ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಭಾರತದ ಚಾಂಪಿಯನ್ ಆಲ್‌ರೌಂಡರ್ ಆಟಗಾರ ಯುವರಾಜ್ ಸಿಂಗ್ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ಯುವರಾಜ್‌ಗೆ ಉತ್ತಮ ವಿದಾಯ ಸಿಗಲಿಲ್ಲ ಎಂದು ಆರಂಭಿಕ ಆಟಗಾರ ರೋಹಿತ್ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಹಿತ್ ಶರ್ಮಾ, "ಯುವಿ ಇದಕ್ಕೂ ಉತ್ತಮ ವಿದಾಯಕ್ಕೆ ಅರ್ಹವಾಗಿದ್ದಾರೆ" ಎಂದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡಲು ವಿಫಲವಾಗಿರುವ ಯುವಿಗೆ ವಿದಾಯದ ಪಂದ್ಯ ನಿರಾಕರಿಸ್ಪಟ್ಟಿದೆ.
You don’t know what you got till its gone. Love you brotherman You deserved a better send off. @YUVSTRONG12 pic.twitter.com/PC2cR5jtLl
— Rohit Sharma (@ImRo45) June 10, 2019
ಮುಂಬಯಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅಂತಾರಾಷ್ಟ್ರೀಯ ಕ್ರೀಡೆಗೆ ನಿವೃತ್ತಿ ಘೋಷಿಸಿದ 37ರ ಹರೆಯದ ಕ್ರಿಕೆಟಿಗ ಯುವರಾಜ್ ಸಿಂಗ್, "25 ವರ್ಷಗಳಿಂದ 22 ಯಾರ್ಡ್ ಪಿಚ್ ನ ಆಚೀಚೆ, ಸುಮಾರು 17 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಒಳಗೆ, ಹೊರಗೆ ಇದ್ದ ನಾನು ನಿವೃತ್ತಿ ಘೋಷಿಸುತ್ತಿದ್ದೇನೆ. ಹೇಗೆ ಹೋರಾಡಬೇಕು, ಹೇಗೆ ಬೀಳಬೇಕು, ಹೇಗೆ ಧೂಳು ಕೊಡವಿಕೊಳ್ಳಬೇಕು ಮತ್ತು ಪುನಃ ಎದ್ದು ಮುನ್ನಡೆಯಬೇಕು ಎಂಬುದನ್ನೆಲ್ಲ ಈ ಆಟವು ನನಗೆ ಕಲಿಸಿಕೊಟ್ಟಿದೆ" ಎಂದು ಹೇಳಿದ್ದರು.