Suryakumar Yadavಗೆ ಕೊನೆಗೂ ಸಿಕ್ತು ಮಹತ್ವದ ಗುರು ಮಂತ್ರ: 3ನೇ ಏಕದಿನದಲ್ಲಿ ಸ್ಫೋಟಕ ಇನ್ನಿಂಗ್ಸ್ ಕನ್ಫರ್ಮ್!

Aaron Finch Statement on Suryakumar Yadav: ಮೂರನೇ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾದ ಮಾಜಿ ನಾಯಕ ಆ್ಯರನ್ ಫಿಂಚ್ ಸೂರ್ಯಕುಮಾರ್’ಗೆ ಸಲಹೆಯೊಂದನ್ನು ನೀಡಿದ್ದು, ತಮ್ಮ ಇನ್ನಿಂಗ್ಸ್‌’ನ ಆರಂಭಿಕ ಎಸೆತಗಳಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ

Written by - Bhavishya Shetty | Last Updated : Mar 21, 2023, 06:30 PM IST
    • ಸೂರ್ಯಕುಮಾರ್ ಯಾದವ್ ಸರಣಿಯ ಮೊದಲ ಪಂದ್ಯದಲ್ಲಿ ಕೇವಲ ಒಂದು ಎಸೆತವನ್ನು ಆಡಿ ಪೆವಿಲಿಯನ್‌ಗೆ ಮರಳಿದರು.
    • ಎರಡನೇ ODIನಲ್ಲಿ ತಂಡವು ಅವರ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಿತ್ತು.
    • ಆದರೆ ಈ ಪಂದ್ಯದಲ್ಲೂ ಅವರು ಮೊದಲ ಎಸೆತದಲ್ಲಿಯೇ ತಮ್ಮ ವಿಕೆಟ್ ಕಳೆದುಕೊಂಡರು.
Suryakumar Yadavಗೆ ಕೊನೆಗೂ ಸಿಕ್ತು ಮಹತ್ವದ ಗುರು ಮಂತ್ರ: 3ನೇ ಏಕದಿನದಲ್ಲಿ ಸ್ಫೋಟಕ ಇನ್ನಿಂಗ್ಸ್ ಕನ್ಫರ್ಮ್! title=
Suryakumar Yadav

Aaron Finch Statement on Suryakumar Yadav: ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇದುವರೆಗೆ ಸಂಪೂರ್ಣ ವಿಫಲರಾಗಿದ್ದಾರೆ. ಸೂರ್ಯಕುಮಾರ್ ಯಾದವ್ ಸರಣಿಯ ಮೊದಲ ಪಂದ್ಯದಲ್ಲಿ ಕೇವಲ ಒಂದು ಎಸೆತವನ್ನು ಆಡಿ ಪೆವಿಲಿಯನ್‌ಗೆ ಮರಳಿದರು. ಎರಡನೇ ODIನಲ್ಲಿ ತಂಡವು ಅವರ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಿತ್ತು, ಆದರೆ ಈ ಪಂದ್ಯದಲ್ಲೂ ಅವರು ಮೊದಲ ಎಸೆತದಲ್ಲಿಯೇ ತಮ್ಮ ವಿಕೆಟ್ ಕಳೆದುಕೊಂಡರು. ಆದರೆ  ಮೂರನೇ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾದ ಮಾಜಿ ನಾಯಕ ಆ್ಯರನ್ ಫಿಂಚ್ ಸೂರ್ಯಕುಮಾರ್ ಗೆ ಮಹತ್ವದ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Virat Kohli Dance: ಶತಕ ಬಾರಿಸಲು ರೆಡಿ ಡ್ಯಾನ್ಸ್‌ಗೂ  ರೆಡಿ  ವಿರಾಟ್‌ ಕೊಹ್ಲಿ

ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಭಾರತದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಔಟಾಗಿರುವುದನ್ನು ವಿಶ್ಲೇಷಿಸಿದ ಆಸ್ಟ್ರೇಲಿಯಾದ ಮಾಜಿ ನಾಯಕ ಆರೋನ್ ಫಿಂಚ್, ಸೂರ್ಯ ತಮ್ಮ ಇನ್ನಿಂಗ್ಸ್‌’ನ ಆರಂಭಿಕ ಎಸೆತಗಳಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಕಠಿಣ ಸಮಯವನ್ನು ಎದುರಿಸಿದ್ದಾರೆ. ಅವರು ಇನ್ನಿಂಗ್ಸ್‌’ನ ಮೊದಲ ಎಸೆತದಲ್ಲಿ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರಿಂದ ಎರಡೂ ಬಾರಿ ಔಟಾದರು. ಸೂರ್ಯ ಅವರನ್ನು ಎರಡು ಪಂದ್ಯಗಳಲ್ಲಿ ಸಹ ಗೋಲ್ಡನ್ ಡಕ್ ಮಾಡಿದ್ದಾರೆ.

'ಭಾರತೀಯ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅವರು ODI ಸರಣಿಯಲ್ಲಿ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಬಳಸಿಕೊಳ್ಳಲು ಸಾಧ್ಯವಾಗದ ಕಾರಣ ಸ್ವತಃ ನಿರಾಶೆಗೊಳ್ಳುತ್ತಾರೆ. ಗಿಲ್ ಅವರು ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ” ಎಂದು ಹೇಳಿದ್ದಾರೆ.

ಮಾತು ಮುಂದುವರೆಸಿದ ಅವರು, “ನೀವು ಉತ್ತಮ ಬಾಲ್‌’ನಲ್ಲಿ ಔಟಾದರೆ ಅದನ್ನು ಒಪ್ಪಿಕೊಳ್ಳಬಹುದು. ಆದರೆ ನೀವು ಉತ್ತಮ ಫಾರ್ಮ್‌’ನಲ್ಲಿದ್ದಾಗ ಈ ರೀತಿ ಔಟ್ ಆಗುವುದು ನಿರಾಶೆಯನ್ನುಂಟು ಮಾಡುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್‍ಗೆ ತಂತ್ರಜ್ಞಾನದ ಕೊಡುಗೆ ಅಪಾರ: ಡೇಟಾ ವಿಶ್ಲೇಷಣೆ ಬಗ್ಗೆ ರಾಹುಲ್ ದ್ರಾವಿಡ್ ಹೇಳಿದ್ದೇನು?

ಸೂರ್ಯಕುಮಾರ್ ಯಾದವ್ ಫೆಬ್ರವರಿ 2022ರ ಸಂದರ್ಭದಲ್ಲಿ ಏಕದಿನದಲ್ಲಿ 64 ರನ್‌’ಗಳ ಇನ್ನಿಂಗ್ಸ್ ಆಡಿದ್ದರು. ಅಂದಿನಿಂದ ಯಾವುದೇ ದೊಡ್ಡ ಇನ್ನಿಂಗ್ಸ್‌ ಕಂಡಿಲ್ಲ. ಫೆಬ್ರವರಿ 2022 ರಿಂದ ಈ ಬ್ಯಾಟ್ಸ್‌ಮನ್ 13 ಪಂದ್ಯಗಳನ್ನು ಆಡಿದ್ದಾರೆ. ಆದರೆ ಯಾವುದೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಅವರ ಬ್ಯಾಟ್‌’ನಿಂದ ಕೇವಲ 2 ಬಾರಿ 30ಕ್ಕೂ ಹೆಚ್ಚು ರನ್‌ಗಳು ಹೊರಬಂದಿದೆ. ಜೊತೆಗೆ 10 ರನ್‌’ಗಳಿಗಿಂತ ಕಡಿಮೆ ಗಳಿಸಿ ಕೂಡ ಪೆವಿಲಿಯನ್‌ಗೆ ಮರಳಿದ್ದಾರೆ. ಈ ಸರಣಿಯಲ್ಲಿ ಅವರಿಗೆ ಇನ್ನೂ ಖಾತೆ ತೆರೆಯಲು ಸಾಧ್ಯವಾಗಿಲ್ಲ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News