Jio ಗ್ರಾಹಕರಿಗೆ ಗುಡ್ ನ್ಯೂಸ್, ಈ ಬಳಕೆದಾರರಿಗೆ ಸಿಗಲಿದೆ Free ಟಾಕ್ ಟೈಮ್

ರಿಲಯನ್ಸ್ ಜಿಯೋ (Reliance Jio) ತನ್ನ ಬಳಕೆದಾರರಿಗೆ ಉಚಿತ ಟಾಕ್ ಟೈಮ್ ಘೋಷಿಸುವ ಮೊದಲ ಕಂಪನಿಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

Written by - Yashaswini V | Last Updated : May 15, 2021, 08:15 AM IST
  • ದೇಶದಲ್ಲಿ ಕರೋನಾ ಸಾಂಕ್ರಾಮಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಂಪನಿ ಈ ಕೊಡುಗೆ ನೀಡುತ್ತಿದೆ
  • ರಿಲಯನ್ಸ್ ಜಿಯೋ ಮೇ 14 ರಂದು ರಿಲಯನ್ಸ್ ಫೌಂಡೇಶನ್‌ನೊಂದಿಗೆ ತಿಂಗಳಿಗೆ 300 ನಿಮಿಷಗಳ ಉಚಿತ ಟಾಕ್ ಟೈಮ್ ಒದಗಿಸಲು ಕೆಲಸ ಮಾಡುತ್ತಿದೆ
  • ಸಾಂಕ್ರಾಮಿಕ ಯುಗದ ಈ ಹಂತದಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ಸಂಪರ್ಕವನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು ಜಿಯೋ ಬಯಸುತ್ತದೆ
Jio ಗ್ರಾಹಕರಿಗೆ ಗುಡ್ ನ್ಯೂಸ್, ಈ ಬಳಕೆದಾರರಿಗೆ ಸಿಗಲಿದೆ Free ಟಾಕ್ ಟೈಮ್ title=
File Image

ನವದೆಹಲಿ: ರಿಲಯನ್ಸ್ ಜಿಯೋ ಗ್ರಾಹಕರಿಗೆ ಒಳ್ಳೆಯ ಸುದ್ದಿ. ಜಿಯೋ ತನ್ನ ಕೆಲವು ಬಳಕೆದಾರರಿಗೆ ಉಚಿತ ಟಾಕ್ ಟೈಮ್ ಸೌಲಭ್ಯವನ್ನು ನೀಡಲಿದೆ. ದೇಶದಲ್ಲಿ ಕರೋನಾ ಸಾಂಕ್ರಾಮಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಂಪನಿ ಈ ಕೊಡುಗೆ ನೀಡುತ್ತಿದೆ ಎಂದು ತಿಳಿದುಬಂದಿದೆ. ವಾಸ್ತವವಾಗಿ, ರಿಲಯನ್ಸ್ ಜಿಯೋ ಮೇ 14 ರಂದು ರಿಲಯನ್ಸ್ ಫೌಂಡೇಶನ್‌ನೊಂದಿಗೆ ತಿಂಗಳಿಗೆ 300 ನಿಮಿಷಗಳ ಉಚಿತ ಟಾಕ್ ಟೈಮ್ 
ಒದಗಿಸಲು ಕೆಲಸ ಮಾಡುತ್ತಿದೆ ಎಂದು ಕಂಪನಿ ತಿಳಿಸಿದೆ. 

ಸಾಂಕ್ರಾಮಿಕ ರೋಗದಿಂದಾಗಿ ರೀಚಾರ್ಜ್ ಮಾಡಿಸಲು ಸಾಧ್ಯವಾಗದಿರುವ ಜಿಯೋಫೋನ್ ಬಳಕೆದಾರರಿಗೆ ಈ ಯೋಜನೆಯ ಪ್ರಯೋಜನವನ್ನು ಲಭ್ಯವಾಗಲಿದೆ. ಕರೋನಾದ ಎರಡನೇ ತರಂಗದಲ್ಲಿ, ದೇಶದ ಹೆಚ್ಚಿನ ರಾಜ್ಯಗಳಲ್ಲಿ ಲಾಕ್‌ಡೌನ್ (Lockdown) ವಿಧಿಸಲಾಗಿದೆ ಮತ್ತು ಕಟ್ಟುನಿಟ್ಟಾದ ನಿರ್ಬಂಧಗಳಿಂದಾಗಿ ಜನರು ಹೊರ ಬಂದು ರಿಚಾರ್ಜ್ ಮಾಡಿಸುವುದು ಕಷ್ಟವಾಗಿದೆ. ಈ ಸಂದರ್ಭದಲ್ಲಿ, ಕಂಪನಿಯ ಈ ಕೊಡುಗೆ ಬಳಕೆದಾರರಿಗೆ ಪ್ರಯೋಜನಕಾರಿಯಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ - Redmi Note 10S: 5,000mAh ಬ್ಯಾಟರಿಯೊಂದಿಗೆ ಭಾರತದಲ್ಲಿ ಬಿಡುಗಡೆಯಾಗಿದೆ Redmi Note 10S ಸ್ಮಾರ್ಟ್‌ಫೋನ್

ಪಿಟಿಐ ಪ್ರಕಾರ, ರಿಲಯನ್ಸ್ ಜಿಯೋ (Reliance Jio) ತನ್ನ ಬಳಕೆದಾರರಿಗೆ ಉಚಿತ ಟಾಕ್ ಟೈಮ್ ಘೋಷಿಸುವ ಮೊದಲ ಕಂಪನಿಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ತಿಂಗಳಿಗೆ 300 ನಿಮಿಷಗಳ ಫ್ರೀ ಟಾಕ್ ಟೈಮ್ ನೀಡುವ ಯೋಜನೆಯಡಿ ಬಳಕೆದಾರರಿಗೆ ದಿನಕ್ಕೆ 10 ನಿಮಿಷಗಳ ಉಚಿತ ಟಾಕ್ ಟೈಮ್ ಸಿಗುತ್ತದೆ ಎಂದು ಜಿಯೋ ಕಂಪನಿ ತಿಳಿಸಿದೆ.

ಜಿಯೋಫೋನ್ ಗ್ರಾಹಕರು ಈ ಪ್ರಯೋಜನಗಳನ್ನು ಪಡೆಯಲಿದ್ದಾರೆ:
ಉಚಿತ ಟಾಕ್ ಟೈಮ್ ಹೊರತಾಗಿ, ಜಿಯೋಫೋನ್  ಗ್ರಾಹಕರಿಗೆ ರೀಚಾರ್ಜ್ ಮಾಡಿದ ಯೋಜನೆಯ ಅದೇ ಮೌಲ್ಯದ ಹೆಚ್ಚುವರಿ ರೀಚಾರ್ಜ್ ಯೋಜನೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಕಂಪನಿ ಹೇಳಿದೆ. ಆದಾಗ್ಯೂ, ಈ ಕೊಡುಗೆಗಳು ವಾರ್ಷಿಕ ಅಥವಾ ಜಿಯೋಫೋನ್ ಬಂಡ್‌ಪ್ಲಾನ್‌ಗೆ ಅನ್ವಯಿಸುವುದಿಲ್ಲ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ-  Best Prepaid Recharge: ಅಗ್ಗದ ದರದಲ್ಲಿ 84 ಜಿಬಿಗೂ ಅಧಿಕ 4G ಡಾಟಾ, ಈಗಲೇ ರೀಚಾರ್ಜ್ ಮಾಡಿ

ಸಾಂಕ್ರಾಮಿಕ ಯುಗದ ಈ ಹಂತದಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ಸಂಪರ್ಕವನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು ಜಿಯೋ ಬಯಸುತ್ತದೆ ಎಂದು ಕಂಪನಿ ಹೇಳುತ್ತದೆ. ಅಲ್ಲದೆ, ಎಲ್ಲಾ ಗ್ರಾಹಕರಿಗೆ ವಿಶೇಷವಾಗಿ ಸಮಾಜದ ಕೆಳವರ್ಗದವರು ಇದರ ಲಾಭವನ್ನು ಪಡೆಯುಯಲಿ ಎಂಬುದು ಕಂಪನಿಯ ಗುರಿ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News