Airtel offers free recharge pack to low-income customers: ಕೊವಿಡ್ -19 ಮಹಾಮಾರಿಯ (Corona Pandemic) ನಡುವೆ ಜನರಿಗೆ ಪರಸ್ಪರ ಸಂಪರ್ಕದಲ್ಲಿರಲು ಸಹಾಯ ಮಾಡಲು ಭಾರ್ತಿ ಏರ್ಟೆಲ್ (Airtel) ಕಂಪನಿ ತನ್ನ ನೆಟ್ವರ್ಕ್ ನಲ್ಲಿರುವ ಕಡಿಮೆ ಆದಾಯಹೊಂದಿರುವ ಸುಮಾರು 5. 5 ಕೋಟಿ ಗ್ರಾಹಕರಿಗೆ 49 ರೂ.ಗಳ ಉಚಿತ ರಿಚಾರ್ಜ್ ನೀಡುತ್ತಿದೆ. ಇದಲ್ಲದೆ ರೂ.79 ರಿಚಾರ್ಜ್ ಕೂಪನ್ ಖರೀದಿಸುವ ಪ್ರೀಪೇಡ್ ಗ್ರಾಹಕರಿಗೆ ದುಪ್ಪಟ್ಟು ಲಾಭ ಸಿಗಲಿದೆ.


COMMERCIAL BREAK
SCROLL TO CONTINUE READING

ಭಾನುವಾರ ಈ ಕುರಿತು ಹೇಳಿಕೆ ನೀಡಿರುವ ಏರ್ಟೆಲ್, ತನ್ನ ನೆಟ್ವರ್ಕ್ ನಲ್ಲಿರುವ ಕಡಿಮೆ ಆದಾಯ ಹೊಂದಿರುವ 5.5 ಕೋಟಿ ಗ್ರಾಹಕರಿಗೆ ರೂ.49 ರ ಪ್ಯಾಕ್ ಅನ್ನು ಉಚಿತವಾಗಿ (Airtel Free Recharge Pack) ನೀಡುವುದಾಗಿ ಘೋಷಿಸಿದೆ. ಈ ಪ್ಯಾಕ್ ನಲ್ಲಿ ಗ್ರಾಹಕರಿಗೆ 38 ರೂ.ಗಳ ಟಾಕ್ ಟೈಮ್ 28 ದಿನಗಳ ಅವಧಿಗೆ ಸಿಗಲಿದೆ. ಜೊತೆಗೆ 100 ಎಂಬಿ ಡೇಟಾ ಕೂಡ ಸಿಗಲಿದೆ. ಇದರಿಂದ ಕಂಪನಿಯ ಮೇಲೆ ರೂ.270 ಕೋಟಿ ರೂ ಹೊರೆಬೀಳಲಿದೆ.


ಈ ಕುರಿತು ಹೇಳಿಕೆ ನೀಡಿರುವ ಟೆಲಿಕಾಂ ಕಂಪನಿ, " ಏರ್ಟೆಲ್ 5.5 ಕೋಟಿ ಗ್ರಾಹಕರಿಗೆ ಒಂದು ಬಾರಿಯ ಸಹಾಯದ ರೂಪದಲ್ಲಿ ರೂ.49 ಪ್ಯಾಕ್ (Airtel New Recharge Pack) ನೀಡುತ್ತಿದೆ. ಇದರಲ್ಲಿ 38 ರೂಗಳ ಟಾಕ್ ಟೈಮ್ ಇರಲಿದ್ದು, ಇದರ ಸಿಂಧುತ್ವ 28 ದಿನಗಳದ್ದಾಗಿರಲಿದೆ.  ಈ ಪ್ಲಾನ್ ನಲ್ಲಿ 100 ಡೇಟಾ ಸಿಗಲಿದೆ. ಸುಮಾರು 5.5 ಕೋಟಿ ಗ್ರಾಹಕರಿಗೆ ಪರಸ್ಪರ ಸಂಪರ್ಕದಲ್ಲಿರಲು ಹಾಗೂ ಅಗತ್ಯವಿರುವಾಗ ಮಹತ್ವದ ಮಾಹಿತಿ ವಿನಿಮಯ ಮಾಡಿಕೊಳ್ಳಲು ಸಹಾಯ ಮಾಡಲಿದೆ" ಎಂದು ಹೇಳಿದೆ. ಈ ಲಾಭ ಏರ್ಟೆಲ್ ಗ್ರಾಹಕರಿಗೆ ಮುಂದಿನ ವಾರದಲ್ಲಿ ಸಿಗಲಿದೆ ಎಂದು ಕಂಪನಿ ಹೇಳಿದೆ.


ಇದಕ್ಕೂ ಮೊದಲು ಭಾರ್ತಿ ಏರ್ಟೆಲ್ ತನ್ನ ಡಿಜಿಟಲ್ ಪ್ಲಾಟ್ಫಾರ್ಮ್ ಮೂಲಕ ಗ್ರಾಹಕರಿಗಾಗಿ ಕೊವಿಡ್ (Covid-19) ರಿಲೀಫ್ ಗೆ ಸಂಬಂಧಿಸಿದಂತೆ ನೂತನ ಉಪಕ್ರಮವೊಂದನ್ನು ಆರಂಭಿಸಿದೆ . ಇದರ ಜೊತೆಗೆ ಕೊವಿಡ್ ಮಹಾಮಾರಿಯ ಎರಡನೇ ಅಲೆಯ ಕಾಲದಲ್ಲಿ ಜನರಿಗೆ ಸಹಾಯ ಮಾಡಲು ತಮ್ಮ ತಮ್ಮ ಡಿಜಿಟಲ್ ಪ್ಲಾಟ್ ಫಾರಂಗಳ ಮೇಲೆ ವಿವಿಧ ರೀತಿಯ ಸೌಲಭ್ಯಗಳನ್ನು ಒದಗಿಸಿರುವ ಕಂಪನಿಗಳ ಪಟ್ಟಿಗೆ ಭಾರತಿ ಏರ್ಟೆಲ್ ಕೂಡ ಸೇರಿದೆ. 


ಇದನ್ನೂ ಓದಿ- Amazon Launches MiniTV: ಭಾರತದಲ್ಲಿ miniTV ಪ್ಲಾಟ್ ಫಾರ್ಮ್ ಬಿಡುಗಡೆ ಮಾಡಿದ Amazon


ಈ ಕುರಿತು ಹೇಳಿರುವ ಕಂಪನಿ ತುಂಬಾ ಸುಲಭವಾಗಿ ತಲುಪಬಹುದಾದ ಕೊವಿಡ್ ಸಹಾಯಕ ಸಂಪನೂಲಗಳು ಹಾಗೂ ಸಂಬಂಧಿದ ಮಾಹಿತಿಯನ್ನು ಏರ್ಟೆಲ್ ಥ್ಯಾಂಕ್ಸ್ ಆಪ್ ನ ಎಕ್ಸ್ಪ್ಲೋರರ್ ಸೆಕ್ಷನ್ ನಲ್ಲಿ ಇಂಟಿಗ್ರೇಟ್ ಮಾಡಲಾಗಿದೆ. ಬಳಕೆದಾರರು ಆಪ್ ನ ಲೇಟೆಸ್ಟ್ ವರ್ಶನ್ ಅನ್ನು ಡೌನ್ ಲೋಡ್ ಮಾಡಿ ಎಕ್ಸ್ಪ್ಲೋರರ್ ಸೆಕ್ಷನ್ ಗೆ ಭೇಟಿ ನೀಡಿ ಕೊವಿಡ್ ಸಪೋರ್ಟ್ ಬ್ಯಾನರ್ ಮೇಲೆ ಕ್ಲಿಕ್ಕಿಸಬೇಕು ಎಂದು ಹೇಳಿದೆ.


ಇದನ್ನೂ ಓದಿ-Jio ಗ್ರಾಹಕರಿಗೆ ಗುಡ್ ನ್ಯೂಸ್, ಈ ಬಳಕೆದಾರರಿಗೆ ಸಿಗಲಿದೆ Free ಟಾಕ್ ಟೈಮ್


ಔಷಧಿಗಳು, ಆಮ್ಲಜನಕ, ಪ್ಲಾಸ್ಮಾ ದಾನಿಗಳು, ಆಂಬ್ಯುಲೆನ್ಸ್, ಆಸ್ಪತ್ರೆ, ಬೆಡ್ ಹಾಗೂ ಪರೀಕ್ಷಾ ಕೇಂದ್ರಗಳಂತಹ ಅಗತ್ಯ ಮಾಹಿತಿ, ಕೊವಿಡ್ SOS ಪರೀಶೀಲನೆ ಹಾಗೂ ಅಪ್ಡೇಟೆಡ್ ಕಂಟೆಂಟ್ ಅನ್ನು ಇದರಲ್ಲಿ ಸಂಗರ್ಹಿಸಲಾಗಿದೆ ಎಂದು ಕಂಪನಿ ಹೇಳಿದೆ.


ಇದನ್ನೂ ಓದಿ- Alert! ನಕಲಿ CoWin Appಗಳ ಬಗ್ಗೆ ಎಚ್ಚರ ಎಂದ ಸರ್ಕಾರ, ಈ 5 ಫೈಲ್ಸ್ ಡೌನ್ ಲೋಡ್ ಮಾಡಬೇಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.