Cheap and Best Electric Scooter IME Rapid : ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದಾಗಿ ಜನರು ಈಗ ಎಲೆಕ್ಟ್ರಿಕ್ ವಾಹನಗಳತ್ತ ಒಲವು ತೋರುತ್ತಿದ್ದಾರೆ. ಆಟೋ ಮಾರುಕಟ್ಟೆಯಲ್ಲಿ ಬ್ಯಾಟರಿ ಚಾಲಿತ ಕಾರುಗಳು ಮತ್ತು ಬೈಕ್-ಸ್ಕೂಟರ್ಗಳನ್ನು ಪ್ರತಿ ತಿಂಗಳು ಬಿಡುಗಡೆ ಮಾಡಲಾಗುತ್ತಿದೆ. ವಿಶೇಷವೆಂದರೆ ಈಗ ಹಳೆಯ ಆಟೋ ಬ್ರಾಂಡ್ಗಳು ಮಾತ್ರವಲ್ಲದೆ ಅನೇಕ ಹೊಸ ಸ್ಟಾರ್ಟ್ಅಪ್ಗಳು ತಲೆ ಎತ್ತುತ್ತಿವೆ. ಆಧುನಿಕ ಫೀಚರ್ಗಳೊಂದಿಗೆ ಹೊಸ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಹತ್ತು ಹಲವು ಆಯ್ಕೆಗಳನ್ನು ನೀಡುತ್ತಿವೆ.
ಒಂದೇ ಚಾರ್ಜ್ನಲ್ಲಿ ಕ್ರಮಿಸುವುದು 300 ಕಿ. ಮೀ ದೂರ :
ದ್ವಿಚಕ್ರ ವಾಹನ ವಿಭಾಗವನ್ನು ಗಮನಿಸುವುದಾದರೆ ಬ್ಯಾಟರಿ ಚಾಲಿತ ಸ್ಕೂಟರ್ಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಅಂತಹ ಒಂದು ಸ್ಟಾರ್ಟ್ ಅಪ್ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಅದು ಕೂಡಾ ಕೈಗೆಟಕುವ ದರದಲ್ಲಿ. ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ ಈ ಸ್ಕೂಟರ್ ಅನ್ನು 300 ಕಿ.ಮೀ ತಡೆರಹಿತವಾಗಿ ಚಲಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಈ ಸ್ಕೂಟರ್ನ ಹೆಸರು IME Rapid.ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೆಲವು ಸಮಯದ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ : Do Aliens Exists: ತನ್ನ ಯುಎಫ್ಓ-ಎಲಿಯನ್ ಗಳ ಕುರಿತಾದ ವರದಿಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗಗೊಳಿಸಿದ ನಾಸಾ!
ಎಲೆಕ್ಟ್ರಿಕ್ ಸ್ಕೂಟರ್ನ ರೇಂಜ್ ಎಷ್ಟು? :
ಕಂಪನಿಯ ಪ್ರಕಾರ, ಈ ಸ್ಕೂಟರ್ 2000w ಮೋಟಾರ್ (2kWh ಮೋಟಾರ್) ಹೊಂದಿದೆ. 3 ಶ್ರೇಣಿಗಳನ್ನು ಹೊಂದಿರುವ ಈ ಸ್ಕೂಟರ್ನ ವಿವಿಧ ರೂಪಾಂತರಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇವುಗಳಲ್ಲಿ ಮೊದಲನೆಯದು 100 ಕಿಮೀ ವ್ಯಾಪ್ತಿಯನ್ನು ಹೊಂದಿದೆ. ಅಂದರೆ ಒಮ್ಮೆ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಸ್ಕೂಟರ್ 100 ಕಿಮೀ ವರೆಗೆ ಓಡಬಹುದು. ಎರಡನೇ ವರ್ಗವು 200 ಕಿಮೀ ವರೆಗೆ ಮತ್ತು ಮೂರನೇ ವರ್ಗವು 300 ಕಿಮೀ ವರೆಗಿನ್ ರೇಂಜ್ ನೀಡುತ್ತದೆ. ಈ ಸ್ಕೂಟರ್ ಮೂಲಕ ಆರಾಮವಾಗಿ ದೂರದವರೆಗೆ ಪ್ರಯಾಣಿಸಬಹುದು ಎಂದು ಕಂಪನಿ ಹೇಳಿದೆ.
ಸ್ಕೂಟರ್ ಬೆಲೆ ಎಷ್ಟು ? :
ಕಂಪನಿಯು ಈ ಸ್ಕೂಟರ್ ಅನ್ನು ಮೊದಲು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ. ಮುಂಬರುವ ಕೆಲವು ವಾರಗಳಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕರ್ನಾಟಕದ 20-25 ನಗರಗಳು ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ಬಿಡುಗಡೆ ಮಾಡಲಾಗುವುದು. ಈ ಸ್ಕೂಟರ್ ಮಾರಾಟಕ್ಕಾಗಿ ಕಂಪನಿಯು ಫ್ರಾಂಚೈಸ್ ಒನ್ದ್ ಕಂಪನಿ ಆಪರೇಟೆಡ್ (FOCO) ಮಾದರಿಯನ್ನು ಪರಿಗಣಿಸುತ್ತಿದೆ. ಇನ್ನು ಈ ಸ್ಕೂಟರ್ನ ಬೆಲೆ ಎಷ್ಟು ಎಂದು ನೋಡುವುದಾದರೆ ಇದರ ಆರಂಭಿಕ ಬೆಲೆ 99 ಸಾವಿರದಿಂದ 1.48 ಲಕ್ಷ ರೂ. ದವರೆಗೆ ಇದೆ. ಇದನ್ನು ಖರೀದಿಸುವ ಮೂಲಕ ನೀವು ಇಂಧನ ಮತ್ತು ಹಣವನ್ನು ಸಹ ಉಳಿಸಬಹುದು.
ಇದನ್ನೂ ಓದಿ : ಐಫೋನ್ 15 ಮರೆತುಬಿಡಿ! ಈ 5 ಅತ್ಯಾಕರ್ಷಕ ವೈಶಿಷ್ಟ್ಯಗಳು iPhone 16ನಲ್ಲಿ ಲಭ್ಯವಿರುತ್ತವೆ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ