Cars With Air Purifier: ಕಾಡುಗಳ ನಾಶ ಹಾಗೂ ಆಧುನಿಕತೆಯ ಬೆಳವಣಿಗೆಯೊಂದಿಗೆ ವಾಯು ಮಾಲಿನ್ಯ ಹೆಚ್ಚಾಗಿದೆ.  ಇಂತಹ ಸಂದರ್ಭದಲ್ಲಿ ನೀವು ಏರ್ ಪ್ಯೂರಿಫೈಯರ್ ಕಾರ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ಲೇಖನದಲ್ಲಿದೆ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಟಾಪ್ 5 ಏರ್ ಪ್ಯೂರಿಫೈಯರ್ ಕಾರುಗಳ ಪಟ್ಟಿ. 


COMMERCIAL BREAK
SCROLL TO CONTINUE READING

ಏರ್ ಪ್ಯೂರಿಫೈಯರ್‌ಗಳೊಂದಿಗೆ ಬರುವ ಟಾಪ್ 5 ಬಜೆಟ್ ಸ್ನೇಹಿ ಕಾರುಗಳೆಂದರೆ:- 
ಕಿಯಾ ಸೋನೆಟ್: 

ಏರ್ ಪ್ಯೂರಿಫೈಯರ್‌ನೊಂದಿಗೆ ಲಭ್ಯವಿರುವ ಕೈಗೆಟುವ ಬೆಲೆಯ ಕಾರುಗಳ ಪಟ್ಟಿಯಲ್ಲಿ  ಕಿಯಾ ಸೋನೆಟ್ ಕಾರ್ ಪ್ರಥಮ ಸ್ಥಾನದಲ್ಲಿದೆ. ಎಚ್‌ಟಿ‌ಕೆ ಪ್ಲಸ್ ರೂಪಾಂತರದೊಂದಿಗೆ ಲಭ್ಯವಿರುವ ಈ ಕಾರ್ ಅನ್ನು ಸ್ಮಾರ್ಟ್ ಪ್ಯೂರ್ ಏರ್ ಪ್ಯೂರಿಫೈಯರ್ ಕಾರ್ ಎಂದು ಕರೆಯಲಾಗುತ್ತದೆ. ಏರ್ ಪ್ಯೂರಿಫೈಯರ್ ಘಟಕವು ಮುಂಭಾಗದ ಆಸನಗಳ ನಡುವೆ ಸೆಂಟರ್ ಕನ್ಸೋಲ್ ಆರ್ಮ್‌ರೆಸ್ಟ್‌ನಲ್ಲಿದ್ದು ಇದು ವೈರಸ್ ಮತ್ತು ಬ್ಯಾಕ್ಟೀರಿಯಾದಿಂದ ರಕ್ಷಣೆ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಕಾರ್ ಬೆಲೆ  9.64 ಲಕ್ಷ (ಎಕ್ಸ್ ಶೋ ರೂಂ) ರೂ.ಗಳು. 


ಹ್ಯುಂಡೈ ವೆನ್ಯೂ: 
ಭಾರತದ ಪ್ರಸಿದ್ದ ಕಾರು ಕಂಪನಿಗಳಲ್ಲಿ ಒಂದಾದ ಹುಂಡೈ ಕಂಪನಿಯ ಹ್ಯುಂಡೈ ವೆನ್ಯೂ ಅಂತರ್ನಿರ್ಮಿತ ಏರ್ ಪ್ಯೂರಿಫೈಯರ್‌ ಕಾರ್ ಕೂಡ ಬಜೆಟ್ ಸ್ನೇಹಿ ಕಾರ್ ಎಂತಲೇ ಹೇಳಬಹುದು. ಇದರ ಬೆಲೆ 9.76 ಲಕ್ಷ (ಎಕ್ಸ್ ಶೋ ರೂಂ) ರೂ.ಗಳು. 


ಇದನ್ನೂ ಓದಿ- Free... Free...Free.. ಗ್ರಾಹಕರಿಗೆ ದೀಪಾವಳಿ ಹಬ್ಬಕ್ಕೆ ಬಂಬಾಟ್ ಉಡುಗೊರೆ ನೀಡಿದೆ ಈ ಟೆಲಿಕಾಂ ಕಂಪನಿ!


ಕಿಯಾ ಸೆಲ್ಟೋಸ್: 
ಕಿಯಾ ಕಂಪನಿ ಸೋನೆಟ್‌ನಂತೆ, ಕಿಯಾ ಸೆಲ್ಟೋಸ್ ಕೂಡ ಏರ್ ಪ್ಯೂರಿಫೈಯರ್‌ನೊಂದಿಗೆ ಲಭ್ಯವಿರುವ ಕಡಿಮೆ ಬಜೆಟ್ ಕಾರ್ ಆಗಿದ್ದು ಇದರ ಬೆಲೆ 2.10 ಲಕ್ಷದಿಂದ (ಎಕ್ಸ್ ಶೋ ರೂಂ)  ಪ್ರಾರಂಭವಾಗುತ್ತದೆ. 


ಟಾಟಾ ನೆಕ್ಸನ್: 
ಅತ್ಯಂತ ಜನಪ್ರಿಯ ಸಬ್-4 ಮೀಟರ್ ಎಸ್‌ಯುವಿ ಕಾರ್ ಆಗಿರುವ ಹೊಸ ಟಾಟಾ ನೆಕ್ಸಾನ್ ಧೂಳಿನ ಸಂವೇದಕದೊಂದಿಗೆ ಏರ್ ಪ್ಯೂರಿಫೈಯರ್ ಅನ್ನು ಹೊಂದಿದೆ. ಇದರ ಬೆಲೆ 12.50 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. 


ಇದನ್ನೂ ಓದಿ- Electricity Bill: ವಿದ್ಯುತ್ ಬಿಲ್ ಕಡಿಮೆ ಮಾಡಲು ನಿಮ್ಮ ಮನೆಯ ಈ 3 ಗ್ಯಾಜೆಟ್‌ಗಳನ್ನು ಇಂದೇ ಬದಲಾಯಿಸಿ


ಹ್ಯುಂಡೈ ವೆರ್ನಾ: 
ಹ್ಯುಂಡೈ ಕಂಪನಿಯ ಮತ್ತೊಂದು ಏರ್ ಪ್ಯೂರಿಫೈಯರ್ ಕಾರ್ ಎಂದರೆ ಹ್ಯುಂಡೈ ಉನ್ನತ-ಸ್ಪೆಕ್ SX (O) ರೂಪಾಂತರದ ಕಾರ್. ಅದರ ವಿಭಾಗದಲ್ಲಿ ಏರ್ ಪ್ಯೂರಿಫೈಯರ್ ಹೊಂದಿರುವ ಏಕೈಕ ಕಾಂಪ್ಯಾಕ್ಟ್ ಸೆಡಾನ್‌ ಕಾರ್ ಇದಾಗಿದೆ. ಇದರ ಬೆಲೆ 14.66 ಲಕ್ಷ (ಎಕ್ಸ್ ಶೋ ರೂಂ) ರೂ. ಆಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.