Jio-Airtel ನ ನಿದ್ದೆ ಕೆಡಿಸಿದೆ ಬಿಎಸ್ಎನ್ಎಲ್ನ ಈ ಸಸ್ತಾ ಪ್ಲಾನ್

BSNL Prepaid Plan: ಬಿಎಸ್ಎನ್ಎಲ್ನ ಈ ಯೋಜನೆಯಲ್ಲಿ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಡಾಟಾ ಲಭ್ಯವಿದೆ. ಯಾವುದೇ ಖಾಸಗಿ ಟೆಲಿಕಾಂ ಕಂಪನಿಯು ಇಷ್ಟು ಡೇಟಾವನ್ನು ನೀಡುವುದಿಲ್ಲ. ಬಿಎಸ್ಎನ್ಎಲ್ನ 299 ರೂ. ಪ್ಲಾನ್‌ನಲ್ಲಿ ಏನೆಲ್ಲಾ ಪ್ರಯೋಜನಗಳು ಲಭ್ಯವಿದೆ ಎಂಬುದನ್ನು ತಿಳಿಯೋಣ ...

Written by - Yashaswini V | Last Updated : Jun 20, 2022, 08:54 AM IST
  • ಬಿಎಸ್ಎನ್ಎಲ್ ಇತ್ತೀಚಿಗೆ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಡಾಟಾ ಒದಗಿಸುವ ಪ್ರಿಪೇಯ್ಡ್ ಪ್ಲಾನ್ ಅನ್ನು ಪರಿಚಯಿಸಿದೆ
  • ಗಮನಾರ್ಹವಾಗಿ ಬೇರೆ ಯಾವುದೇ ಖಾಸಗಿ ಟೆಲಿಕಾಂ ಕಂಪನಿಯು ಇಷ್ಟು ಕಡಿಮೆ ವೆಚ್ಚದಲ್ಲಿ ಇಷ್ಟು ಡೇಟಾವನ್ನು ನೀಡುವುದಿಲ್ಲ.
  • ಬಿಎಸ್ಎನ್ಎಲ್ನ 299 ರೂ. ಪ್ಲಾನ್‌ನಲ್ಲಿ ಏನೆಲ್ಲಾ ಪ್ರಯೋಜನಗಳು ಲಭ್ಯವಿದೆ ಎಂದು ತಿಳಿಯೋಣ...
Jio-Airtel ನ ನಿದ್ದೆ ಕೆಡಿಸಿದೆ ಬಿಎಸ್ಎನ್ಎಲ್ನ ಈ ಸಸ್ತಾ ಪ್ಲಾನ್  title=
Cheapest prepaid plans

ಬಿಎಸ್ಎನ್ಎಲ್ ಪ್ರಿಪೇಯ್ಡ್  ಯೋಜನೆ: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಹೊಸ ಪ್ರಿಪೇಯ್ಡ್  ಯೋಜನೆಯನ್ನು ಪರಿಚಯಿಸಿದ್ದು ರಿಲಯನ್ಸ್ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳ ನಿದ್ದೆ ಕೆಡಿಸಿದೆ. ವಾಸ್ತವವಾಗಿ, ಇತ್ತೀಚಿಗೆ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ ಕಂಪನಿಗಳು ತಮ್ಮ ಯೋಜನೆಗಳ ಬೆಲೆಯನ್ನು ಹೆಚ್ಚಿಸಿವೆ. ಇವುಗಳಿಗೆ ಟಕ್ಕರ್ ನೀಡಿರುವ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಆಗ್ಗದ ಪ್ರಿಪೇಯ್ಡ್ 
ಯೋಜನೆಗಳನ್ನು ಪರಿಚಯಿಸಿದೆ. 

ಬಿಎಸ್ಎನ್ಎಲ್ ಇತ್ತೀಚಿಗೆ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಡಾಟಾ ಒದಗಿಸುವ ಪ್ರಿಪೇಯ್ಡ್ ಪ್ಲಾನ್ ಅನ್ನು ಪರಿಚಯಿಸಿದೆ. ಗಮನಾರ್ಹವಾಗಿ ಬೇರೆ ಯಾವುದೇ ಖಾಸಗಿ ಟೆಲಿಕಾಂ ಕಂಪನಿಯು ಇಷ್ಟು ಕಡಿಮೆ ವೆಚ್ಚದಲ್ಲಿ ಇಷ್ಟು ಡೇಟಾವನ್ನು ನೀಡುವುದಿಲ್ಲ. ಬಿಎಸ್ಎನ್ಎಲ್ನ 299 ರೂ. ಪ್ಲಾನ್‌ನಲ್ಲಿ ಏನೆಲ್ಲಾ ಪ್ರಯೋಜನಗಳು ಲಭ್ಯವಿದೆ ಎಂದು ತಿಳಿಯೋಣ...

ಬಿಎಸ್ಎನ್ಎಲ್ನ 299 ರೂ.  ಪ್ರಿಪೇಯ್ಡ್  ಪ್ಲಾನ್‌:
ಬಿಎಸ್ಎನ್ಎಲ್ ತನ್ನ ರೂ. 299 ಪ್ರಿಪೇಯ್ಡ್ ಯೋಜನೆಯನ್ನು ಬಳಕೆದಾರರಿಗೆ ಒಟ್ಟು 30 ದಿನಗಳ ಮಾನ್ಯತೆಯೊಂದಿಗೆ ನೀಡುತ್ತದೆ. ಈ ಯೋಜನೆಯೊಂದಿಗೆ, ಬಳಕೆದಾರರು ಅನಿಯಮಿತ ಧ್ವನಿ ಕರೆ, 3ಜಿಬಿ ದೈನಂದಿನ ಡೇಟಾ ಮತ್ತು ನಿತ್ಯ 100  ಉಚಿತ ಎಸ್ಎಂಎಸ್ ಸೌಲಭ್ಯವನ್ನು ಪಡೆಯುತ್ತಾರೆ. ಈ ಯೋಜನೆಯೊಂದಿಗೆ ಯಾವುದೇ ಇತರ ಪ್ರಯೋಜನಗಳನ್ನು ನೀಡಲಾಗುವುದಿಲ್ಲ. ಈ ಯೋಜನೆಯ ದೊಡ್ಡ ಪ್ರಯೋಜನವೆಂದರೆ ಅದರ ಮಾನ್ಯತೆಯ ಅವಧಿ.

ಇದನ್ನೂ ಓದಿ- ಐಫೋನ್ ಫುಲ್ ಚಾರ್ಜ್ ಮಾಡಿದರೆ ಕರೆಂಟ್ ಬಿಲ್ ಎಷ್ಟು ಬರುತ್ತೆ ಗೊತ್ತಾ?

ಏರ್‌ಟೆಲ್ ರೂ. 299 ಪ್ರಿಪೇಯ್ಡ್ ಯೋಜನೆ
ಏರ್‌ಟೆಲ್ 28 ದಿನಗಳ ಮಾನ್ಯತೆಯೊಂದಿಗೆ ರೂ. 299 ರ ಪ್ರಿಪೇಯ್ಡ್ ಯೋಜನೆಯನ್ನು ನೀಡುತ್ತದೆ. ಈ ಯೋಜನೆಯೊಂದಿಗೆ ಬಳಕೆದಾರರು ಅನಿಯಮಿತ ಧ್ವನಿ ಕರೆ ಮತ್ತು ಪ್ರತಿದಿನ 100 ಉಚಿತ ಎಸ್ಎಂಎಸ್  1.5ಜಿಬಿ ದೈನಂದಿನ ಡೇಟಾವನ್ನು ಪಡೆಯುತ್ತಾರೆ. ಈ ಯೋಜನೆಯ ಹೆಚ್ಚುವರಿ ಪ್ರಯೋಜನಗಳಲ್ಲಿ 28 ದಿನಗಳವರೆಗೆ Xstream ಮೊಬೈಲ್ ಪ್ಯಾಕ್, Apollo 24|7 ವಲಯಗಳು, FASTag ನೊಂದಿಗೆ ರೂ .100 ಕ್ಯಾಶ್‌ಬ್ಯಾಕ್, ಉಚಿತ HelloTunes ಮತ್ತು Wynk Music ಉಚಿತವಾಗಿ ಲಭ್ಯವಿವೆ.

ಜಿಯೋ ರೂ. 299 ಪ್ರಿಪೇಯ್ಡ್ ಯೋಜನೆ:
ರಿಲಯನ್ಸ್ ಜಿಯೋ ತನ್ನ 299 ರೂ.ಗಳ ಪ್ರಿಪೇಯ್ಡ್ ಯೋಜನೆಯಲ್ಲಿ 2ಜಿಬಿದೈನಂದಿನ ಡೇಟಾವನ್ನು ನೀಡುತ್ತದೆ, ಇದು ಏರ್‌ಟೆಲ್‌ನ ಯೋಜನೆಗೆ ಹೋಲಿಸಿದರೆ ಬಳಕೆದಾರರು ಪಡೆಯುವ ಡೇಟಾಕ್ಕಿಂತ ಹೆಚ್ಚು. ಈ ಯೋಜನೆಯಲ್ಲಿ 28 ದಿನಗಳವರೆಗೆ ವ್ಯಾಲಿಡಿಟಿ ಲಭ್ಯವಿದೆ. ಇದರಲ್ಲಿ ಬಳಕೆದಾರರು ಅನಿಯಮಿತ ಧ್ವನಿ ಕರೆ ಮತ್ತು ನಿತ್ಯ 100 ಉಚಿತ ಎಸ್ಎಂಎಸ್ ಪಡೆಯುತ್ತಾರೆ. ಇದು ಪೂರಕ ಚಂದಾದಾರಿಕೆಗಳನ್ನು ಒಳಗೊಂಡಿದೆ - JioTV, JioCinema, JioSecurity ಮತ್ತು JioCloud ಸೇವೆಗಳು ಇದರಲ್ಲಿ ಲಭ್ಯವಿದೆ.

ಇದನ್ನೂ ಓದಿ- ಮಳೆಯಲ್ಲಿ ಒದ್ದೆಯಾದರೂ ಕೆಡುವುದಿಲ್ಲ ಸ್ಯಾಮ್‌ಸಂಗ್‌ನ ಪ್ರಬಲ 5G ಸ್ಮಾರ್ಟ್‌ಫೋನ್ !

ವೊಡಾಫೋನ್ ಐಡಿಯಾ ರೂ. 299 ಪ್ರಿಪೇಯ್ಡ್ ಯೋಜನೆ:
ವೊಡಾಫೋನ್ ಐಡಿಯಾ ತನ್ನ ರೂ. 299 ಪ್ರಿಪೇಯ್ಡ್ ಯೋಜನೆಯಲ್ಲಿ 1.5ಜಿಬಿ ದೈನಂದಿನ ಡೇಟಾ, ನಿತ್ಯ 100 ಉಚಿತ ಎಸ್ಎಂಎಸ್ ಮತ್ತು ಅನಿಯಮಿತ ಧ್ವನಿ ಕರೆಗಳನ್ನು ನೀಡುತ್ತದೆ. ಈ ಯೋಜನೆಯ ಒಟ್ಟು ವ್ಯಾಲಿಡಿಟಿ ಕೂಡ 28 ದಿನಗಳು. Vi Hero ಅನ್‌ಲಿಮಿಟೆಡ್ ಪ್ರಯೋಜನಗಳ ಜೊತೆಗೆ Vi Movies ಮತ್ತು TV ​​ಗೆ ಉಚಿತ ಚಂದಾದಾರಿಕೆಯನ್ನು ಬಳಕೆದಾರರು ಪಡೆಯುತ್ತಾರೆ. Vi Hero ಅನ್‌ಲಿಮಿಟೆಡ್ ಪ್ರಯೋಜನಗಳ ಅಡಿಯಲ್ಲಿ, ಬಳಕೆದಾರರು Binge All Night, ವಾರಾಂತ್ಯದ ಡೇಟಾ ರೋಲ್‌ಓವರ್ ಮತ್ತು ಡೇಟಾ ಡಿಲೈಟ್ ಕೊಡುಗೆಗಳನ್ನು ಪಡೆಯುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News