5G Service: ಹೊಸ ವರ್ಷದಲ್ಲಿ ಇಂಟರ್ನೆಟ್ ಬಳಕೆದಾರರಿಗೆ ಸಿಹಿಸುದ್ದಿ ಸಿಗಲಿದೆ. ಶೀಘ್ರದಲ್ಲೇ ದೇಶದ ಹಲವು ನಗರಗಳಲ್ಲಿ 5ಜಿ ಇಂಟರ್ನೆಟ್ ಸೇವೆ (5G Service) ಆರಂಭವಾಗಲಿದೆ. ದೂರಸಂಪರ್ಕ ಇಲಾಖೆ ಹೊರಡಿಸಿದ ಹೇಳಿಕೆಯಲ್ಲಿ, 2022 ರಲ್ಲಿ ದೇಶದ ಗ್ರಾಹಕರಿಗೆ 5G ನೆಟ್‌ವರ್ಕ್ ಪ್ರಾರಂಭಿಸಲಾಗುವುದು ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಈ ನಗರಗಳಿಗೆ ಮೊದಲು ಸೌಲಭ್ಯ ಸಿಗಲಿದೆ:
ಮೊದಲು ಈ ಸೌಲಭ್ಯವು ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಗುರುಗ್ರಾಮ್, ಬೆಂಗಳೂರು, ಚಂಡೀಗಢ, ಜಾಮ್‌ನಗರ, ಅಹಮದಾಬಾದ್, ಹೈದರಾಬಾದ್, ಲಕ್ನೋ, ಪುಣೆ ಮತ್ತು ಗಾಂಧಿ ನಗರಗಳಂತಹ ದೊಡ್ಡ ನಗರಗಳಲ್ಲಿ ಮಾತ್ರ ಪ್ರಾರಂಭವಾಗಲಿದೆ. ದೇಶದ ಇತರ ನಗರಗಳು  5ಜಿ ಇಂಟರ್ನೆಟ್ ಸೇವೆ (5G Service) ಗಾಗಿ ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಿದೆ. 


ಇದನ್ನೂ ಓದಿ- Jio Happy New Year Offer: ಜಿಯೋ ನ್ಯೂ ಇಯರ್ ಆಫರ್, 504GB ಡೇಟಾದೊಂದಿಗೆ ಅನ್ಲಿಮಿಟೆಡ್ ಕಾಲ್ ಕೊಡುಗೆ


ಪ್ರಸ್ತುತ, ಏರ್‌ಟೆಲ್, ರಿಲಯನ್ಸ್ ಜಿಯೋ (Reliance Jio) ಮತ್ತು ವೊಡಾಫೋನ್ ಐಡಿಯಾ ಈ ನಗರಗಳಲ್ಲಿ 5G ನೆಟ್‌ವರ್ಕ್ (5G Telecom Services) ಪರೀಕ್ಷಿಸುತ್ತಿವೆ ಮತ್ತು ಸರ್ಕಾರವು ಮುಂದಿನ ವರ್ಷದಿಂದ ದೇಶದಲ್ಲಿ 5G ಸೇವೆಗಳನ್ನು ಈ ಮಹಾನಗರಗಳು ಮತ್ತು ದೊಡ್ಡ ನಗರಗಳಲ್ಲಿ ಪ್ರಾರಂಭಿಸಲಿದೆ. ದೂರಸಂಪರ್ಕ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಐಐಟಿ ಬಾಂಬೆ, ಐಐಟಿ ದೆಹಲಿ, ಐಐಟಿ ಹೈದರಾಬಾದ್, ಐಐಟಿ ಮದ್ರಾಸ್, ಐಐಟಿ ಕಾನ್ಪುರ, ಐಐಎಸ್ಸಿ ಬೆಂಗಳೂರು ಸೇರಿದಂತೆ ಎಂಟು ಏಜೆನ್ಸಿಗಳು 36 ತಿಂಗಳಿಂದ ಈ ಕೆಲಸ ಮಾಡುತ್ತಿವೆ.


ಸ್ಪೆಕ್ಟ್ರಂ ಹರಾಜು ಮುಂದಿನ ವರ್ಷ ನಡೆಯಲಿದೆ:
ಮಾಹಿತಿಯ ಪ್ರಕಾರ, 224 ಕೋಟಿ ವೆಚ್ಚದ ಈ ಯೋಜನೆಯು 31 ಡಿಸೆಂಬರ್ 2021 ರೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಮುಂದಿನ ವರ್ಷ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ 5G ಹೊಸ ತರಂಗಾಂತರದ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ.


ಇದನ್ನೂ ಓದಿ- ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಂಗ್ ಆಗುತ್ತದೆಯೇ?; ಹಾಗಾದರೆ ಹೀಗೆ ಮಾಡಿ


ಸ್ವಾವಲಂಬಿ ಭಾರತ ಉಪಕ್ರಮದ ಅಡಿಯಲ್ಲಿ, ಟೆಲಿಕಾಂ ಕ್ಷೇತ್ರದಲ್ಲಿ ಪ್ರಸ್ತುತ ಮತ್ತು ಭವಿಷ್ಯದ ತಂತ್ರಜ್ಞಾನದ ಅಗತ್ಯಗಳನ್ನು ಪೂರೈಸಲು ಸರ್ಕಾರವು ಪ್ರೋತ್ಸಾಹವನ್ನು ನೀಡುತ್ತಿದೆ. 5G, ಮುಂಬರುವ 6G ಮತ್ತು ಕ್ವಾಂಟಮ್ ಸಂವಹನಗಳು ಮತ್ತು ಮುಂದಿನ ಪೀಳಿಗೆಯ ಸಂವಹನ ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ದೇಶದಲ್ಲಿ ವಿವಿಧ ಉಪಕ್ರಮಗಳನ್ನು ನಡೆಸಲಾಗುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.