ಇಮ್ರಾನ್ ಖಾನ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದಕ್ಕೆ ಈ ಆಟಗಾರನನ್ನು ವಿಶ್ವಕಪ್’ನಿಂದಲೇ ಹೊರಗಿಟ್ಟ ಟೀಂ!

Naseem Shah Selfie with Imran Khan: ಪಾಕಿಸ್ತಾನದ ಟಿವಿ ಚಾನೆಲ್‌’ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಿರಿಯ ಕ್ರೀಡಾ ಪತ್ರಕರ್ತ ಮತ್ತು ಬರಹಗಾರ ಅಯಾಜ್ ಮೆಮನ್ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Written by - Bhavishya Shetty | Last Updated : Oct 25, 2023, 03:16 PM IST
    • ಪಾಕಿಸ್ತಾನ ಕ್ರಿಕೆಟ್ ತಂಡ ವಿಶ್ವಕಪ್ ಟೂರ್ನಿಯುದ್ದಕ್ಕೂ ಕಳಪೆ ಪ್ರದರ್ಶನ ನೀಡಿದೆ
    • ಭಾರತ, ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ತಂಡಗಳ ಎದುರು ಪಾಕ್’ಗೆ ಸೋಲು
    • ಟಿವಿ ಚಾನೆಲ್‌’ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್
ಇಮ್ರಾನ್ ಖಾನ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದಕ್ಕೆ ಈ ಆಟಗಾರನನ್ನು ವಿಶ್ವಕಪ್’ನಿಂದಲೇ ಹೊರಗಿಟ್ಟ ಟೀಂ! title=
naseem shah imran khan selfie controversy

Naseem Shah Selfie with Imran Khan: ಶ್ರೇಷ್ಠ ಬ್ಯಾಟ್ಸ್‌’ಮನ್ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ಕ್ರಿಕೆಟ್ ತಂಡ ವಿಶ್ವಕಪ್ ಟೂರ್ನಿಯುದ್ದಕ್ಕೂ ಕಳಪೆ ಪ್ರದರ್ಶನ ನೀಡಿದೆ. ಆರಂಭದಲ್ಲಿ ಉತ್ತಮವಾಗಿದ್ದರೂ ಸಹ ಆ ಬಳಿಕ ಸತತವಾಗಿ 3 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ. ಭಾರತ, ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನದಂತಹ ತಂಡಗಳ ಎದುರು ಪಾಕ್ ಸೋಲೊಪ್ಪಿಕೊಂಡಿತ್ತು.

ಇದನ್ನೂ ಓದಿ: ತುಪ್ಪವನ್ನು ದೇಹದ ಈ ಭಾಗಕ್ಕೆ ಹಚ್ಚಿದರೆ ಶಾಶ್ವತವಾಗಿ ನಿವಾರಣೆಯಾಗುವುದು ಬಿಳಿ ಕೂದಲಿನ ಸಮಸ್ಯೆ 

ಈ ನಡುವೆ ಪಾಕಿಸ್ತಾನದ ಟಿವಿ ಚಾನೆಲ್‌’ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಿರಿಯ ಕ್ರೀಡಾ ಪತ್ರಕರ್ತ ಮತ್ತು ಬರಹಗಾರ ಅಯಾಜ್ ಮೆಮನ್ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಪಾಕಿಸ್ತಾನದ ಹಿರಿಯ ಪತ್ರಕರ್ತ ಡಾ.ನೋಮನ್ ನಿಯಾಜ್ ತಂಡದ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ನಸೀಮ್ ಶಾ, ಇಮ್ರಾನ್ ಖಾನ್ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಇದೇ ಕಾರಣದಿಂದಾಗಿ ಅವರನ್ನು ತಂಡದಿಂದ ಕೈಬಿಡಲಾಯಿತು ಎಂಬ ವದಂತಿಗಳು ಪ್ರಸ್ತುತ ಕೇಳಿಬರುತ್ತಿದೆ. ಆದರೆ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ವಿಚಾರ ಅದಾದ ನಂತರ ಬೆಳಕಿಗೆ ಬಂತು. ಇದೀಗ ಸೆಲ್ಫಿ ತೆಗೆದುಕೊಂಡ ಕಾರಣದಿಂದಲೇ ಅವರನ್ನು ತಂಡದಿಂದ ಕೈಬಿಡಲಾಗಿದೆಯೇ ಎಂಬ ವಿಚಾರದ ಬಗ್ಗೆ ನಮಗೆ ಸ್ಪಷ್ಟನೆ ನೀಡುವಿರಾ ಎಂಬ ಪ್ರಶ್ನೆಯನ್ನು ನೋಮನ್ ನಿಯಾಜ್ ಅವರಿಗೆ ಕೇಳಲಾಯಿತು.

ಈ ಬಗ್ಗೆ ಮಾತನಾಡಿದ ನೋಮನ್ ನಿಯಾಜ್, “ಖಾನ್ ಸಾಹೇಬ್’ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇದು ತಪ್ಪು ಮತ್ತು ವದಂತಿಯಷ್ಟೇ. ನಸೀಮ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಫೋಟೋದಲ್ಲಿ, ಅವರು ಖಾನ್ ಅವರನ್ನು ನೋಡುತ್ತಿಲ್ಲ. ಬೇರೆಲ್ಲೋ ನೋಡುತ್ತಿದ್ದಾರೆ. ನಸೀಮ್ ಅವರ ಭುಜಕ್ಕೆ ಗಾಯವಾಗಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು ಸಮಸ್ಯೆಗಳನ್ನು ಎದುರಿಸಿದ್ದರು” ಎಂದಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್ ವಿರುದ್ದ ಹಾರ್ದಿಕ್ ಪಾಂಡ್ಯನನ್ನು ಕಣಕ್ಕಿಳಿಸುತ್ತಾರೆಯೇ ರೋಹಿತ್ ಶರ್ಮಾ? ಇಲ್ಲಾ ಈ ಆಟಗಾರನಿಗೆ ನೀಡುತ್ತಾರಾ ಅವಕಾಶ?

“ನಸೀಮ್ ಲೀಗ್ ಕ್ರಿಕೆಟ್ ಆಡಿದ್ದರು. ಕೆಲಸದ ಹೊರೆ ನಿರ್ವಹಿಸಲು ಸಾಧ್ಯವಾಗಲಿಲ್ಲ. ನಿರಂತರ ಆಟದಿಂದಾಗಿ, ಅಫ್ಘಾನಿಸ್ತಾನ ವಿರುದ್ಧದ ಸರಣಿಯ ನಂತರ ಗಾಯವು ಉಲ್ಬಣಗೊಂಡಿತು. ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಅವನು ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News