Apple iPhone 14: ಐಫೋನ್ 14 ಬಗ್ಗೆ ಗ್ರಾಹಕರಲ್ಲಿ ಕೋಲಾಹಲ! ಕಾರಣ ಏನೆಂದು ತಿಳಿಯಿರಿ

ಐಫೋನ್‌ನ ಇತ್ತೀಚಿನ ಮಾಡೆಲ್‌ಗೆ ಸಂಬಂಧಿಸಿದಂತೆ ಮಾರುಕಟ್ಟೆಯಲ್ಲಿ ಸಂಚಲನ ಉಂಟಾಗಿದೆ. ಗ್ರಾಹಕರು ಇದನ್ನು ಖರೀದಿಸಲು ಸಿದ್ಧರಾಗಿದ್ದಾರೆ. ಆದ್ದರಿಂದ ನಾವು ಇಂದು ನಿಮಗಾಗಿ ಅದಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಮಾಹಿತಿ ತಿಳಿಸಲಿದ್ದೇವೆ.

Written by - Puttaraj K Alur | Last Updated : Aug 28, 2022, 02:19 PM IST
  • ಶೀಘ್ರವೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಆ್ಯಪಲ್ ಐಫೋನ್ 14 ಸರಣಿ
  • ಗ್ರ್ಯಾಂಡ್ ಲಾಂಚ್‌ನಲ್ಲಿ iPhone 14, iPhone 14 Max, iPhone 14 Pro, iPhone 14 Pro Max ಬಿಡುಗಡೆ
  • iPhone 14 ವೈಶಿಷ್ಟ್ಯಗಳು ಮತ್ತು ಬೆಲೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿರಿ
Apple iPhone 14: ಐಫೋನ್ 14 ಬಗ್ಗೆ ಗ್ರಾಹಕರಲ್ಲಿ ಕೋಲಾಹಲ! ಕಾರಣ ಏನೆಂದು ತಿಳಿಯಿರಿ title=
ಆ್ಯಪಲ್ ಐಫೋನ್ 14 ಸರಣಿ

ನವದೆಹಲಿ: ಟೆಕ್ ದೈತ್ಯ ಆ್ಯಪಲ್ ಕಂಪನಿಯು ಶೀಘ್ರದಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಐಫೋನ್ 14 ಸರಣಿಯನ್ನು ಬಿಡುಗಡೆ ಮಾಡಲಿದೆ. ಈಗಾಗಲೇ ಇದಕ್ಕದಾಗಿ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಗ್ರ್ಯಾಂಡ್ ಲಾಂಚ್‌ನಲ್ಲಿ iPhone 14, iPhone 14 Max, iPhone 14 Pro, iPhone 14 Pro Max ಬಿಡುಗಡೆಯಾಗಲಿವೆ. ಇಷ್ಟು ಮಾತ್ರವಲ್ಲದೆ Apple Watch Series 8, AirPods Pro 2 ಸಹ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಎಂದು ಹೇಳಲಾಗುತ್ತಿದೆ.

ಯಾವ್ಯಾವ ಉತ್ಪನ್ನಗಳನ್ನು ಬಿಡುಗಡೆಯಾಗುತ್ತವೆ ಎಂಬುದರ ಬಗ್ಗೆ ಆ್ಯಪಲ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಈ ಮೇಲಿನ ಎಲ್ಲಾ ಉತ್ಪನ್ನಗಳು ರಿಲೀಸ್ ಆಗುವ ಭರವಸೆ ಖಂಡಿತ ವ್ಯಕ್ತವಾಗಿದೆ. iPhone 14ಗೆ ಸಂಬಂಧಿಸಿದಂತೆ ಪ್ರತಿಯೊಬ್ಬ ಬಳಕೆದಾರರು ತಿಳಿದುಕೊಳ್ಳಬಯಸುವ ವಿಷಯವನ್ನು ನಾವು ಇಂದು ನಿಮಗೆ ತಿಳಿಸಲಿದ್ದೇವೆ.

ಇದನ್ನೂ ಓದಿ: Smart TV: ಕೇವಲ 7,999 ರೂ.ಗೆ ಈ ಅತ್ಯುತ್ತಮ ಸ್ಮಾರ್ಟ್ ಟಿವಿ ಖರೀದಿಸಿ

iPhone 14 ಬಿಡುಗಡೆ ದಿನಾಂಕ

ಕಂಪನಿಯು ಇನ್ನೂ ಐಫೋನ್ 14 ಸರಣಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ, ಆದರೆ ಕಂಪನಿಯು ಸೆಪ್ಟೆಂಬರ್ 7, 2022ರಂದು ಮಾರುಕಟ್ಟೆಯಲ್ಲಿ ಐಫೋನ್ 14 ಅನ್ನು ರಿಲೀಸ್ ಮಾಡಬಹುದು ಎಂದು ಹೇಳಲಾಗುತ್ತಿದೆ. ಹೆಚ್ಚಿನ ಜನರು ಈಗಾಗಲೇ ಇದರ ಬಗ್ಗೆ ಉತ್ಸುಕರಾಗಿದ್ದಾರೆ. ಏಕೆಂದರೆ ಇತ್ತೀಚಿನ ಮಾದರಿಯ ಐಫೋನ್‌ನಲ್ಲಿ ಬಹಳಷ್ಟು ಹೊಸದನ್ನು ಕಾಣಬಹುದಾಗಿದೆ.

ಭಾರತದಲ್ಲಿ iPhone 14 ಬೆಲೆ

ಮಾಹಿತಿಯ ಪ್ರಕಾರ ಐಫೋನ್ 14ನ ಬೆಲೆ ಐಫೋನ್ 13 ಗಿಂತ 10 ಸಾವಿರ ರೂ. ಹೆಚ್ಚು ಇರಲಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಐಫೋನ್ 14ರ ಮೂಲ ಮಾದರಿಯನ್ನು ಐಫೋನ್ 13ರಂತೆಯೇ ಅದೇ ಬೆಲೆಗೆ ಬಿಡುಗಡೆ ಮಾಡಲಾಗುತ್ತದೆಂದು ಊಹಿಸಲಾಗಿದೆ. iPhone 14 Maxನ ಬೆಲೆ ಸುಮಾರು 68,500 ರೂ.(899 ಅಮೆರಿಕನ್ ಡಾಲರ್)ನಿಂದ ಪ್ರಾರಂಭವಾಗಬಹುದು. iPhone 14 Pro Maxನ ಉನ್ನತ ಮಾದರಿಯ ಬಗ್ಗೆ ಹೇಳುವುದಾದರೆ ಇದರ ಬೆಲೆ ಸುಮಾರು 91,400 ರೂ.(1,199)ನಿಂದ ಪ್ರಾರಂಭವಾಗಬಹುದು ಎನ್ನಲಾಗಿದೆ.  

ಇದನ್ನೂ ಓದಿ: ಅಬ್ಬಬ್ಬಾ! ಗಂಟೆಗೆ 325 ಕಿಮೀ ವೇಗದಲ್ಲಿ ಓಡುತ್ತೆ ಈ ಕಾರು: ಇದರ ಬೆಲೆ-ವಿಶೇಷತೆ ಕೇಳಿದ್ರೆ ಶಾಕ್ ಆಗ್ತೀರ!

iPhone 14ನ ವೈಶಿಷ್ಟ್ಯಗಳು

ಮಾಹಿತಿಯ ಪ್ರಕಾರ iPhone 14 Proನಲ್ಲಿ 6.1-ಇಂಚಿನ OLED ಡಿಸ್‍ಪ್ಲೇ ನೀಡಬಹುದು. ಅದೇ ರೀತಿ 14 Pro Max 6.7 ಇಂಚಿನ ಡಿಸ್‍ಪ್ಲೇ ಹಾಗೂ 14 Max 6.7 ಇಂಚಿನ ಡಿಸ್‍ಪ್ಲೇ ಹೊಂದಿರುವ ಸಾಧ್ಯತೆಯಿದೆ. ಇದರಲ್ಲಿ ಬಳಕೆದಾರರು 120Hzನ ರಿಫ್ರೆಶ್ ರೇಟ್ ಪಡೆಯಬಹುದು. ಐಫೋನ್ ಪ್ರೊ ಮಾದರಿಯು 48MP ಕ್ಯಾಮೆರಾ, 12MP ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 12MP 2.5x ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿರುತ್ತದೆ. Apple iPhone 14 Pro ಮತ್ತು iPhone 14 Pro Max A16 ಬಯೋನಿಕ್ ಚಿಪ್‌ಸೆಟ್ ಅನ್ನು ಹೊಂದಿರುತ್ತವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News