BCCI ನಿರ್ಧಾರಕ್ಕೆ Yuvraj Singh ಅಸಮಾಧಾನ, ತಂದೆ ಯೋಗರಾಜ್ ಸಿಂಗ್ ಹೇಳಿದ್ದೇನು?
ಈ ತಿಂಗಳಿನಿಂದ ಪ್ರಾರಂಭವಾಗುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪಂಜಾಬ್‌ನಿಂದ ಸಂಭವನೀಯ 30 ಆಟಗಾರರಲ್ಲಿ ಯುವರಾಜ್ ಸಿಂಗ್ (Yuvaraj Singh) ಸೇರಿದ್ದಾರೆ.
ನವದೆಹಲಿ: ಭಾರತದ ಸ್ಟಾರ್ ಕ್ರಿಕೆಟಿಗ ಯುವರಾಜ್ ಸಿಂಗ್ ಅವರಿಗೆ ಇತ್ತೀಚೆಗೆ ಬಿಸಿಸಿಐ ಕಹಿ ಸುದ್ದಿಯೊಂದನ್ನು ನೀಡಿದೆ. ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತದ ಈ ಮಾಜಿ ಬ್ಯಾಟ್ಸ್‌ಮನ್‌ಗೆ ದೇಶೀಯ ಕ್ರಿಕೆಟ್‌ನಲ್ಲಿ ಆಡಲು ಅವಕಾಶ ನೀಡಿಲ್ಲ. ವಾಸ್ತವವಾಗಿ ಮಂಡಳಿಯ ನಿಯಮಗಳ ಪ್ರಕಾರ ವಿದೇಶಿ ಲೀಗ್ ಆಡಿದ ಟೀಮ್ ಇಂಡಿಯಾದ ಯಾವುದೇ ಕ್ರಿಕೆಟಿಗನನ್ನು ಭಾರತೀಯ ಕ್ರಿಕೆಟ್‌ನಲ್ಲಿ ಪುನರಾಗಮನ ಮಾಡಲು ಅನುಮತಿಸಲಾಗುವುದಿಲ್ಲ ಮತ್ತು ಆ ಆಟಗಾರ ಐಪಿಎಲ್‌ನಲ್ಲಿ ಆಡಲು ಸಾಧ್ಯವಿಲ್ಲ.
ಈ ತಿಂಗಳಿನಿಂದ ಪ್ರಾರಂಭವಾಗುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪಂಜಾಬ್‌ನಿಂದ ಸಂಭವನೀಯ 30 ಆಟಗಾರರಲ್ಲಿ ಯುವರಾಜ್ ಸಿಂಗ್ (Yuvaraj Singh) ಸೇರಿದ್ದಾರೆ. ಆದರೆ ಬಿಸಿಸಿಐ ಅವರಿಗೆ ಆಡಲು ಅವಕಾಶ ನೀಡಲಿಲ್ಲ. ಇದೀಗ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಈ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ : ಯುವರಾಜ್‌ಗೆ ಉತ್ತಮ ವಿದಾಯ ಸಿಗಲಿಲ್ಲ: ರೋಹಿತ್ ಶರ್ಮಾ
ಬಿಸಿಸಿಐ (BCCI) ನಿರ್ಧಾರದ ಹಿಂದಿನ ನಿಖರವಾದ ಕಾರಣ ನನಗೆ ತಿಳಿದಿಲ್ಲ. ನಾನು ಈ ಬಗ್ಗೆ ಯುವಿಯೊಂದಿಗೆ ಮಾತನಾಡುತ್ತೇನೆ. ಆದರೆ ನಿವೃತ್ತ ಆಟಗಾರರಿಗೆ ಹಿಂತಿರುಗಿ ಕಲಿಯಲು ಸಾಕಷ್ಟು ಸಮಯವನ್ನು ಹೊಂದಿರುವ ಯುವ ಆಟಗಾರರೊಂದಿಗೆ ಆಟವಾಡಲು ಸಾಕಷ್ಟು ಸಮಯವನ್ನು ನೀಡಬೇಕು ಎಂದು ನಾನು ಭಾವಿಸುತ್ತೇನೆ. ಯುವರಾಜ್‌ಗೆ ಆಡಲು ಅವಕಾಶ ನೀಡಿದರೆ ಯುವ ಆಟಗಾರರಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಯೋಗರಾಜ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಗನ ವೃತ್ತಿ ಜೀವನದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಯೋಗರಾಜ್ ಸಿಂಗ್, ಯುವಿ ಯುವ ಆಟಗಾರರೊಂದಿಗೆ ಆಟವಾಡುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಐಪಿಎಲ್‌ಗೆ (IPL) ಮುಂಚಿನ ಶಿಬಿರದ ಸಂದರ್ಭದಲ್ಲಿ ಯುವಕರೊಂದಿಗೆ ಆಟವಾಡಲು ಅವರನ್ನು ಕೇಳಲಾಯಿತು. ಆದರೆ ಯುವಿ ತನಗೆ ಈಗ ತುಂಬಾ ವಯಸ್ಸಾಗಿದ್ದಾರೆ ಎಂದಿದ್ದರು. ಆದರೆ ನಾನು ಅವರೊಂದಿಗೆ ಆಡಬೇಕೆಂದು ಯುವಿಯನ್ನು ಒತ್ತಾಯಿಸಿದೆ. ನಂತರ ಅವರು ನಾಲ್ಕೈದು ಇನ್ನಿಂಗ್ಸ್ ಆಡಿದರು. ಅವರು ಉತ್ತಮವಾಗಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು. ಯುವ ಆಟಗಾರರು ಯುವಿ ಆಡುತ್ತಿರುವುದನ್ನು ನೋಡಿ ಆಶ್ಚರ್ಯಚಕಿತರಾದರು ಮತ್ತು ಇಂದಿಗೂ ಈ ಮಟ್ಟದಲ್ಲಿ ಅವರು ಇಷ್ಟು ಚೆನ್ನಾಗಿ ಆಡಬಹುದೇ ಎಂದು ಆಶ್ಚರ್ಯ ಪಡುತ್ತಿದ್ದರು ಎಂದು ಹೇಳಿದರು.
ಇದನ್ನೂ ಓದಿ : ಸೌರವ್ ಗಂಗೂಲಿ ನೀಡಿದಷ್ಟು ಸಪೋರ್ಟ್ ಧೋನಿ, ಕೊಹ್ಲಿ ನೀಡಲಿಲ್ಲ: ಯುವರಾಜ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.