ಈ ಒಂದು ಸಾಧನ ಇದ್ದರೆ ಸಾಕು ವಿದ್ಯುತ್ ಇಲ್ಲದೆಯೂ ನಡೆಯುತ್ತದೆ ಫ್ರಿಡ್ಜ್, ಟಿವಿ, ಎಸಿ

ಎಲ್ಲಾ ವಿದ್ಯುತ್ ಅಗತ್ಯಗಳನ್ನು ಸುರಕ್ಷಿತ ಮತ್ತು ಅತ್ಯಂತ ಪರಿಣಾಮಕಾರಿ ರೀತಿಯಲ್ಲಿ ಪೂರೈಸುವ ಸಲುವಾಗಿ  Oukitel P2001 ಪೋರ್ಟಬಲ್ ಪವರ್ ಸ್ಟೇಷನ್ ಅನ್ನು ರಚಿಸಲಾಗಿದೆ. ಇದು ವಿದ್ಯುತ್ ಸಂಗ್ರಹಣೆ ಮತ್ತು ಡಿಸ್ಚಾರ್ಜ್ ವ್ಯವಸ್ಥೆಯನ್ನು ಹೊಂದಿದೆ. 

Written by - Ranjitha R K | Last Updated : Aug 29, 2022, 08:55 AM IST
  • ಬಂದಿದೆ ಪೋರ್ಟಬಲ್ ಚಾರ್ಜಿಂಗ್ ಬ್ಯಾಟರಿ
  • ವಿದ್ಯುತ್ ಕಡಿತದ ಸಮಸ್ಯೆ ಎದುರಿಸುತ್ತಿದ್ದರೆ, ಇದು ಉತ್ತಮ ಆಯ್ಕೆ
  • ಪವರ್ ಸ್ಟೇಷನ್ ಮೇಲೆ 300 ಡಾಲರ್ ವರೆಗೆ ರಿಯಾಯಿತಿ ಪಡೆಯಬಹುದು
ಈ ಒಂದು ಸಾಧನ ಇದ್ದರೆ ಸಾಕು  ವಿದ್ಯುತ್ ಇಲ್ಲದೆಯೂ ನಡೆಯುತ್ತದೆ ಫ್ರಿಡ್ಜ್, ಟಿವಿ, ಎಸಿ title=
Portable Charging Battery (file photo)

ಬೆಂಗಳೂರು : ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣಿಸುತ್ತಿದ್ದವರಿಗೆ  ಪೋರ್ಟಬಲ್ ಚಾರ್ಜಿಂಗ್ ಬ್ಯಾಟರಿ  ಅತ್ಯಂತ ಪ್ರಯೋಜನಕಾರಿಯಾಗಿದೆ. ಈ ಬ್ಯಾಟರಿಯು  ಪವರ್ ಸ್ಟೇಷನ್ ಮಾತ್ರವಲ್ಲ, ಕೆಲವೊಮ್ಮೆ  ಜೀವರಕ್ಷಕವಾಗಿಯೂ ಕೆಲಸಕ್ಕೆ ಬರಬಹುದು. ಹೆಚ್ಚು ವಿದ್ಯುತ್ ಕಡಿತದ ಸಮಸ್ಯೆ ಎದುರಿಸುತ್ತಿದ್ದರೆ, ಇದು ಉತ್ತಮ ಆಯ್ಕೆಯಾಗಿದೆ. ಈ ಪೋರ್ಟಬಲ್ ಚಾರ್ಜಿಂಗ್ ಬ್ಯಾಟರಿಯು ವಿದ್ಯುತ್ ಇಲ್ಲದಿರುವಾಗಲೂ ವಿದ್ಯುತ್ ಪೂರೈಸುತ್ತದೆ. 

Oukitel P2001 ಪೋರ್ಟಬಲ್ ಪವರ್ ಸ್ಟೇಷನ್ :
ಎಲ್ಲಾ ವಿದ್ಯುತ್ ಅಗತ್ಯಗಳನ್ನು ಸುರಕ್ಷಿತ ಮತ್ತು ಅತ್ಯಂತ ಪರಿಣಾಮಕಾರಿ ರೀತಿಯಲ್ಲಿ ಪೂರೈಸುವ ಸಲುವಾಗಿ  Oukitel P2001 ಪೋರ್ಟಬಲ್ ಪವರ್ ಸ್ಟೇಷನ್ ಅನ್ನು ರಚಿಸಲಾಗಿದೆ. ಇದು ವಿದ್ಯುತ್ ಸಂಗ್ರಹಣೆ ಮತ್ತು ಡಿಸ್ಚಾರ್ಜ್ ವ್ಯವಸ್ಥೆಯನ್ನು ಹೊಂದಿದೆ. ಜನವರಿ 2022ರಲ್ಲಿ ಈ  ಬ್ಯಾಟರಿಯನ್ನು ಪರಿಚಯಿಸಲಾಯಿತು. Oukitel P2001 ಅನ್ನು ಮನೆಯ ವಿದ್ಯುತ್ ಕಡಿತ, ಕ್ಯಾಂಪಿಂಗ್, ವಿಪತ್ತು ತಡೆಗಟ್ಟುವ ಸಮಯದಲ್ಲಿ ಬಳಸಲು ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ : Apple iPhone 14: ಐಫೋನ್ 14 ಬಗ್ಗೆ ಗ್ರಾಹಕರಲ್ಲಿ ಕೋಲಾಹಲ! ಕಾರಣ ಏನೆಂದು ತಿಳಿಯಿರಿ

Oukitel P2001 ಪೋರ್ಟಬಲ್ ಪವರ್ ಸ್ಟೇಷನ್ ಬ್ಯಾಟರಿ: 
Oukitel P2001 2000Wh (LiFePO4) ಬ್ಯಾಟರಿಯನ್ನು ಹೊಂದಿದೆ. ಇದು ಉತ್ಪನ್ನಗಳ ಶ್ರೇಣಿಯಲ್ಲಿನ ಅತಿದೊಡ್ಡ ಬ್ಯಾಟರಿಗಳಲ್ಲಿ ಒಂದಾಗಿದೆ. ಸಾಧನವು 2000W ರೇಟ್ ಮಾಡಲಾದ ಔಟ್‌ಪುಟ್‌ನೊಂದಿಗೆ ಬರುತ್ತದೆ. ಟಿವಿ, ಮೈಕ್ರೋವೇವ್‌, ರೈಸ್ ಕುಕ್ಕರ್‌, ಫ್ರಿಜ್‌, ಕಾಫಿ ಮೇಕರ್ ಇತ್ಯಾದಿಗಳಂತಹ 99% ಎಲೆಕ್ಟ್ರಿಕ್ ಸಾಧನಗಳಿಗೆ ವಿದ್ಯುತ್ ಪೂರೈಸುತ್ತದೆ. 

Oukitel P2001 ಪೋರ್ಟಬಲ್ ಪವರ್ ಸ್ಟೇಷನ್ ವೈಶಿಷ್ಟ್ಯಗಳು :
Oukitel P2001 ಪವರ್ ಸ್ಟೇಷನ್‌ನಲ್ಲಿ 4 ವಿಭಿನ್ನ ರೀಚಾರ್ಜಿಂಗ್ ಮೋಡ್‌ಗಳನ್ನು  ನೀಡಲಾಗಿದೆ. ಸ್ಟ್ಯಾಂಡರ್ಡ್ ವಾಲ್ ಔಟ್ ಲೆಟ್ ಗಳು, ಸೌರ ಫಲಕಗಳು, ಎಲೆಕ್ಟ್ರಿಕ್ ಕಾರುಗಳು ಮತ್ತು ಇತರ ವಿದ್ಯುತ್ ಉತ್ಪಾದಕಗಳು. ಹೀಗಾಗಿ  ಪ್ರಯಾಣದ ವೇಳೆಯಲ್ಲಿಯೂ, ಸೌರ ಫಲಕಗಳು ಅಥವಾ ವಾಹನ ಬ್ಯಾಟರಿಗಳನ್ನು ಬಳಸಿಕೊಂಡು ಪವರ್ ಸ್ಟೇಷನ್ ಅನ್ನು ರೀಚಾರ್ಜ್ ಮಾಡಬಹುದು. ಸೌರ ಫಲಕಗಳನ್ನು ಬಳಸಿ ಬ್ಯಾಟರಿಯನ್ನು ಚಾರ್ಜ್ ಮಾಡಲು 4 ಗಂಟೆಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಇನ್ನೂ ಬೇಗ ಚಾರ್ಜ್ ಮಾಡಬೇಕಾದರೆ ಡ್ಯುಯಲ್ ರೀಚಾರ್ಜಿಂಗ್ ಆಯ್ಕೆಗಳನ್ನು ಬಳಸಿಕೊಂಡು ಈ ಬ್ಯಾಟರಿಯನ್ನು 1.5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. 

ಇದನ್ನೂ ಓದಿ : ರಾಯಲ್ ಎನ್ಫೀಲ್ಡ್ಗೆ ಭರ್ಜರಿ ಪೈಪೋಟಿ ನೀಡುತ್ತೆ ಈ ಬೈಕ್: ರಹಸ್ಯವಾಗಿ ಹೊಸ ಮಾಡೆಲ್ Yezdiಯಿಂದ ರಿಲೀಸ್

Oukitel P2001 ಪೋರ್ಟಬಲ್ ಪವರ್ ಸ್ಟೇಷನ್  ಆಫರ್ : 
Oukitel ಈಗ ತನ್ನ ಬೇಸಿಗೆ ಕ್ಯಾಂಪಿಂಗ್ ಸೇಲ್‌ನ ಭಾಗವಾಗಿ ತನ್ನ ಪವರ್ ಜನರೇಟರ್‌ಗಳ ಮೇಲೆ 1000 ಡಾಲರ್ ವರೆಗೆ  ರಿಯಾಯಿತಿಯನ್ನು ನೀಡುತ್ತಿದೆ. ಈ ಕೊಡುಗೆಯ ಅಡಿಯಲ್ಲಿ, Oukitel P2001 ಪವರ್ ಸ್ಟೇಷನ್ ಮೇಲೆ 300 ಡಾಲರ್ ವರೆಗೆ ರಿಯಾಯಿತಿ ಪಡೆಯಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News