ಬೆಂಗಳೂರು : ಗಣೇಶ ಚತುರ್ಥಿಯನ್ನು ಆಗಸ್ಟ್ 31 ರಂದು ಆಚರಿಸಲಾಗುತ್ತದೆ. ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಸ್ಮಾರ್ಟ್ ಟಿವಿಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ದುಬಾರಿ ಟಿವಿಗಳನ್ನು ಅತ್ಯಂತ ಅಗ್ಗದ ಬೆಲೆಗೆ  ಖರೀದಿಸಬಹುದು. ಏಸರ್‌ನ ಐ-ಸೀರೀಸ್‌ನ ಸ್ಮಾರ್ಟ್ ಟಿವಿ ಶ್ರೇಣಿಯ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಏಸರ್ ಸ್ಮಾರ್ಟ್ ಟಿವಿಗಳಲ್ಲಿ ಅದ್ಭುತ ಕೊಡುಗೆಗಳನ್ನು ಹೊರತಂದಿದೆ. ಏಸರ್ ನ 32 ಇಂಚಿನ ಸ್ಮಾರ್ಟ್ ಟಿವಿಯನ್ನು ಕೇವಲ 2800 ರೂ.ಗೆ ಖರೀದಿಸಬಹುದು. 


COMMERCIAL BREAK
SCROLL TO CONTINUE READING

ಗಣೇಶ ಚತುರ್ಥಿ 2022 ಕೊಡುಗೆಗಳು: Acer I ಸರಣಿ 32-ಇಂಚಿನ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ :
ಏಸರ್ ಐ  ಸರಣಿಯ 32 ಇಂಚಿನ ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯ  ಪ್ರಾರಂಭಿಕ ಬೆಲೆ 19,990 ರೂಪಾಯಿ. ಆದರೆ, ಫ್ಲಿಪ್‌ಕಾರ್ಟ್‌ನಲ್ಲಿ ಈ ಟಿವಿಯನ್ನು 13,999ಗೆ ರೂಪಾಯಿಗೆ ಖರೀದಿಸಬಹುದು. ಅಂದರೆ ಶೇ.29ರಷ್ಟು ರಿಯಾಯಿತಿಯನ್ನು ಈ ಟಿವಿ ಮೇಲೆ  ನೀಡಲಾಗುತ್ತಿದೆ. ಇನ್ನು ಬ್ಯಾಂಕ್ ಆಫರ್ ಮತ್ತು ಎಕ್ಸ್ಚೇಂಜ್ ಆಫರ್ ಸೇರಿಸಿದರೆ ಈ ಟಿವಿಯ ಬೆಲೆ ಇನ್ನಷ್ಟು ಕಡಿಮೆಯಾಗಲಿದೆ.
 
ಇದನ್ನೂ ಓದಿ :  ಈ ಒಂದು ಸಾಧನ ಇದ್ದರೆ ಸಾಕು ವಿದ್ಯುತ್ ಇಲ್ಲದೆಯೂ ನಡೆಯುತ್ತದೆ ಫ್ರಿಡ್ಜ್, ಟಿವಿ, ಎಸಿ


ಏಸರ್ ಐ ಸರಣಿ 32-ಇಂಚಿನ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಬ್ಯಾಂಕ್ ಆಫರ್ : 
ಏಸರ್ ಐ  ಸರಣಿಯ 32-ಇಂಚಿನ ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯನ್ನು ಖರೀದಿಸಲು SBI ಡೆಬಿಟ್ ಕಾರ್ಡ್ ಬಳಸಿದರೆ, 250  ರೂಪಾಯಿ ರಿಯಾಯಿತಿಯನ್ನು ಪಡೆಯಬಹುದು. ಈ ರಿಯಾಯಿತಿಯ ನಂತರ ಟಿವಿಯ ಬೆಲೆ 13,749 ರೂ. ಆಗಲಿದೆ. ಅದರ ನಂತರ ಎಕ್ಸ್ ಚೇಂಜ್ ಆಫರ್ ನ ಲಾಭವನ್ನು ಕೂಡಾ ಪಡೆಯಬಹುದು. 


ಏಸರ್ ಐ ಸರಣಿ 32-ಇಂಚಿನ ಸ್ಮಾರ್ಟ್ಆಂಡ್ರಾಯ್ಡ್ ಟಿವಿ  ಎಕ್ಸ್ಚೇಂಜ್ ಆಫರ್ : 
ಏಸರ್ ಐ ಸಿರೀಸ್ 32 ಇಂಚಿನ ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯ ಮೇಲೆ 11 ಸಾವಿರ ರೂಪಾಯಿ ಎಕ್ಸ್ ಚೇಂಜ್ ಆಫರ್ ನೀಡಲಾಗಿದೆ. ಹಳೆಯ ಟಿವಿಯನ್ನು ವಿನಿಮಯ ಮಾಡಿಕೊಂಡರೆ  ದೊಡ್ಡ ಮೊತ್ತದ ಲಾಭ ಪಡೆಯಬಹುದು. ಆದರೆ, ವಿನಿಮಯ ಮಾಡಿಕೊಳ್ಳುವ ಹಳೆಯ ಟಿವಿ  ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 11 ಸಾವಿರದ ಪೂರ್ಣ ಆಫ್ ಲಭ್ಯವಿರುತ್ತದೆ.  ಈ ಪೂರ್ಣ ರಿಯಾಯಿತಿ ಪಡೆಯುವುದು ಸಾಧ್ಯವಾದರೆ, ಟಿವಿಯ  ಬೆಲೆ 2,749 ರೂ. ಆಗಲಿದೆ. ಅಂದರೆ ಸುಮಾರು 20 ಸಾವಿರ ರೂಪಾಯಿ ಮೌಲ್ಯದ ಟಿವಿಯನ್ನು  ಕೇವಲ 2800 ರೂಪಾಯಿಗೆ  ಖರೀದಿಸಬಹುದು. 


 ಇದನ್ನೂ ಓದಿ :  Apple iPhone 14: ಐಫೋನ್ 14 ಬಗ್ಗೆ ಗ್ರಾಹಕರಲ್ಲಿ ಕೋಲಾಹಲ! ಕಾರಣ ಏನೆಂದು ತಿಳಿಯಿರಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.