ಏರ್‌ಟೆಲ್ ಬಳಕೆದಾರರಿಗೆ ಗುಡ್ ನ್ಯೂಸ್! ಈ ಅಗ್ಗದ ಪ್ಲಾನ್ನಲ್ಲಿ ಪ್ರತಿದಿನ 2GB ಡೇಟಾ ಲಭ್ಯ
Airtel Rs 299 Plan Upgrade : ಏರ್‌ಟೆಲ್ ತನ್ನ 299 ರೂ. ಪ್ಲಾನ್ ಅನ್ನು ಅಪ್ಗ್ರೇಡ್ ಮಾಡಿದೆ. ಅಧಿಕೃತ ವೆಬ್‌ಸೈಟ್ ಪ್ರಕಾರ, ಈ ಯೋಜನೆಗೆ ಹೆಚ್ಚುವರಿ ಪ್ರಯೋಜನಗಳನ್ನು ಸೇರಿಸಲಾಗಿದೆ.
Airtel Rs 299 Plan Upgrade : ನೀವು ಏರ್‌ಟೆಲ್ ಪ್ರಿಪೇಯ್ಡ್ ಬಳಕೆದಾರರಾಗಿದ್ದರೆ ಈ ಸುದ್ದಿ ನಿಮಗೆ ಉಪಯುಕ್ತವಾಗಿರಲಿದೆ. ಏರ್‌ಟೆಲ್ ತನ್ನ 299 ರೂ. ಪ್ಲಾನ್ ಅನ್ನು ಅಪ್ಗ್ರೇಡ್ ಮಾಡಿದೆ ಈ ಯೋಜನೆಯಲ್ಲಿ ಹೆಚ್ಚಿನ ಡೇಟಾ ಲಭ್ಯವಿದೆ. ಮೊದಲು ಈ ಯೋಜನೆಯಲ್ಲಿ ಪ್ರತಿದಿನ 1.5GB ಡೇಟಾ ಮಾತ್ರ ಸಿಗುತ್ತಿತ್ತು. ಆದರೆ, ಅಧಿಕೃತ ವೆಬ್‌ಸೈಟ್ ಪ್ರಕಾರ, ಈ ಯೋಜನೆಗೆ ಹೆಚ್ಚುವರಿ ಪ್ರಯೋಜನಗಳನ್ನು ಸೇರಿಸಲಾಗಿದೆ.
ಏರ್‌ಟೆಲ್ ರೂ 299 ಪ್ಲಾನ್ ಪ್ರಯೋಜನಗಳು :
ಏರ್‌ಟೆಲ್ ತನ್ನ 299 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದೆ. ಇದು ತಮ್ಮ ಮೊಬೈಲ್ ಡೇಟಾವನ್ನು ಅವಲಂಬಿಸಿರುವ ಬಳಕೆದಾರರಿಗೆ ಉತ್ತಮ ಲಾಭ ನೀಡಲಿದೆ. ಹೊಸ ಪ್ಲಾನ್ ಅಡಿಯಲ್ಲಿ ದಿನಕ್ಕೆ 2GB ಡೇಟಾ ಸಿಗಲಿದೆ.
ಇದನ್ನೂ ಓದಿ : ಡಿಎಫ್ಎಸ್ಎಆರ್: ಚಂದ್ರ ಮತ್ತು ಗ್ರಹಗಳ ರಹಸ್ಯಗಳನ್ನು ಹೊರಗೆಳೆಯುವ ಕೀಲಿಕೈ!
ಈ ಪ್ಲಾನ್ ನಲ್ಲಿ ಒಟ್ಟು 14GB ಹೆಚ್ಚುವರಿ ಡೇಟಾ ಕೂಡಾ ಸಿಗುತ್ತದೆ. ಅಲ್ಲದೆ, ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಜೊತೆಗೆ 28 ದಿನಗಳ ಮಾನ್ಯತೆಯನ್ನು ಒಳಗೊಂಡಿದೆ.
ಸಿಗಲಿದೆ ಈ ಎಲ್ಲಾ ಪ್ರಯೋಜನ :
ಏರ್‌ಟೆಲ್ ತನ್ನ 299 ರೂ ಟ್ರೂಲಿ ಅನ್‌ಲಿಮಿಟೆಡ್ ಯೋಜನೆಗೆ ಅನೇಕ ಆಕರ್ಷಕ ಪ್ರಯೋಜನಗಳನ್ನು ಸೇರಿಸಿದೆ. ಹೊಸ ಪ್ರಯೋಜನಗಳಲ್ಲಿ ಅನಿಯಮಿತ 5G ಡೇಟಾ, 3 ತಿಂಗಳವರೆಗೆ Apollo 24X7 ಸರ್ಕಲ್ ಸದಸ್ಯತ್ವ, ಉಚಿತ Wynk ಮ್ಯೂಸಿಕ್, ಉಚಿತ HelloTunes ಸೇರಿವೆ.
ಇದನ್ನೂ ಓದಿ : Jio ಬೆವರಿಳಿಸಲು ಅದ್ಭುತ ಪ್ಲಾನ್ ಪರಿಚಯಿಸಿದೆ ಈ ಟೆಲಿಕಾಂ ಕಂಪನಿ, ಹೆಚ್ಚುವರಿ ಶುಲ್ಕ ಇಲ್ಲದೆ ನಿತ್ಯ 2 ಜಿಬಿ ಡೇಟಾ ಉಚಿತ!
5G ಡೇಟಾವು 5G ನೆಟ್‌ವರ್ಕ್ ಪ್ರದೇಶಗಳಲ್ಲಿ ಮಾತ್ರ ಲಭ್ಯವಿರುತ್ತದೆ ಮತ್ತು ಈ ಯೋಜನೆಯಲ್ಲಿ ಹೆಚ್ಚುವರಿ ಡೇಟಾ ಸಿಗುತ್ತದೆ. Apollo 24X7 ಸರ್ಕಲ್ ಸದಸ್ಯತ್ವದ ಮೂಲಕ 24/7 ವೈದ್ಯಕೀಯ ಸಹಾಯ, ಉಚಿತ ವೈದ್ಯಕೀಯ ಪರೀಕ್ಷೆಗಳು ಮತ್ತು ಇತರ ಪ್ರಯೋಜನಗಳನ್ನು ಪಡೆಯಬಹುದು. Wynk Music ಮೂಲಕ 50 ಲಕ್ಷಕ್ಕೂ ಹೆಚ್ಚು ಹಾಡುಗಳು ಮತ್ತು ವೀಡಿಯೊಗಳನ್ನು ಉಚಿತವಾಗಿ ಕ ಆನಂದಿಸಬಹುದು. HelloTunes ನಿಮ್ಮ ಮೆಚ್ಚಿನ ಹಾಡುಗಳು ಮತ್ತು ಟೋನ್ ಗಳನ್ನು ಕಾಲರ್ ಟ್ಯೂನ್ ಆಗಿ ಬಳಸಲು ಅನುಮತಿಸುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ