ಅಮೆಜಾನ್ ಮಾನ್ಸೂನ್ ಕಾರ್ನಿವಲ್ ಸೇಲ್ 2022: ಅಮೆಜಾನ್‌ನಲ್ಲಿ ಮಾನ್ಸೂನ್ ಕಾರ್ನಿವಲ್ ಸೇಲ್ ನಡೆಯುತ್ತಿದೆ. ಜೂನ್ 18 ರಿಂದ ಪ್ರಾರಂಭವಾಗಿರುವ ಈ ಸೇಲ್ ಜೂನ್ 22ರವರೆಗೆ ನಡೆಯಲಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು ಮತ್ತು ಹಲವು ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಸ್ಮಾರ್ಟ್‌ಫೋನ್‌ಗಳ ಮೇಲೆ ಶೇ.40ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ನೀವು ಕಡಿಮೆ ಬಜೆಟ್ ನಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ ಇದು ಸರಿಯಾದ ಸಮಯ.  ಈ ಸೇಲ್‌ನಲ್ಲಿ ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ಗಳನ್ನು ಅಗ್ಗವಾಗಿ ಖರೀದಿಸಬಹುದು. ಇಂದು ನೋಕಿಯಾ ಕಂಪನಿಯ  Nokia G21 ಸ್ಮಾರ್ಟ್‌ಫೋನ್‌ ಅನ್ನು 2 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಹೇಗೆ ಎಂದು ತಿಳಿಯಲು ಮುಂದೆ ಓದಿ...


COMMERCIAL BREAK
SCROLL TO CONTINUE READING

ಅಮೆಜಾನ್ ಮಾನ್ಸೂನ್ ಕಾರ್ನಿವಲ್: Nokia G21 ಕೊಡುಗೆಗಳು ಮತ್ತು ರಿಯಾಯಿತಿಗಳು:-
Nokia G21 ನ ಲಾಂಚ್ ಬೆಲೆ ರೂ 14,499, ಆದರೆ ಅಮೆಜಾನ್‌ನಲ್ಲಿ ಈ ಫೋನ್ ಖರೀದಿಯ ಮೇಲೆ ಶೇ.10 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದ್ದು ಫೋನ್ ರೂ 12,999 ಗೆ ಲಭ್ಯವಿದೆ. ಇದಲ್ಲದೇ ಬ್ಯಾಂಕ್ ಮತ್ತು ಎಕ್ಸ್ ಚೇಂಜ್ ಆಫರ್ ಕೂಡ ಇದ್ದು, ಇದರಿಂದ ಫೋನ್ ಬೆಲೆ ಗಣನೀಯವಾಗಿ ಇಳಿಕೆಯಾಗಲಿದೆ.


ಇದನ್ನೂ ಓದಿ- LAVA 5G Smartphone: ಲಾವಾ ತರುತ್ತಿದೆ ಇದುವರೆಗಿನ ಅತ್ಯಂತ ಅಗ್ಗದ 5G ಸ್ಮಾರ್ಟ್‌ಫೋನ್


ಅಮೆಜಾನ್ ಮಾನ್ಸೂನ್ ಕಾರ್ನಿವಲ್: Nokia G21 ಬ್ಯಾಂಕ್ ಕೊಡುಗೆಗಳು:-
Nokia G21 ಖರೀದಿಸಲು ನೀವು  ಐಸಿಐಸಿಐ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಬಳಸಿದರೆ, ನಿಮಗೆ ಸಾವಿರ ರೂಪಾಯಿಗಳ ರಿಯಾಯಿತಿ ಸಿಗುತ್ತದೆ. ಇದರ ನಂತರ, ಫೋನ್ ಬೆಲೆ 11,999 ರೂ. ಗಳಿಗೆ ಇಳಿಕೆ ಆಗಲಿದೆ. ಇದಲ್ಲದೆ ಫೋನ್‌ನಲ್ಲಿ ಎಕ್ಸ್‌ಚೇಂಜ್ ಆಫರ್ ಕೂಡ ಇದೆ.


ಇದನ್ನೂ ಓದಿ- ಮಳೆಯಲ್ಲಿ ಒದ್ದೆಯಾದರೂ ಕೆಡುವುದಿಲ್ಲ ಸ್ಯಾಮ್‌ಸಂಗ್‌ನ ಪ್ರಬಲ 5G ಸ್ಮಾರ್ಟ್‌ಫೋನ್ !


ಅಮೆಜಾನ್ ಮಾನ್ಸೂನ್ ಕಾರ್ನಿವಲ್: Nokia G21 ಎಕ್ಸ್ಚೇಂಜ್ ಆಫರ್:-
Nokia G21 ನಲ್ಲಿ 10,050 ರೂಪಾಯಿಗಳ ಎಕ್ಸ್‌ಚೇಂಜ್ ಆಫರ್ ಇದೆ, ನೀವು ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಂಡರೆ ನೀವು ಇಷ್ಟು ರಿಯಾಯಿತಿ ಪಡೆಯಬಹುದು. ಆದರೆ ನಿಮ್ಮ ಹಳೆಯ ಫೋನ್‌ನ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 10,050 ರೂ. ವಿನಿಮಯ ಕೊಡುಗೆ ಲಭ್ಯವಾಗಲಿದೆ. ನೀವು ಈ ಎಲ್ಲಾ ಕೊಡುಗೆಗಳ ಲಾಭವನ್ನು ಪಡೆಯಲು ಸಾಧ್ಯವಾದರೆ ಫೋನ್‌ನ ಬೆಲೆ 1,949 ರೂ. ಗಳಿಗೆ ಇಳಿಕೆ ಆಗಲಿದೆ. ಈ ರೀತಿ ಆಗಿ ನೀವು ನೋಕಿಯಾದ ಉತ್ತಮ ಸ್ಮಾರ್ಟ್‌ಫೋನ್‌ ಅನ್ನು ಎರಡು ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.