗೊತ್ತಾ? ಶಾಕ್ ಆಗೋದು ಗ್ಯಾರಂಟಿ


ಈಗಾಗಲೇ ಬಿಸಿಸಿಐ ಮತ್ತು ಐಸಿಸಿ ಈ ಬಗ್ಗೆ ಮಾತುಕತೆ ನಡೆಸಿದ್ದು, ಸ್ಥಳ ಮತ್ತು ದಿನಾಂಕವನ್ನು ಈಗಾಗಲೇ ನಿರ್ಧರಿಸಲಾಗಿದೆ. ಬಾಕಿ ಇರುವ ಎಲ್ಲಾ ಕಾರ್ಯಗಳನ್ನು ಮುಗಿಸಿಕೊಳ್ಳಲಾಗುತ್ತದೆ. ಮಾರ್ಚ್ 31ರಿಂದ ಐಪಿಎಲ್ ಹಂಗಾಮ ಶುರುವಾಗಲಿದ್ದು, ಇದರ ನಡುವೆ ಐಸಿಸಿ ಮತ್ತು ಬಿಸಿಸಿಐ ಜನರಿಗೆ ಸಿಹಿಸುದ್ದಿ ಕೊಡಲು ಸಜ್ಜಾಗಿದೆ. 2 ತಿಂಗಳ ಚುಟುಕು ಕ್ರಿಕೆಟ್‍ನ ರಸದೌತಣದ ನಂತರ ವಿಶ್ವ ಕ್ರಿಕೆಟ್‍ನ ಹಬ್ಬದ ವಾತಾವರಣ ಕಣ್ಣು ತುಂಬಿಕೊಳ್ಳಲು ಭಾರತೀಯರು ಸಜ್ಜಾಗಿದ್ದಾರೆ.


ಮಾಹಿತಿಯ ಪ್ರಕಾರ ವಿಶ್ವಕಪ್ 2023ರ ಮೊದಲ ಪಂದ್ಯ ಇದೆ ಅಕ್ಟೋಬರ್ 5ರಂದು ನಡೆಸಲು ತೀರ್ಮಾನಿಸಲಾಗಿದೆ. ಇದೆ ನವೆಂಬರ್ 19ರಂದು ಫೈನಲ್ ಪಂದ್ಯ ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವಾಗಿರುವ ಗುಜರಾತ್‍ನ ಶ್ರೀ ನರೇಂದ್ರ ಮೋದಿ ಮೈದಾನದಲ್ಲಿ ನಡೆಸಲಾಗುವುದು ಎಂದು ತಿಳಿದು ಬಂದಿದೆ. ಈ ಕುರಿತ ಎಲ್ಲಾ ತಯಾರಿಗಳನ್ನು ಈಗಾಗಲೇ ಬಿಸಿಸಿಐ ನಡೆಸುತ್ತಿದೆ.


ಇದನ್ನೂ ಓದಿ: Richest Woman Cricketer: ಸ್ಮೃತಿ ಮಂಧನಾ ಅಲ್ಲ… ಈ ದಿಗ್ಗಜ ಆಟಗಾರ್ತಿಯೇ ಮಹಿಳಾ ಕ್ರಿಕೆಟರ್’ಗಳ ಪೈಕಿ ಅತ್ಯಂತ ಶ್ರೀಮಂತೆ!


ವಿಶ್ವಕಪ್ 2023ರ ಸಂಭಾವ್ಯ ಪಟ್ಟಿಯಲ್ಲಿ ಪಾಕಿಸ್ತಾನ ತಂಡವು ಇದೆ. ಪಾಕಿಸ್ತಾನ ಆಟಗಾರರು ಮತ್ತು ತಂಡದ ಎಲ್ಲಾ ಸದಸ್ಯರ ವೀಸಾ ಕ್ಲಿಯರೆನ್ಸ್ ಗಾಗಿ ಬಿಸಿಸಿಐ ಈಗಾಗಲೇ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸಿದೆ ಎನ್ನಲಾಗುತ್ತಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.