Virat Kohli: ವಿರಾಟ್ ಕೊಹ್ಲಿ ಸೇವಿಸುವ ಅಕ್ಕಿ ಬೆಲೆ ಕೆಜಿಗೆ ಎಷ್ಟು ಗೊತ್ತಾ? ಶಾಕ್ ಆಗೋದು ಗ್ಯಾರಂಟಿ

Virat Kohli Fitness: ವಿರಾಟ್ ಕೊಹ್ಲಿ ಸಾಮಾನ್ಯವಾಗಿ ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಹೀಗಾಗಿಯೇ ಗ್ಲುಟನ್ ಮುಕ್ತವಾಗಿರುವ ಅಕ್ಕಿಯನ್ನು ಸೇವನೆ ಮಾಡುತ್ತಾರೆ. ಇದರಲ್ಲಿ ಕಾರ್ಬೋಹೈಡ್ರೇಟ್‌ ಕಡಿಮೆ ಇದ್ದು, ಸರಳವಾದ ರುಚಿಯನ್ನು ಹೊಂದಿರುತ್ತದೆ. ಈ ಅಕ್ಕಿಯ ಬೆಲೆ ಕೆಜಿಗೆ ಸುಮಾರು 400 ರಿಂದ 500 ರೂ.ಇದೆ.

Written by - Bhavishya Shetty | Last Updated : Mar 21, 2023, 08:36 PM IST
    • ವಿರಾಟ್ ಕೊಹ್ಲಿ ಯಾವಾಗಲೂ ತಮ್ಮ ಫಿಟ್ನೆಸ್‌ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ
    • ಕಾರ್ಬೋಹೈಡ್ರೇಟ್‌ ಹೆಚ್ಚಿರುವ ಆಹಾರಗಳನ್ನು ಕೊಹ್ಲಿ ಸೇವಿಸುವುದಿಲ್ಲ.
    • ಅದರ ಬದಲಾಗಿ ವಿವಿಧ ಪದಾರ್ಥಗಳಿಂದ ಮಾಡಿದ ಬ್ರೆಡ್ ಅನ್ನು ಮಾತ್ರ ತಿನ್ನುತ್ತಾರೆ.
Virat Kohli: ವಿರಾಟ್ ಕೊಹ್ಲಿ ಸೇವಿಸುವ ಅಕ್ಕಿ ಬೆಲೆ ಕೆಜಿಗೆ ಎಷ್ಟು ಗೊತ್ತಾ? ಶಾಕ್ ಆಗೋದು ಗ್ಯಾರಂಟಿ title=
Virat Kohli fitness

Virat Kohli Fitness: ಭಾರತದ ಮಾಜಿ ನಾಯಕ, ರನ್ ಮೆಷಿನ್ ಎಂದೇ ಖ್ಯಾತಿ ಪಡೆದ ವಿರಾಟ್ ಕೊಹ್ಲಿ ಯಾವಾಗಲೂ ತಮ್ಮ ಫಿಟ್ನೆಸ್‌ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಹೀಗಾಗಿಯೇ ಮೊಸರು, ಡೈರಿ ಉತ್ಪನ್ನಗಳು, ಗೋಧಿ ಹಿಟ್ಟಿನ ಚಪಾತಿಗಳನ್ನು ಅವರು ತಿನ್ನುವುದಿಲ್ಲ. ತಮ್ಮ ಆಹಾರದ ಬಗ್ಗೆ ಸಾಕಷ್ಟು ಎಚ್ಚರಿಕೆಯನ್ನು ವಹಿಸುತ್ತಾರೆ.

ಇದನ್ನೂ ಓದಿ: ಕ್ರಿಕೆಟ್‍ಗೆ ತಂತ್ರಜ್ಞಾನದ ಕೊಡುಗೆ ಅಪಾರ: ಡೇಟಾ ವಿಶ್ಲೇಷಣೆ ಬಗ್ಗೆ ರಾಹುಲ್ ದ್ರಾವಿಡ್ ಹೇಳಿದ್ದೇನು?

ಕಾರ್ಬೋಹೈಡ್ರೇಟ್‌ ಹೆಚ್ಚಿರುವ ಆಹಾರಗಳನ್ನು ಕೊಹ್ಲಿ ಸೇವಿಸುವುದಿಲ್ಲ. ಅದರ ಬದಲಾಗಿ ವಿವಿಧ ಪದಾರ್ಥಗಳಿಂದ ಮಾಡಿದ ಬ್ರೆಡ್ ಅನ್ನು ಮಾತ್ರ ತಿನ್ನುತ್ತಾರೆ. ಇನ್ನು ಸಾಮಾನ್ಯವಾಗಿ ಅನ್ನ ದೇಹಕ್ಕೆ ಹೆಚ್ಚು ಶಕ್ತಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಕೊಹ್ಲಿ ಸಾಮಾನ್ಯವಾಗಿ ಬಳಕೆ ಮಾಡುವ ಅನ್ನವನ್ನು ಸೇವಿಸುವುದಿಲ್ಲ.

ಸಾಮಾನ್ಯ ಅನ್ನದ ಬದಲು ಸ್ಪೆಷಲ್ ಅನ್ನವನ್ನು ಕೊಹ್ಲಿ ತಿನ್ನುತ್ತಾರೆ. ಈ ಅಕ್ಕಿಯನ್ನು ಆಹಾರ ಸಂಸ್ಕರಣಾ ಘಟಕದಲ್ಲಿ ವಿಶೇಷ ರೀತಿಯಲ್ಲಿ ತಯಾರಿಸಲಾಗುತ್ತದೆ. ಗ್ಲುಟನ್ ಮುಕ್ತವಾಗಿರುವ ಈ ಅಕ್ಕಿಯು ಕಾರ್ಬೋಹೈಡ್ರೇಟ್‌ಗಳಲ್ಲಿ ಕಡಿಮೆ ಮತ್ತು ಸರಳವಾದ ರುಚಿಯನ್ನು ಹೊಂದಿರುತ್ತದೆ. ಆದರೆ ಈ ಅಕ್ಕಿಯ ಬೆಲೆ ಕೆಜಿಗೆ ಸುಮಾರು 400 ರಿಂದ 500 ರೂ.ಇದೆ.

ಫಿಟ್’ನೆಸ್ ಗಾಗಿ ಹಲವು ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಬೇಕಾಯಿತು. ಹಾಲಿನ ಉತ್ಪನ್ನಗಳನ್ನು ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇನೆ. ಅಷ್ಟೇ ಅಲ್ಲ ಗೋಧಿಯಿಂದ ಮಾಡಿದ ಬ್ರೆಡ್ ಕೂಡ ತಿನ್ನುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿ ಹೇಳಿದ್ದರು.

ಫಿಟ್ ನೆಸ್ ಗಾಗಿ ಹಲವು ಸಿಹಿ ತಿಂಡಿಗಳನ್ನು ತಿನ್ನುವುದನ್ನೂ ಬಿಟ್ಟಿದ್ದೇನೆ. ಇದು ಹೆಚ್ಚು ಫಿಟ್ ಆಗಿರಲು ಸಹಕಾರಿಯಾಯಿತು ಎಂದು ತಮ್ಮ ಫಿಟ್ ನೆಸ್ ಬಗ್ಗೆ ಮಾಹಿತಿ ನೀಡಿದ್ದಾರೆ. 34ರ ಹರೆಯದಲ್ಲೂ ಕೊಹ್ಲಿ ತುಂಬಾ ಫಿಟ್ ಆಗಿದ್ದು, ಅದನ್ನೇ ಮೈಂಟೇನ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Virat Kohli Dance: ಶತಕ ಬಾರಿಸಲು ರೆಡಿ ಡ್ಯಾನ್ಸ್‌ಗೂ  ರೆಡಿ  ವಿರಾಟ್‌ ಕೊಹ್ಲಿ

ಚೋಲೆ ಬಟೋರೆಯು ಕೊಹ್ಲಿಯ ನೆಚ್ಚಿನ ಆಹಾರಗಳಲ್ಲಿ ಒಂದಾಗಿದೆ. ಆದರೆ ತಮ್ಮ ಆಟ ಹಾಗೂ ಫಿಟ್ ನೆಸ್ ನತ್ತ ಹೆಚ್ಚು ಗಮನ ಹರಿಸುವ ಕೊಹ್ಲಿ ಚೋಲೆ ಬಟೋರೆ ಸೇವನೆಯನ್ನೂ ಕಡಿಮೆ ಮಾಡಿದ್ದಾರೆ. ಹಾಗೆಯೇ ಬೆಳಗಿನ ಉಪಾಹಾರದ ಬಗ್ಗೆ ಮಾತನಾಡುವ ಕೊಹ್ಲಿ ಮೂರು ಮೊಟ್ಟೆ, ಒಂದು ಮೊಟ್ಟೆಯ ಆಮ್ಲೆಟ್‌ನೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರಂತೆ. ಊಟದಲ್ಲಿ ಬೇಯಿಸಿದ ಚಿಕನ್, ಹಿಸುಕಿದ ಆಲೂಗಡ್ಡೆ, ಪಾಲಕ್ ಮತ್ತು ತರಕಾರಿಗಳನ್ನು ಸಹ ತಿನ್ನುತ್ತಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News