10 ಸಾವಿರಕ್ಕಿಂತ ಕಡಿಮೆ ಬೆಲೆಗೆ 5G ಫೋನ್ ! ಫೋನ್ ಖರೀದಿಸಲು ಇದೆ ನಾಲ್ಕು ಪ್ರಮುಖ ಕಾರಣ

ಈ ಫೋನ್ ನಿಖರವಾಗಿ Redmi 12 5G ಯ ​​ಅನುಭವವನ್ನು ನೀಡುತ್ತದೆ. POCO M6 Pro 5G ವಿಶೇಷತೆ  ಎನ್ನುವ ವಿವರವಾದ ಮಾಹಿತಿ ಇಲ್ಲಿದೆ. 

Written by - Ranjitha R K | Last Updated : Sep 21, 2023, 01:10 PM IST
  • ಮಾರುಕಟ್ಟೆಗೆ POCO M6 Pro 5G ಅನ್ನು ಬಿಡುಗಡೆ
  • Poco M6 Pro 5G ವಿಮರ್ಶೆ
  • Poco M6 Pro 5G ಬೆಲೆ
10 ಸಾವಿರಕ್ಕಿಂತ ಕಡಿಮೆ ಬೆಲೆಗೆ  5G ಫೋನ್ ! ಫೋನ್ ಖರೀದಿಸಲು ಇದೆ ನಾಲ್ಕು ಪ್ರಮುಖ ಕಾರಣ  title=

ಬೆಂಗಳೂರು : POCO ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ POCO M6 Pro 5G ಅನ್ನು ಬಿಡುಗಡೆ ಮಾಡಿದೆ. ಈ ಫೋನ್ Snapdragon 4 Gen 2 ನಿಂದ ಚಾಲಿತವಾಗಿದೆ. ಇದು 6.7 ಇಂಚಿನ ಡಿಸ್ಪ್ಲೇ, 50MP ಕ್ಯಾಮೆರಾ ಮತ್ತು 5000mAh ಬ್ಯಾಟರಿಯನ್ನು ಹೊಂದಿದೆ. ಫೋನ್‌ನ ವಿನ್ಯಾಸ ಮತ್ತು ವೈಶಿಷ್ಟ್ಯಗಳು ಅದ್ಭುತವಾಗಿವೆ. ಈ ಫೋನ್ ನಿಖರವಾಗಿ Redmi 12 5G ಯ ​​ಅನುಭವವನ್ನು ನೀಡುತ್ತದೆ. POCO M6 Pro 5G ವಿಶೇಷತೆ  ಎನ್ನುವ ವಿವರವಾದ ಮಾಹಿತಿ ಇಲ್ಲಿದೆ. 

Poco M6 Pro 5G ವಿಮರ್ಶೆ: ವಿನ್ಯಾಸ 
POCO M6 Pro ವಿನ್ಯಾಸವು Redmi 12 5G ನಂತೆ ಕಾಣುತ್ತದೆ. ಫೋನ್ ಡ್ಯುಯಲ್ ಟೋನ್ ಫಿನಿಶ್‌ನೊಂದಿಗೆ ಬರುತ್ತದೆ. ಫೋನ್ ಆಯತಾಕಾರದ ಕ್ಯಾಮೆರಾ ಬಾರ್ ಅನ್ನು ಹೊಂದಿದ್ದು, ಎರಡು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ.  Redmi 12 5G ಮತ್ತು M6 Proನ  ಗ್ಲಾಸ್ ಬ್ಯಾಕ್ ಮತ್ತು ಎರಡೂ ಕ್ಯಾಮೆರಾ ರಿಂಗ್‌ಗಳು ಒಂದೇ ರೀತಿ ಕಾಣುತ್ತವೆ. ಕೆಳಭಾಗದಲ್ಲಿ USB ಟೈಪ್-C ಪೋರ್ಟ್‌ನೊಂದಿಗೆ ಸ್ಪೀಕರ್ ಗ್ರಿಲ್ ಮತ್ತು ಮೇಲ್ಭಾಗದಲ್ಲಿ 3.5mm ಜ್ಯಾಕ್ ಮತ್ತು IR ಬ್ಲಾಸ್ಟ್ ನೀಡಲಾಗಿದೆ. ಸಿಮ್ ಮತ್ತು ಮೈಕ್ರೊ ಎಸ್ಡಿ ಸ್ಲಾಟ್ ಇದರಲ್ಲಿ ಲಭ್ಯವಿದೆ.

ಇದನ್ನೂ ಓದಿ : iPhone 15 Pro Maxನಂತೆ ಕಾಣುವ 3D ಡಿಸ್ಪ್ಲೇ ಹೊಂದಿರುವ ಅಗ್ಗದ ಸ್ಮಾರ್ಟ್‌ಫೋನ್!

Poco M6 Pro 5G ವಿಮರ್ಶೆ: ಡಿಸ್ಪ್ಲೇ 
POCO M6 Pro 5G ಸೆಲ್ಫಿ ಕ್ಯಾಮೆರಾಗಾಗಿ ಸೆಂಟ್ರಲ್ ಪಂಚ್ ಹೋಲ್ ಕ್ಯಾಮೆರಾವನ್ನು ಹೊಂದಿದೆ. 6.71-ಇಂಚಿನ FHD + 90Hz ರಿಫ್ರೆಶ್ ರೇಟ್ ಡಿಸ್ಪ್ಲೇ ಇದೆ. ಫೋನ್ 550 ನಿಟ್‌ಗಳ ಗರಿಷ್ಠ  ಬ್ರೈಟ್ ನೆಸ್ ಅನ್ನು ಸಪೋರ್ಟ್ ಮಾಡುತ್ತದೆ.  

Poco M6 Pro 5G ವಿಮರ್ಶೆ: ಕ್ಯಾಮೆರಾ
ಫೋನ್ ಹಿಂಭಾಗದಲ್ಲಿ 50MP ಪ್ರೈಮರಿ ಸೆನ್ಸಾರ್ ಮತ್ತು 2MP  ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾ ಇದೆ. ಫೋಟೋಗಳು ಹಗಲು ಬೆಳಕಿನಲ್ಲಿ ಸಾಕಷ್ಟು ಸ್ಪಷ್ಟವಾಗಿ ಮತ್ತು ಅದ್ಭುತವಾಗಿ ಮೂಡಿಬರುತ್ತವೆ. ಪ್ರಾಥಮಿಕ ಕ್ಯಾಮೆರಾ ಉತ್ತಮವಾಗಿದೆ. ಆದರೆ ರಾತ್ರಿ ವೇಳೆ  ಫೋಟೋಗಳು ಅಷ್ಟು ಸ್ಪಷ್ಟವಾಗಿ ಮೂಡಿ ಬರುವುದಿಲ್ಲ. ಲೆನ್ಸ್ ಕೂಡ ತೃಪ್ತಿಕರವಾಗಿದೆ. 

ಇದನ್ನೂ ಓದಿ : ಇನ್ಮುಂದೆ ಮನೆಯಿಂದಲೇ ಯಾವುದೇ ಜಂಜಾಟಿಲ್ಲದೆ ನಿಮ್ಮ ವಿವಾಹ ನೋಂದಣಿ ಮಾಡಿ ಪ್ರಮಾಣಪತ್ರ ಪಡೆದುಕೊಳ್ಳಿ!

Poco M6 Pro 5G ವಿಮರ್ಶೆ: ಕಾರ್ಯಕ್ಷಮತೆ 
POCO M6 Pro ಸ್ನಾಪ್‌ಡ್ರಾಗನ್ 4 Gen 2 ನಿಂದ ಚಾಲಿತವಾಗಿದೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಸಾಮಾನ್ಯ ಬ್ರೌಸಿಂಗ್, ಸಾಮಾಜಿಕ ಮಾಧ್ಯಮ ಬಳಕೆ, ಸ್ಟ್ರೀಮಿಂಗ್ ಮತ್ತು  ಮೆಸ್ಸೇಜ್ ಅನ್ನು ಸುಲಭವಾಗಿ ಮಾಡಬಹುದು. ಆದರೆ, ಮಲ್ಟಿ ಟಾಸ್ಕಿಂಗ್ ಮತ್ತು ಗೇಮಿಂಗ್ ನಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. 

Poco M6 Pro 5G ವಿಮರ್ಶೆ: ಬ್ಯಾಟರಿ
Poco M6 Pro 5G 5000mAhನ ಶಕ್ತಿಶಾಲಿ ಬ್ಯಾಟರಿಯನ್ನು ಹೊಂದಿದೆ. ಸಾಮಾನ್ಯ ಬಳಕೆಯಲ್ಲಿ ಒಂದು ಸಲ ಫುಲ್ ಚಾರ್ಜ್ ಮಾಡಿದರೆ ದಿನವಿಡೀ ಆರಾಮಾಗಿ ಬಳಸಬಹುದು. ಮತ್ತೆ ಮತ್ತೆ ಚಾರ್ಜ್ ಮಾಡುವ ಅಗತ್ಯವಿಲ್ಲ. ಆದರೆ, ಚಾರ್ಜ್ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಇದು 22.5W ಚಾರ್ಜರ್ ಅನ್ನು ಹೊಂದಿದೆ. ಫೋನ್ ಅನ್ನು ಎರಡು ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. 

ಇದನ್ನೂ ಓದಿ : ಬೇಸಿಗೆಯ ಧಗೆ ನೀಗಿಸಲು ಎಸಿಯೇ ಬೇಕೆಂದಿಲ್ಲ ! 6 ಸಾವಿರ ಮೌಲ್ಯದ ಈ ಸಾಧನ ಇದ್ದರೂ ಸಾಕು

Poco M6 Pro 5G ವಿಮರ್ಶೆ: 
POCO M6 Pro ನಿಖರವಾಗಿ Redmi 12 5Gನಂತೆ ಕಾಣುತ್ತದೆ. 4GB RAM ರೂಪಾಂತರದ ಬೆಲೆ 9,999 ರೂ. ಅಂದರೆ ನೀವು 10,000 ರೂಪಾಯಿಯೊಳಗೆ 5G ಫೋನ್ ಅನ್ನು ಖರೀದಿಸಬಹುದು. ಸಾಮಾನ್ಯ ಬಳಕೆಗಾಗಿ ಫೋನ್ ಖರೀದಿಸುವುದಾದರೆ ಇದು ಉತ್ತಮ ಆಯ್ಕೆ.  6GB ರೂಪಾಂತರದ ಬೆಲೆ 12,999 ರೂ. 

 ಈ 4 ಕಾರಣಗಳಿಗಾಗಿ ಫೋನ್ ಖರೀದಿಸಬಹುದು :
ಫೋನ್ ಡ್ಯುಯಲ್ ಟೋನ್ ವಿನ್ಯಾಸದಲ್ಲಿ ಬರುತ್ತದೆ, ಇದು ತುಂಬಾ ಸ್ಟೈಲಿಶ್ ಆಗಿ ಕಾಣುತ್ತದೆ.
ಫೋನ್ ಪ್ರತಿದಿನವೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಫೋನ್‌ನ ಬ್ಯಾಟರಿ ಬಾಳಿಕೆ ಸಾಕಷ್ಟು ಉತ್ತಮವಾಗಿದೆ.  
ಫೋನ್ ಹಗಲು ಬೆಳಕಿನಲ್ಲಿ ಉತ್ತಮ ಫೋಟೋಗಳನ್ನು ಕ್ಲಿಕ್ ಮಾಡುತ್ತದೆ.

 ಖರೀದಿಸದೆ ಇರುವುದಕ್ಕ್ಕೆಕೂ ಇದೆ ಕಾರಣ : 
- ಅನೇಕ ಪ್ರೀ ಲೋಡೆಡ್ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳು ಫೋನ್‌ನಲ್ಲಿ ಬರುತ್ತವೆ.
- ಪೂರ್ಣವಾಗಿ ಫೋನ್ ಚಾರ್ಜ್ ಆಗಲು 2 ಗಂಟೆ ತೆಗೆದುಕೊಳ್ಳುತ್ತದೆ.
- POCO M6 Pro Redmi 12 5G ಗೆ ಹೋಲುತ್ತದೆ.

ಇದನ್ನೂ ಓದಿ : ಫೋನ್ನಲ್ಲಿ ಪದೇ ಪದೇ ನೆಟ್‌ವರ್ಕ್ ಸಮಸ್ಯೆ ಕಾಡುತ್ತಿದೆಯೇ? ಇಲ್ಲಿದೆ ಸುಲಭ ಪರಿಹಾರ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News