Stylo Boost Powerbank: ಪ್ರಸ್ತುತ  ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳಷ್ಟೇ ಪವರ್‌ಬ್ಯಾಂಕ್ಗಳಿಗೂ ಕೂಡ ತುಂಬಾ ಬೇಡಿಕೆ ಇದೆ. ಇತ್ತೀಚಿಗೆ ಭಾರತೀಯ ಪರಿಕರ ತಯಾರಕ ಆಂಬ್ರೇನ್ ಕಂಪನಿಯು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಹೆಚ್ಚಿನ ಸಾಮರ್ಥ್ಯದ ಸ್ಟೈಲೋ ಬೂಸ್ಟ್ ಪವರ್‌ಬ್ಯಾಂಕ್ ಅನ್ನು ಪರಿಚಯಿಸಿದೆ. ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಈ ಪವರ್‌ಬ್ಯಾಂಕ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದ್ದರೆ ಐಫೋನ್ 14 ಅನ್ನು ಆರು ಬಾರಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ತಿಳಿದುಬಂದಿದೆ. ಈ ಪವರ್‌ಬ್ಯಾಂಕ್ ಬೆಲೆ ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ.


COMMERCIAL BREAK
SCROLL TO CONTINUE READING

ವೇಗದ ಚಾರ್ಜಿಂಗ್:
* ಸ್ಟೈಲೋ ಬೂಸ್ಟ್ ಪವರ್‌ಬ್ಯಾಂಕ್ 65W ನ PD ಔಟ್‌ಪುಟ್ ಅನ್ನು ಹೊಂದಿದೆ, ಇದು ಸಾಧನವನ್ನು ತ್ವರಿತವಾಗಿ ಚಾರ್ಜ್ ಮಾಡುತ್ತದೆ. 
* ಈ ಪವರ್ ಬ್ಯಾಂಕ್ ಮ್ಯಾಕ್‌ಬುಕ್ ಪ್ರೊನಂತಹ ಟೈಪ್-ಸಿ ಲ್ಯಾಪ್‌ಟಾಪ್‌ಗಳನ್ನು 2 ಗಂಟೆ 20 ನಿಮಿಷಗಳಲ್ಲಿ ಚಾರ್ಜ್ ಮಾಡುತ್ತದೆ. 
* ಇದರ ಹೊರತಾಗಿ, 20W ಔಟ್‌ಪುಟ್ ನಿಮಗೆ 30 ನಿಮಿಷಗಳಲ್ಲಿ ಐಫೋನ್ ಅಥವಾ ಆಂಡ್ರಾಯ್ಡ್ ಫೋನ್‌ ಅನ್ನು ಸುಮಾರು 50% ವರೆಗೆ ಚಾರ್ಜ್ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
* ಈ ಪವರ್‌ಬ್ಯಾಂಕ್ ಏಕಕಾಲದಲ್ಲಿ ಅನೇಕ ಸಾಧನಗಳನ್ನು ಚಾರ್ಜ್ ಮಾಡಬಲ್ಲದು. 
* ಸ್ಟೈಲೋ ಬೂಸ್ಟ್ ಪವರ್‌ಬ್ಯಾಂಕ್ ಎರಡು USB-A ಪೋರ್ಟ್‌ಗಳು ಮತ್ತು ಒಂದು USB-C ಪೋರ್ಟ್ ಸೇರಿದಂತೆ 3 ಔಟ್‌ಪುಟ್ ಪೋರ್ಟ್‌ಗಳೊಂದಿಗೆ ಬರುತ್ತದೆ. 
* ಪವರ್‌ಬ್ಯಾಂಕ್ನಲ್ಲಿರುವ 60W ಫಾಸ್ಟ್ ಚಾರ್ಜಿಂಗ್ ಇನ್‌ಪುಟ್ ಪೋರ್ಟ್‌ನಿಂದಾಗಿ ಪವರ್‌ಬ್ಯಾಂಕ್ ಅನ್ನು ತ್ವರಿತವಾಗಿ ಚಾರ್ಜ್ ಮಾಡಲು ಸಹಾಯಕವಾಗಿದೆ.


ಇದನ್ನೂ ಓದಿ- Smartphone Hacks: ನಿಮ್ಮ ಫೋನ್ ನಲ್ಲಿ ಆಗಾಗ್ಗೆ ಜಾಹೀರಾತುಗಳು ಬರುತ್ತಿವೆಯೇ? ಒಂದೇ ಕ್ಲಿಕ್ ನಲ್ಲಿ ನಿಲ್ಲಿಸಿ


ಸ್ಟೈಲೋ ಬೂಸ್ಟ್ ಪವರ್‌ಬ್ಯಾಂಕ್ ವೈಶಿಷ್ಟ್ಯಗಳು:
>> ಸ್ಟೈಲೋ ಬೂಸ್ಟ್ ಪವರ್‌ಬ್ಯಾಂಕ್ ಪ್ರೀಮಿಯಂ ವಿನ್ಯಾಸದೊಂದಿಗೆ ಬರುತ್ತದೆ, ಮ್ಯಾಟ್ ಫಿನಿಶ್ ಹೊಂದಿದೆ.
>> ಇದು ಸಾಕಷ್ಟು ಬಾಳಿಕೆ ಬರುವಂತಹದ್ದಾಗಿದೆ.
>> ಪವರ್‌ಬ್ಯಾಂಕ್ನಲ್ಲಿ ಎಲ್ಇಡಿ ಕೂಡ ಲಭ್ಯವಿದೆ. 
>> ಇದರ ಸಹಾಯದಿಂದ ಬ್ಯಾಟರಿ ಬಾಳಿಕೆಯನ್ನು ಟ್ರ್ಯಾಕ್ ಮಾಡಬಹುದು. 


ಇದನ್ನೂ ಓದಿ- ಕೇವಲ 1 ಗಂಟೆಯಲ್ಲಿ ಫುಲ್ ಚಾರ್ಜ್ ಆಗಬಲ್ಲ, 450kg ತೂಕದ ಮಿನಿ ಎಲೆಕ್ಟ್ರಿಕ್ ಕಾರ್, ಮೈಲೇಜ್ ಕೇಳಿದ್ರೆ ಶಾಕ್ ಆಗ್ತೀರಾ!


ಸ್ಟೈಲೋ ಬೂಸ್ಟ್ ಪವರ್‌ಬ್ಯಾಂಕ್‌ನ ಬೆಲೆ:
ಭಾರತದಲ್ಲಿ ಸ್ಟೈಲೋ ಬೂಸ್ಟ್ ಪವರ್‌ಬ್ಯಾಂಕ್‌ ಅನ್ನು ಅಮೆಜಾನ್ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಮೂರು ಬಣ್ಣಗಳಲ್ಲಿ ಲಭ್ಯವಿರುವ ಈ ಪವರ್‌ಬ್ಯಾಂಕ್ ಅನ್ನು 3,999 ರೂ.ಗಳಿಗೆ ಖರೀದಿಸಬಹುದಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.