Gazelle ಯುರೋಪ್‌ನಲ್ಲಿ Gazelle Eclipse C38 ಮತ್ತು T11 HMB ಎಲೆಕ್ಟ್ರಿಕ್ ಬೈಕ್‌ಗಳನ್ನು ಪರಿಚಯಿಸಿದೆ. ಹೊಸ Gazelle HMB ಇ-ಬೈಕ್ ಅದರ 750Wh ಬ್ಯಾಟರಿ ಮತ್ತು ಬಾಷ್ ಪರ್ಫಾರ್ಮೆನ್ಸ್ ಲೈನ್ CX ಮೋಟಾರ್‌ಗಳಿಗೆ ಹೆಸರುವಾಸಿಯಾಗಿದ್ದು 135 ಕಿಮೀ ರೆಂಜ್ ಹೊಂದಿದೆ (Technology News In Kannada). Gazelle Eclipse C38 ಮತ್ತು T11 HMB ಎಲೆಕ್ಟ್ರಿಕ್ ಬೈಕ್‌ಗಳ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋನ ಬನ್ನಿ.
Gazelle Eclipse C380 ಬೆಲೆ
ಬೆಲೆಯ ಕುರಿತು ಹೇಳುವುದಾದರೆ, Gazelle Eclipse C380 ಬೆಲೆ € 5,999 (ಅಂದಾಜು ರೂ 5,34,654) ಆದರೆ Gazelle T11 ಬೆಲೆ € 5,499 (ಅಂದಾಜು ರೂ 4,90,043). ಹೊಸ ಬೈಕ್‌ಗಳು 1 ವರ್ಷದ ಡ್ಯಾಮೇಜ್ ವಿಮಾ ಪಾಲಿಸಿಯೊಂದಿಗೆ ಬರುತ್ತವೆ.
ಇದನ್ನೂ ಓದಿ-ವಿಜ್ಞಾನಿಗಳಿಗೆ ದೊರೆತ ಹೊಸ ಮ್ಯಾಜಿಕಲ್ ಆಕ್ಸಿಜನ್, ಏನಿದು ಆಕ್ಸಿಜನ್ 28?
Gazelle Eclipse C380 ಮತ್ತು Gazelle T11 HMB ನ ವೈಶಿಷ್ಟ್ಯಗಳು
Gazelle Eclipse C380 ಮತ್ತು Gazelle T11 HMB ಇ-ಬೈಕ್‌ಗಳು ಮಧ್ಯಮ-ಮೌಂಟೆಡ್ ಬಾಷ್ ಪರ್ಫಾರ್ಮೆನ್ಸ್ ಲೈನ್ CX ಮೋಟಾರ್ ಅನ್ನು ಹೊಂದಿದ್ದು, ಗರಿಷ್ಠ 85Nm ಟಾರ್ಕ್ ಅನ್ನು ಉತ್ಪಾದಿಸುತ್ತವೆ. ಈ ಎರಡೂ ಬೈಕ್ ಗಳ ವ್ಯಾಪ್ತಿಯು 135 ಕಿ.ಮೀ. ಗಳಾಗಿದೆ. C380 ಎನ್ವಿಯೊಲೊ ಟ್ರೆಕ್ಕಿಂಗ್ ಮ್ಯಾನ್ಯುವಲ್ ಸ್ಟೆಪ್ಲೆಸ್ ಗೇರ್ ಸಿಸ್ಟಮ್ ಅನ್ನು ಒಳಗೊಂಡಿದೆ. ಮತ್ತೊಂದೆಡೆ, T11 11-ವೇಗದ ಶಿಮಾನೊ ಡಿಯೋರ್ XT ವ್ಯವಸ್ಥೆಯನ್ನು ಹೊಂದಿದೆ. Gazelle C380 ಮತ್ತು Gazelle T11 HMB ಇ-ಬೈಕ್‌ಗಳು ಸ್ಟೆಪ್-ಥ್ರೂ ಅಥವಾ ಸ್ಟೆಪ್‌ಓವರ್ ಫ್ರೇಮ್ ವಿನ್ಯಾಸಗಳಲ್ಲಿ ಮಾರುಕಟ್ಟೆಗೆ ಇಳಿದಿವೆ. ಇದು 75mm ಟ್ರ್ಯಾವಲ್ ಮತ್ತು 60mm ಅಗಲದ 27.5-ಇಂಚಿನ ಸ್ಟೀರಬಲ್ ಟೈರ್‌ಗಳೊಂದಿಗೆ ಮುಂಭಾಗದ ಲಾಕ್‌ಔಟ್ ಸಸ್ಪೆನ್ಷನ್ ಫೋರ್ಕ್ ಅನ್ನು ಹೊಂದಿದೆ.
ಇದನ್ನೂ ಓದಿ-ಶೀಘ್ರದಲ್ಲಿ ಕಣ್ಮರೆಯಾಗಲಿದೆ ವಾಟ್ಸ್ ಆಪ್, ಇದುವರೆಗಿನ ಅತಿ ದೊಡ್ಡ ಬದಲಾವಣೆಗೆ ರೇಡಿಯಾಗಿ!
T11 27.2 ಕೆಜಿ ತೂಗುತ್ತದೆ ಆದರೆ C380 28.3 ಕೆಜಿ ತೂಗುತ್ತದೆ. ಎರಡೂ ಮಾದರಿಗಳು ಆಂಥ್ರಾಸೈಟ್ ಗ್ರೇ ಬಣ್ಣದ ಆಯ್ಕೆಯಲ್ಲಿ ಲಭ್ಯವಿರಲಿವೆ. ಆದರೆ C380 ಮೆಟಾಲಿಕ್ ಆರೆಂಜ್ ಮತ್ತು T111 ಥೈಮ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿಯೂ ಕೂಡ ಸಿಗಲಿದೆ. ಆನ್-ರೋಡ್ ಮತ್ತು ಆಫ್-ರೋಡ್ ಎರಡಕ್ಕೂ ಟೈರ್ ಅತ್ಯುತ್ತಮ ಆಯ್ಕೆಯಾಗಿದೆ. ಉತ್ತಮ ನಿಯಂತ್ರಣಕ್ಕಾಗಿ ಹೈಡ್ರಾಲಿಕ್ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ. ಸುರಕ್ಷತೆಗಾಗಿ, ಬೈಕ್‌ಗೆ ಜಿಪಿಎಸ್ ಸಂವೇದಕವನ್ನು ಒದಗಿಸಲಾಗಿದ್ದು ಅದು ಕಳೆದುಹೋದರೆ ಅಥವಾ ಕಳ್ಳತನವಾಗಿದ್ದರೆ ಅದನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. Gazelle ಇ-ಬೈಕ್ ವೇಗ ಮತ್ತು ದೂರವನ್ನು ಒದಗಿಸುವ Bosch Kiox 300 ಡಿಸ್ಪ್ಲೇ ಹೊಂದಿದೆ. ಇದಲ್ಲದೆ, Gazelle Connect ಅಪ್ಲಿಕೇಶನ್ ಸಹ ಬೆಂಬಲಿತವಾಗಿದೆ. ಬಳಕೆದಾರರು ವಿವಿಧ ರೈಡ್ ಡೇಟಾವನ್ನು ವೀಕ್ಷಿಸಲು ಅಪ್ಲಿಕೇಶನ್ ಅನ್ನು ಬಳಸಬಹುದು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.