ನವದೆಹಲಿ: Covishield Online Appointment - ಕರೋನಾ ವೈರಸ್ (Coronavirus) ವಿರುದ್ಧ ವ್ಯಾಕ್ಸಿನೇಷನ್ ಸಮಯದಲ್ಲಿ, ಈಗ ನೀವು 12 ವಾರಗಳ ನಂತರ ಕೋವಿಶೀಲ್ಡ್ ಲಸಿಕೆಗಾಗಿ ಅಪಾಯಿಂಟ್ಮೆಂಟ್ ಪಡೆಯಲಿರುವಿರಿ. ಕೋವಿಶೀಲ್ಡ್ನ ಎರಡನೇ ಡೋಸ್ಗೆ ಆನ್‌ಲೈನ್ ಅಪಾಯಿಂಟ್ಮೆಂಟ್ 84 ದಿನಗಳ ನಂತರ ಮಾತ್ರ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಭಾನುವಾರ ಸ್ಪಷ್ಟಪಡಿಸಿದೆ. ಆದರೆ, ಈಗಾಗಲೇ ಕೋವಿಶೀಲ್ಡ್ನ ಎರಡನೇ ಡೋಸ್ಗಾಗಿ ಯಾರು ತಮ್ಮ ಅಪಾಯಿಂಟ್ಮೆಂಟ್ ಪಡೆದುಕೊಂಡಿದ್ದಾರೆಯೋ, ಅದರ ಮೇಲೆ ಈ ನಿರ್ಧಾರ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ ಯಾವ ಜನರು ಈ ಮೊದಲು ಅಪಾಯಿಂಟ್ಮೆಂಟ್ ಅನ್ನು ಪಡೆದುಕೊಂಡಿದ್ದಾರೆಯೋ, ಅವರು ಈಗಿರುವ ಅಪಾಯಿಂಟ್ ಮೆಂಟ್ ಅನ್ನು 84 ದಿನಗಳ ಬಳಿಕ ರೀಶೆಡ್ಯೂಲ್ ಮಾಡಲು ಬಯಸಿದರೆ ಅವರು ಮಾಡಬಹುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಕೋವಿಶೀಲ್ಡ್ ಲಸಿಕೆಯ ಎರಡು ಪ್ರಮಾಣಗಳ ನಡುವಿನ ವಿಸ್ತೃತ ಅಂತರವನ್ನು ಗಮನದಲ್ಲಿಟ್ಟುಕೊಂಡು ಕೋವಿನ್ ಡಿಜಿಟಲ್ ಪೋರ್ಟಲ್‌ನಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಕೇಂದ್ರವು, "ಕೋವಿಶೀಲ್ಡ್ನ ಎರಡು ಪ್ರಮಾಣಗಳ ನಡುವೆ 12 ರಿಂದ 16 ವಾರಗಳ ಅಂತರವನ್ನು ತೋರಿಸಲು ಕೋವಿನ್ ಡಿಜಿಟಲ್ ಪೋರ್ಟಲ್ನಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಕೋವಿಶೀಲ್ಡ್ನ (Covishield) ಎರಡನೇ ಡೋಸ್ಗಾಗಿ ಮೊದಲೇ ಕಾಯ್ದಿರಿಸಿದ ಆನ್‌ಲೈನ್ ಅಪಾಯಿಂಟ್ಮೆಂಟ್ ಗಳು ಮುಂದುವರೆಯಲಿವೆ ಮತ್ತು ಅದನ್ನು ಕೋವಿನ್ ರದ್ದುಗೊಳಿಸುವುದಿಲ್ಲ" ಎಂದು ಹೇಳಿದೆ.
ಕಳೆದ ಕೆಲವು ತಿಂಗಳುಗಳಲ್ಲಿ ಎರಡನೇ ಬಾರಿಗೆ ಕೋವಿಶೀಲ್ಡ್ ಲಸಿಕೆಯ ಎರಡು ಪ್ರಮಾಣಗಳ ನಡುವಿನ ಅಂತರವನ್ನು ಹೆಚ್ಚಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ. ಮಾರ್ಚ್ನಲ್ಲಿ, ಇದಕ್ಕೆ ಸಂಬಂಧಿಸಿದಂತೆ ಸೂಚನೆ ನೀಡಿದ್ದ ಕೇಂದ್ರ ಆರೋಗ್ಯ ಸಚಿವಾಲಯ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆಯ ಎರಡು ಪ್ರಮಾಣಗಳ ನಡುವಿನ ಸಮಯದ ಅಂತರವನ್ನು 28 ದಿನಗಳಿಂದ 6 ರಿಂದ 8 ವಾರಗಳಿಗೆ ಹೆಚ್ಚಿಸುವಂತೆ ಕೇಳಿಕೊಂಡಿತ್ತು.
ಇದನ್ನೂ ಓದಿ- ಶರೀರದಲ್ಲಿ ಈ ಲಕ್ಷಣಗಳು ಕಂಡರೆ ತಕ್ಷಣ ಆಸ್ಪತ್ರೆಗೆ ಹೋಗಿ - Randeep Guleria
"ಆದರೆ ರೋಗನಿರೋಧಕತೆಯ ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡ (NTAGI) (ರೋಗನಿರೋಧಕ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡ) ಕೋವಾಕ್ಸಿನ್ ನ (Covaxin) ಎರಡು ಪ್ರಮಾಣಗಳ ಅಂತರದಲ್ಲಿ (ಮೊದಲ ಮತ್ತು ಎರಡನೆಯ ಪ್ರಮಾಣಗಳ ನಡುವಿನ ಸಮಯ) ಯಾವುದೇ ಬದಲಾವಣೆಯನ್ನು ಸೂಚಿಸಿಲ್ಲ" ಎಂದು ಸಚಿವಾಲಯ ಹೇಳಿತ್ತು. "ನೈಜ-ಸಮಯದ ಸಾಕ್ಷ್ಯಗಳ ಆಧಾರದ ಮೇಲೆ, ವಿಶೇಷವಾಗಿ ಯುಕೆ ಯಿಂದ, Covid-19 ಕಾರ್ಯನಿರತ ಗುಂಪು ಕೋವಿಶೀಲ್ಡ್ ಲಸಿಕೆಯ ಎರಡು ಪ್ರಮಾಣಗಳ ನಡುವಿನ ಸಮಯದ ಅಂತರವನ್ನು 12 ರಿಂದ 16 ವಾರಗಳಿಗೆ ಹೆಚ್ಚಿಸಲು ಒಪ್ಪಿದೆ" ಎಂದು ಸಚಿವಾಲಯ ಹೇಳಿದ್ದು, ಕೋವಾಕ್ಸಿನ್‌ನ ಎರಡು ಪ್ರಮಾಣಗಳ ನಡುವಿನ ಸಮಯದ ಮಧ್ಯಂತರವನ್ನು ಬದಲಾಯಿಸಲು ಯಾವುದೇ ಶಿಫಾರಸು ಇದುವರೆಗೆ ಮಾಡಲಾಗಿಲ್ಲ ಎಂದಿದೆ.
ಇದನ್ನೂ ಓದಿ-ಹಳ್ಳಿ ಮತ್ತು ಅರೆ ನಗರಗಳಲ್ಲಿ ಕೊರೊನಾ ತಡೆಗೆ ಮಾರ್ಗಸೂಚಿ ಬಿಡುಗಡೆಗೊಳಿಸಿದ ಕೇಂದ್ರ
ಇದಕ್ಕೂ ಮೊದಲು, ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ವತಿಯಿಂದ ಉತ್ಪಾದಿಸಲಾಗುತ್ತಿರುವ ಕೋವಿಶೀಲ್ಡ್ ವ್ಯಾಕ್ಸಿನ್ ನ ಎರಡು ಡೋಸ್ ಗಳ ನಡುವಿನ ಸಮಯಾಂತರವನ್ನು 6 ರಿಂದ 8 ವಾರ ನಿಗದಿಪಡಿಸಲಾಗಿತ್ತು. ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ನ ಸ್ವದೇಶಿ ವ್ಯಾಕ್ಸಿನ್ ಕೊವ್ಯಾಕ್ಸಿನ್ ಹಾಗೂ ಆಕ್ಸ್ಫರ್ಡ್-ಅಸ್ಟ್ರಾಜೆನಿಕಾ ಲಸಿಕೆ ಕೋವಿಶೀಲ್ಡ್ ನ ಉತ್ಪಾದನೆಯನ್ನು ಪುಣೆ ಮೂಲದ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮೂಲಕ ಉತ್ಪಾದಿಸಲಾಗುತ್ತಿದೆ ಹಾಗೂ ದೇಶದ ಲಸಿಕಾಕರಣ ಅಭಿಯಾನದಲ್ಲಿ ಈ ಎರಡೂ ಲಸಿಕೆಗಳನ್ನು ಬಳಸಲಾಗುತ್ತಿದೆ.
ಇದನ್ನೂ ಓದಿ-Raghuram Rajan : 'ಸ್ವಾತಂತ್ರ್ಯ ನಂತ್ರ ಭಾರತ ಎದುರಿಸುತ್ತಿರುವ ಅತೀ ದೊಡ್ಡ ಸವಾಲು ಕೋವಿಡ್'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.