ನವದೆಹಲಿ: Android 12 New Feature - ಗೂಗಲ್ (Google)ನನ್ನ ಮುಂಬರುವ ಹೊಸ ಆಪರೇಟಿಂಗ್ ಸಿಸ್ಟಂ Android 12ರಲ್ಲಿ ಹೊಸ ಆಕ್ಸೆಸಿಬಿಲಿಟಿ ವೈಶಿಷ್ಟ್ಯ (Android 12 New Feature) ಜೋಡಿಸುವುದರ ಮೇಲೆ ಕಾರ್ಯ ನಿರ್ವಹಿಸುತ್ತಿದೆ. ಟೆಕ್ ವೆಬ್‌ಸೈಟ್ ಆಗಿರುವ XDA ಡೆವಲಪರ್ಸ್ ಪ್ರಕಾರ, ಈ ಹೊಸ ವೈಶಿಷ್ಟ್ಯದ ಅಡಿಯಲ್ಲಿ, ಬಳಕೆದಾರರು ತಮ್ಮ ಫೋನ್‌ಗಳನ್ನು ಕೇವಲ ಮುಖದ ಹಾವಭಾವಗಳಿಂದ ನಿಯಂತ್ರಿಸಲು (Gesture Control) ಸಾಧ್ಯವಾಗಲಿದೆ ಕ್ಯಾಮರಾ ಸ್ವಿಚ್ ವೈಶಿಷ್ಟ್ಯ, ಆಂಡ್ರಾಯ್ಡ್ ಆಕ್ಸೆಸಿಬಿಲಿಟಿ ಸೂಟ್ ಆಪ್‌ನ (Suit App) ಪ್ರವೇಶಿಸುವಿಕೆ ಸೇವೆ, ವಿಭಿನ್ನ ನಿಯಂತ್ರಣಗಳಿಗಾಗಿ ಗೆಸ್ಚರ್‌ಗಳನ್ನು ಹೊಂದಿಸುವುದನ್ನು ಬೆಂಬಲಿಸಲಿದೆ. ಉದಾಹರಣೆಗೆ, ಬಳಕೆದಾರರು ಯಾವಾಗ ತಮ್ಮ ಬಾಯಿ ತೆರೆದು ನೋಟಿಫಿಕೇಶನ್ ತೆರೆಯಲು ಹೇಳುತ್ತಾರೆ ಎಂಬುದನ್ನು ಪತ್ತೆ ಮಾಡಬಹುದು. ಇದರ ಹೊರತಾಗಿ, ವರದಿಯ ಪ್ರಕಾರ, ಬಳಕೆದಾರರು ತಮ್ಮ ಹುಬ್ಬುಗಳ ಸನ್ನೆಯ ಮೂಲಕ ಮುಖಪುಟ ದಲ್ಲಿ ಸ್ಕ್ರೂಲ್ ಮಾಡಬಹುದು ಮತ್ತು ಬ್ಯಾಕ್ ಹಾಗೂ ಫ್ರಂಟ್ ಹೋಗಬಹುದು.


COMMERCIAL BREAK
SCROLL TO CONTINUE READING

ಹಲವು ರೀತಿಯ ಫೇಸ್ ಜಸ್ಚರ್ ಇರಲಿವೆ. ಇವುಗಳಲ್ಲಿ ನಗುವುದು, ಬಾಯಿ ತೆರೆಯುವುದು ಹಾಗೂ ಎಡ-ಬಲಕ್ಕೆ ನೋಡುವುದು ಇತ್ಯಾದಿಗಳು ಶಾಮೀಲಾಗಿವೆ. ತಮ್ಮ ಜೆಶ್ಚರ್ ಎಷ್ಟು ಸೂಕ್ಷ್ಮವಾಗಿರಬೇಕು ಎಂಬುದನ್ನು ಕೂಡ ಬಳಕೆದಾರರು ನಿರ್ಧರಿಸಬಹುದು.


ಇದನ್ನೂ ಓದಿ-Prepaid Recharge Plan: 130 ರೂ.ಗಿಂತ ಕಡಿಮೆ ಬೆಲೆಯಲ್ಲಿ ಅನಿಯಮಿತ ಕರೆ-ಇಂಟರ್ನೆಟ್ ಜೊತೆಗೆ ಸಿಗಲಿದೆ ಹಲವು ಪ್ರಯೋಜನ


ಹೆಚ್ಚುವರಿ ಬ್ಯಾಟರಿ ಬಳಕೆ ಮಾಡಲಿದೆ ಈ ವೈಶಿಷ್ಯ
ಹೊಸ ವೈಶಿಷ್ಟ್ಯ ಬಳಕೆ ಮಾಡಲು ಬಳಕೆದಾರರು ತಮ್ಮ ಫೋನ್ ನ ಕ್ಯಾಮರಾ ಆನ್ ಮಾಡಬೇಕಾಗಲಿದೆ ಹಾಗೂ ಅಂಡ್ರಾಯಿಡ್ -12 (Google Android 12)ಹೊಂದಿರುವ ಡಿವೈಸ್ ಗಳಲ್ಲಿ ಒಂದು ಸ್ಟೇಟಸ್ ಬಾರ್ ಕಾಣಿಸಿಕೊಳ್ಳಲಿದ್ದು, ಅದು ಕ್ಯಾಮರಾ ಬಳಕೆಯನ್ನು ಸೂಚಿಸಲಿದೆ. ಆದರೆ ಈ ವೈಶಿಷ್ಟ್ಯ ಹೆಚ್ಚುವರಿ ಬ್ಯಾಟರಿ ಬಳಕೆ ಮಾಡಲಿದೆ. ಅಂದರೆ, ಈ ವೈಶಿಷ್ಟ್ಯದಿಂದ ನಿಮ್ಮ ಮೊಬೈಲ್ ಬ್ಯಾಟರಿ ಬೇಗ ಖಾಲಿಯಾಗಲಿದೆ. ಇಲ್ಲಿ ನೀಡಲಾಗಿರುವ ಚಿತ್ರದ ಪ್ರಕಾರ ಬಳಕೆದಾರರಿಗೆ ತಮ್ಮ ಡಿವೈಸ್ ಅನ್ನು ಪವರ್ ಸೋರ್ಸ್ ಗೆ ಪ್ಲಗ್ ಇನ್ ಆಗಿಸಲು ಸಲಹೆ ನೀಡಿದೆ.


ಇದನ್ನೂ ಓದಿ-Airtel-Jioಗೆ ಟಕ್ಕರ್ ನೀಡುತ್ತಿದೆ Vodafone-Idea ದ ಈ ಪ್ಲಾನ್ , 56 ದಿನಗಳವರೆಗೆ ಸಿಗುತ್ತಿದೆ 4GB ಡೇಟಾ


ಮುಖದ ಹಾವಭಾವಗಳ ಸಹಾಯದಿಂದ ಬಳಕೆದಾರರು ತಮ್ಮ ಫೋನ್ ನಲ್ಲಿ ಸ್ಕ್ರೋಲಿಂಗ್, ಹೋಂ ಪೇಜ್, ಸೆಟ್ಟಿಂಗ್ ಹಾಗೂ ನೋಟಿಫಿಕೇಶನ್ ಗಳಂತಹ ಎಲ್ಲಾ ಸ್ಮಾರ್ಟ್ ಫೋನ್ ವೈಶಿಷ್ಟ್ಯಗಳನ್ನು ನಿಯಂತ್ರಿಸಬಹುದು. ಮೂಲಗಳಿಂದ ದೊರೆತ ಮಾಹಿತಿಯ ಪ್ರಕಾರ, ಈ ವೈಶಿಷ್ಟ್ಯ ಇನ್ನೂ ಬೀಟಾ ಮೋಡ್ ನಲ್ಲಿದೆ ಹಾಗೂ ವಿಕಲಾಂಗ ಬಳಕೆದಾರರಿಗೆ ಇದು ತುಂಬಾ ಉಪಯೋಗಕಾರಿ ಸಾಬೀತಾಗಲಿದೆ ಎನ್ನಲಾಗುತ್ತಿದೆ.


ಇದನ್ನೂ ಓದಿ-Redmi 10 ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳು ಸೋರಿಕೆ, ಇದರ ವಿಶೇಷತೆ ಇಲ್ಲಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ