ಡೀಸೆಲ್ ಕಾರುಗಳ ಮೇಲೆ ಹೆಚ್ಚುವರಿ ಸುಂಕ ! ದುಬಾರಿಯಾಗುವುದು ಡೀಸೆಲ್ ವಾಹನಗಳ ಖರೀದಿ

Additional 10% Duty On Diesel Vehicles:ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಈ ಪ್ರಸ್ತಾವನೆ ಬಂದಿದೆ. ಈ ನಿಟ್ಟಿನಲ್ಲಿ ನಿತಿನ್ ಗಡ್ಕರಿ ಅವರು ಸಂಜೆ 5:30ಕ್ಕೆ ಹಣಕಾಸು ಸಚಿವರನ್ನು ಭೇಟಿ ಮಾಡಲಿದ್ದಾರೆ.   

Written by - Ranjitha R K | Last Updated : Sep 12, 2023, 02:13 PM IST
  • ಇನ್ನು ಮುಂದೆ ಭಾರತದಲ್ಲಿ ಡೀಸೆಲ್ ವಾಹನಗಳು ಹೆಚ್ಚು ದುಬಾರಿಯಾಗಬಹುದು.
  • ಕೇಂದ್ರ ಸರ್ಕಾರವು ಅವುಗಳ ಮೇಲೆ 10 ಪ್ರತಿಶತ ಹೆಚ್ಚುವರಿ ಸುಂಕವನ್ನು ವಿಧಿಸಬಹುದು
  • ಡೀಸೆಲ್ ವಾಹನಗಳ ಮೇಲೆ ಶೇ.10ರಷ್ಟು ಹೆಚ್ಚುವರಿ ಸುಂಕ
ಡೀಸೆಲ್ ಕಾರುಗಳ ಮೇಲೆ ಹೆಚ್ಚುವರಿ ಸುಂಕ ! ದುಬಾರಿಯಾಗುವುದು  ಡೀಸೆಲ್ ವಾಹನಗಳ ಖರೀದಿ  title=

Additional 10% Duty On Diesel Vehicles : ಇನ್ನು ಮುಂದೆ ಭಾರತದಲ್ಲಿ ಡೀಸೆಲ್ ವಾಹನಗಳು ಹೆಚ್ಚು ದುಬಾರಿಯಾಗಬಹುದು. ಏಕೆಂದರೆ ಕೇಂದ್ರ ಸರ್ಕಾರವು ಅವುಗಳ ಮೇಲೆ 10 ಪ್ರತಿಶತ ಹೆಚ್ಚುವರಿ ಸುಂಕವನ್ನು ವಿಧಿಸಬಹುದು. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಈ ಪ್ರಸ್ತಾವನೆ ಬಂದಿದೆ. ಈ ನಿಟ್ಟಿನಲ್ಲಿ ನಿತಿನ್ ಗಡ್ಕರಿ ಅವರು ಸಂಜೆ 5:30ಕ್ಕೆ ಹಣಕಾಸು ಸಚಿವರನ್ನು ಭೇಟಿ ಮಾಡಲಿದ್ದಾರೆ. ಡೀಸೆಲ್ ವಾಹನಗಳ ಮೇಲೆ ಶೇ.10ರಷ್ಟು ಹೆಚ್ಚುವರಿ ಸುಂಕ ವಿಧಿಸುವಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ. 

 2014 ರಲ್ಲಿ  'ಭಾರತದ ಆಟೋಮೊಬೈಲ್ ಉದ್ಯಮವು ವಿಶ್ವದಲ್ಲಿ ಏಳನೇ ಸ್ಥಾನದಲ್ಲಿತ್ತು. ಇಂದು ಅದು ಮೂರನೇ ಸ್ಥಾನದಲ್ಲಿದೆ. ಆತ್ಮ ನಿರ್ಭರ ಭಾರತದ ಉದ್ದೇಶವೇ ವಿಶ್ವದ ಮೂರನೇ ಅತಿದೊಡ್ಡ ಆರ್ಥವ್ಯವಸ್ಥೆಯಲ್ಲಿ ಶಾಮೀಲಾಗುವುದು ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಈ ಉದ್ಯಮವು 10 ಕೋಟಿ ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಒದಗಿಸುತ್ತದೆ. 'ಜಿ20 ಅವಧಿಯಲ್ಲಿ ಜಾಗತಿಕ ಜೈವಿಕ ಇಂಧನ ಒಕ್ಕೂಟಕ್ಕೆ (Biofuel Alliance) ಸಂಬಂಧಿಸಿದಂತೆ ಒಮ್ಮತಕ್ಕೆ ಬರಲಾಗಿದೆ' ಎಂದೂ ಅವರು ಹೇಳಿದ್ದಾರೆ.
 
ಇದನ್ನೂ ಓದಿ :
 ದೇಶದ ಮೊದಲ ಯುಪಿಐ ಎಟಿಎಂ ಆರಂಭ

ಡೀಸೆಲ್ ಮತ್ತು ಪೆಟ್ರೋಲ್ ಅನ್ನು ಬಿಟ್ಟು ಇವಿ ಮತ್ತು  ರಿನ್ಯುಯೇಬಲ್ ಎನರ್ಜಿಗೆ ಬದಲಾಯಿಸಲು ಇದು ಉತ್ತಮ ಸಮಯ ಎಂದು ಗಡ್ಕರಿ ಹೇಳಿದರು.  ಫಾಸಿಲ್ ಫ್ಯುಲ್ ನ ಎಂಜಿನ್‌ಗಳನ್ನು ಬಳಸುವಂತೆ ಜನರು ಮತ್ತು ಕೈಗಾರಿಕೆಗಳಿಂದ ಮನವಿ ಸ್ವೀಕರಿಸಲಾಗಿದೆ ಎಂದು ಹೇಳಿದ್ದಾರೆ. ವಿಶ್ವ ಮಾರುಕಟ್ಟೆಯಲ್ಲಿ ಮುಂದೆ ಸಾಗಲು ಮತ್ತು ಸ್ಪರ್ಧಾತ್ಮಕವಾಗಲು, ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು. ಇದಕ್ಕಾಗಿ ಎಲ್ಲ ರಸ್ತೆಗಳನ್ನು ಬಂದರಿನೊಂದಿಗೆ ಜೋಡಿಸಲಾಗುತ್ತಿದೆ. ಇದರಿಂದ ರಫ್ತು ಸುಲಭವಾಗುತ್ತದೆ ಎಂದು  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ :  ರಿಲಯನ್ಸ್ ಜಿಯೋದ 7ನೇ ವಾರ್ಷಿಕೋತ್ಸವ: ಗ್ರಾಹಕರಿಗೆ ಬಂಪರ್ ಆಫರ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್

Trending News