ಸೆಮಿ ಫೈನಲ್ ನಲ್ಲಿ ಪಾಕ್ ಜೊತೆ ಸೆಣೆಸಲಿದೆ ಭಾರತ ! ಹೇಗೆ ಇಲ್ಲಿದೆ ನೋಡಿ ಲೆಕ್ಕಾಚಾರ
World Cup 2023 :ಐದನೇ ಸ್ಥಾನದಲ್ಲಿರುವ ಪಾಕಿಸ್ತಾನ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದರೆ, ಉಭಯ ದೇಶಗಳ ನಡುವೆ ಮೊದಲ ಸೆಮಿಫೈನಲ್ ನವೆಂಬರ್ 15 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.
World Cup 2023 : ವಿಶ್ವಕಪ್ 2023 ರಲ್ಲಿ ಸೆಮಿಫೈನಲ್ ತಲುಪುವ ಪಾಕಿಸ್ತಾನ ಕ್ರಿಕೆಟ್ ತಂಡದ ಕನಸು ನನಸಾಗುವುದಿಲ್ಲ ಎಂದೇ ಕ್ರಿಕೆಟ್ ತಜ್ಞರು ಹೇಳುತ್ತಿರುವುದು. ಪಂದ್ಯಾವಳಿಯ ಮೊದಲು, 2023 ರ ವಿಶ್ವಕಪ್‌ನ ಸೆಮಿಫೈನಲ್‌ಗೆ ತಲುಪಲು ಪಾಕಿಸ್ತಾನವನ್ನು ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. 2023ರ ವಿಶ್ವಕಪ್‌ನ ಮೊದಲ ಎರಡು ಸತತ ಪಂದ್ಯಗಳಲ್ಲಿ ನೆದರ್‌ಲ್ಯಾಂಡ್ಸ್ ಮತ್ತು ಶ್ರೀಲಂಕಾವನ್ನು ಸೋಲಿಸುವ ಮೂಲಕ ಪಾಕಿಸ್ತಾನ ತನ್ನ ಶಕ್ತಿಯನ್ನು ಪ್ರದರ್ಶಿಸಿತ್ತು. ಆದರೆ, ಇದ್ದಕ್ಕಿದ್ದಂತೆ ಈ ತಂಡದ ಲಯ ತಪ್ಪಿತು. ಮೊದಲೆರಡು ಪಂದ್ಯಗಳನ್ನು ಗೆದ್ದುಕೊಂಡಿದ್ದ ಪಾಕಿಸ್ತಾನ ಮುಂದಿನ ಮೂರು ಪಂದ್ಯಗಳಲ್ಲಿ ಸೋಲನುಭವಿಸಬೇಕಾಯಿತು.
2023ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆಯೇ? :
ಭಾರತ, ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ಭಾರೀ ಅಂತರದ ಸೋಲು ಕಂಡಿದೆ. ಪಾಕಿಸ್ತಾನ ತಂಡ ಐದು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು ಮೂರು ಪಂದ್ಯಗಳನ್ನು ಕೈ ಚೆಲ್ಲುವ ಮೂಲಕ ನಾಲ್ಕು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಪಾಕಿಸ್ತಾನದ ನೆಟ್ ರನ್ ರೇಟ್ ಕೂಡಾ ಕಳಪೆಯಾಗಿದೆ. ಪ್ರಸ್ತುತ ಪಾಕಿಸ್ತಾನ ಕ್ರಿಕೆಟ್ ತಂಡದ ನಿವ್ವಳ ರನ್ ರೇಟ್ -0.400. ಆದರೆ, ಪಾಕಿಸ್ತಾನ ಸೆಮಿ ಫೈನಲ್ ತಲುಪಬಹುದಾದ ಸಮೀಕರಣ ಕೂಡಾ ರೂಪುಗೊಳ್ಳಬಹುದು,. ಈ ಮೂಲಕ ಮತ್ತೆ ಸೆಮಿಫೈನಲ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಬಹುದು.
ಇದನ್ನೂ ಓದಿ : ಲಂಕಾ ದಿಗ್ಗಜನ ವಿಶ್ವದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್! ಇಂಗ್ಲೆಂಡ್ ವಿರುದ್ಧ ಕೊಹ್ಲಿಗಿದೆ ಇತಿಹಾಸ ಸೃಷ್ಟಿಸುವ ಅವಕಾಶ
ಭಾರತ-ಪಾಕಿಸ್ತಾನ ನಡುವೆ ಸೆಮಿಫೈನಲ್ ಪಂದ್ಯಗಳು ಸಾಧ್ಯ :
ಟೀಮ್ ಇಂಡಿಯಾ ಇದುವರೆಗೆ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಸೋಲಿಸಿದೆ. 2023ರ ವಿಶ್ವಕಪ್‌ನಲ್ಲಿ ಸತತ ಐದು ಪಂದ್ಯಗಳನ್ನು ಗೆದ್ದಿರುವ ಟೀಮ್ ಇಂಡಿಯಾ 10 ಅಂಕಗಳನ್ನು ಹೊಂದಿದ್ದು, 2023ರ ವಿಶ್ವಕಪ್‌ನ ಅಂಕಪಟ್ಟಿಯಲ್ಲಿ ಟೀಂ ಇಂಡಿಯಾ ಅಗ್ರ ಸ್ಥಾನಕ್ಕೇರಿದೆ. ವಿಶ್ವಕಪ್ ಸೆಮಿ ಫೈನಲ್ ತಲುಪಲು ಭಾರತ ಕೇವಲ 2 ಪದ್ಯಗಲ್ಲಿ ಗೆಲ್ಲಬೇಕು. ಭಾರತ ತನ್ನ ಮುಂದಿನ ನಾಲ್ಕು ಪಂದ್ಯಗಳನ್ನು ಇಂಗ್ಲೆಂಡ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧ ಆಡಬೇಕಾಗಿದೆ. ಟೀಮ್ ಇಂಡಿಯಾದ ಫಾರ್ಮ್ ನೋಡಿದರೆ, ಅದು ತನ್ನ ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರ ತಂಡವಾಗಿ ಲೀಗ್ ಹಂತವನ್ನು ಕೊನೆಗೊಳಿಸಬಹುದು.
ಮೊದಲ ಸೆಮಿಫೈನಲ್ ಪಂದ್ಯವು ನಂಬರ್-1 ಮತ್ತು ನಂಬರ್-4 ತಂಡದ ನಡುವೆ :
ಭಾರತ ಲೀಗ್ ಹಂತವನ್ನು ಪಾಯಿಂಟ್ ಪಟ್ಟಿಯಲ್ಲಿ ಅಗ್ರ ತಂಡವಾಗಿ ಕೊನೆಗೊಳಿಸಿ, ಪಾಕಿಸ್ತಾನ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದರೆ ಉಭಯ ದೇಶಗಳ ನಡುವೆ ಮೊದಲ ಸೆಮಿಫೈನಲ್ ನವೆಂಬರ್ 15 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಪಾಕಿಸ್ತಾನ ತನ್ನ ಮುಂದಿನ ನಾಲ್ಕು ಪಂದ್ಯಗಳನ್ನು ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಆಡಬೇಕಾಗಿದೆ. ಪಾಕ್ ತಂಡ ವಿಶ್ವಕಪ್ 2023 ರ ಸೆಮಿಫೈನಲ್‌ನಲ್ಲಿ ಸ್ಥಾನ ಗಳಿಸಬೇಕಾದರೆ ಮುಂದಿನ ಎಲ್ಲಾ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆಲ್ಲಬೇಕು.
ಇದನ್ನೂ ಓದಿ : ಇಂಗ್ಲೆಂಡ್ ಪಂದ್ಯದಿಂದ ರೋಹಿತ್-ಕೊಹ್ಲಿ ರೂಲ್ಡೌಟ್! ಇನ್ಮುಂದೆ 30ರ ಹರೆಯದ ಈ ರಣಬೇಟೆಗಾರನೇ ಟೀಂ ಇಂಡಿಯಾದ ಕ್ಯಾಪ್ಟನ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ