Affordable Cars With Sunroof : ಭಾರತೀಯ ಕಾರು ಖರೀದಿದಾರರಲ್ಲಿ ಸನ್‌ರೂಫ್‌ಗೆ ಹೆಚ್ಚಿನ ಬೇಡಿಕೆಯಿದೆ. ಅನೇಕ ಜನರು ತಮ್ಮ ಹೊಸ ಕಾರಿನಲ್ಲಿ ಈ ವೈಶಿಷ್ಟ್ಯವನ್ನು ಬಯಸುತ್ತಾರೆ. ಇದಕ್ಕಾಗಿ ಹೆಚ್ಚಿನ ಹಣವನ್ನು ಪಾವತಿಸಲು ಕೂಡಾ ಸಿದ್ಧರಿರುತ್ತಾರೆ. ಆದರೆ, ಕಡಿಮೆ ಬೆಲೆಯಲ್ಲಿ ಸನ್‌ರೂಫ್ ಹೊಂದಿರುವ ಕಾರನ್ನು ಖರೀದಿಸಲು ಬಯಸುವ ಅನೇಕ ಜನರಿರುತ್ತಾರೆ. ಅಂಥವರಿಗಾಗಿ  ಸನ್‌ರೂಫ್ ಹೊಂದಿರುವ 10 ಲಕ್ಷಕ್ಕಿಂತ ಕಡಿಮೆ ಬೆಲೆಯ 4 ಕಾರುಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಈ ಕಾರುಗಳನ್ನು ಖರೀದಿಸಲು ಕಡಿಮೆ ಡೌನ್ ಪೇಮೆಂಟ್ ಮಾಡಿದರೆ ಸಾಕಾಗುತ್ತದೆ. 


COMMERCIAL BREAK
SCROLL TO CONTINUE READING

ಟಾಟಾ ಆಲ್ಟ್ರೋಜ್ : 
ಪ್ರಸ್ತುತ ಭಾರತದಲ್ಲಿ ಅತ್ಯಂತ ಕೈಗೆಟುಕುವ ಕಾರು ಟಾಟಾ ಆಲ್ಟ್ರೊಜ್. ಎಲೆಕ್ಟ್ರಿಕ್ ಸನ್‌ರೂಫ್‌ನೊಂದಿಗೆ  ಈ ಕಾರನ್ನು ಖರೀದಿಸಬಹುದು. ಸನ್‌ರೂಫ್‌ನೊಂದಿಗೆ ಆಲ್ಟ್ರೊಜ್‌ನ ಅತ್ಯಂತ ಕೈಗೆಟುಕುವ ರೂಪಾಂತರದ ಬೆಲೆ 7.35 ಲಕ್ಷ ರೂಪಾಯಿ (ಎಕ್ಸ್-ಶೋರೂಮ್). ಇದು ಆಕರ್ಷಕ ವಿನ್ಯಾಸದ ಜೊತೆಗೆ 3 ಎಂಜಿನ್ ಆಯ್ಕೆಗಳು ಮತ್ತು ಅನೇಕ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿದೆ.


ಇದನ್ನೂ ಓದಿ : ಇಂಟರ್‌ನೆಟ್‌ ಕ್ರಾಂತಿ ಮಾಡಲು ಬಂದಿದೆ ಜಿಯೋ ಏರ್ ಫೈಬರ್


ಹುಂಡೈ ಎಕ್ಸ್‌ಟರ್ : 
ಲೈನ್‌ಅಪ್‌ನಲ್ಲಿ ಇತ್ತೀಚಿಗೆ ಹ್ಯುಂಡೈ ಎಕ್ಸೆಟರ್ ಬ್ರ್ಯಾಂಡ್‌ನ  ಪ್ರವೇಶವಾಗಿದೆ. ಭಾರತದಲ್ಲಿ ಈ ಬ್ರ್ಯಾಂಡ್‌ನ ಅತ್ಯಂತ ಚಿಕ್ಕ SUV ಆಗಿದೆ. ಸನ್‌ರೂಫ್‌ನೊಂದಿಗೆ ಕಂಪನಿಯ ಅತ್ಯಂತ ಕೈಗೆಟುಕುವ ಕಾರು ಇದಾಗಿದೆ. ಇದನ್ನು ಎಸ್‌ಎಕ್ಸ್ ಟ್ರಿಮ್‌ನೊಂದಿಗೆ 8.0 ಲಕ್ಷಕ್ಕೆ ಖರೀದಿಸಬಹುದು (ಎಕ್ಸ್-ಶೋರೂಮ್). ಮೈಕ್ರೋ-SUVಯಲ್ಲಿ ಸಿಂಗಲ್ 1.2-ಲೀಟರ್   ನ್ಯಾಚ್ಯುರಲಿ ಆಸ್ಪಿರೆಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ.  ಇದನ್ನು ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ.


ಟಾಟಾ ಪಂಚ್ : 
ಎಕ್ಸೆಟರ್ ನಂತರ, ಅದರ ನೇರ ಪ್ರತಿಸ್ಪರ್ಧಿ ಟಾಟಾ ಪಂಚ್. ಅದರ  ಹೊಸ ರೂಪಾಂತರಗಳು ಸನ್‌ರೂಫ್‌ನೊಂದಿಗೆ ಬರುತ್ತವೆ. ಈ ರೂಪಾಂತರದ ಬೆಲೆ  8.35 ಲಕ್ಷ (ಎಕ್ಸ್ ಶೋ ರೂಂ). ಪಂಚ್ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ AMT ಗೇರ್‌ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿದೆ.


ಇದನ್ನೂ ಓದಿ : 10 ಸಾವಿರಕ್ಕಿಂತ ಕಡಿಮೆ ಬೆಲೆಗೆ 5G ಫೋನ್ ! ಫೋನ್ ಖರೀದಿಸಲು ಇದೆ ನಾಲ್ಕು ಪ್ರಮುಖ ಕಾರಣ


ಮಹೀಂದ್ರ XUV300: 
ಮಹೀಂದ್ರಾ ಇತ್ತೀಚೆಗೆ ತನ್ನ W4 ಟ್ರಿಮ್‌ನಲ್ಲಿ ಸನ್‌ರೂಫ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದರ ಬೆಲೆ  8.66 ಲಕ್ಷ (ಎಕ್ಸ್ ಶೋ ರೂಂ). ಇದು ಎಲೆಕ್ಟ್ರಿಕ್ ಸನ್‌ರೂಫ್ ಅನ್ನು ನೀಡುವ ವಿಭಾಗದಲ್ಲಿ ಅತ್ಯಂತ ಕೈಗೆಟುಕುವ SUV ಆಗಿದೆ.  1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು 1.2-ಲೀಟರ್ ಎಂಸ್ಟಾಲಿಯನ್ ಟರ್ಬೊ ಪೆಟ್ರೋಲ್  ಯೂನಿಟ್ ಹೀಗೆ ಮೂರು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.