Prepaid Recharge Plan: 130 ರೂ.ಗಿಂತ ಕಡಿಮೆ ಬೆಲೆಯಲ್ಲಿ ಅನಿಯಮಿತ ಕರೆ-ಇಂಟರ್ನೆಟ್ ಜೊತೆಗೆ ಸಿಗಲಿದೆ ಹಲವು ಪ್ರಯೋಜನ

ದೊಡ್ಡ ಟೆಲಿಕಾಂ ಕಂಪನಿಗಳಾದ ವೊಡಾಫೋನ್ ಐಡಿಯಾ (ವಿಐ), ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಹೆಚ್ಚಿನ ವೇಗದ 4 ಜಿ ಇಂಟರ್ನೆಟ್ ಅನ್ನು ಅನಿಯಮಿತ ಕರೆಗಳೊಂದಿಗೆ ಕೇವಲ 129 ರೂಪಾಯಿಗೆ ನೀಡುತ್ತಿವೆ. ಇದರ ಹೊರತಾಗಿ, ಬಳಕೆದಾರರು ಅನೇಕ ಹೆಚ್ಚುವರಿ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ.

Written by - Yashaswini V | Last Updated : Aug 18, 2021, 07:24 AM IST
  • ಅತ್ಯುತ್ತಮ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಕೇವಲ 129 ರೂಗಳಲ್ಲಿ ಬಂದಿದೆ
  • ಅನಿಯಮಿತ ಕರೆ ಮತ್ತು 4G ಇಂಟರ್ನೆಟ್ ಪ್ರಯೋಜನಗಳು
  • ಜಿಯೋ, ಏರ್‌ಟೆಲ್ ಅಥವಾ ವೊಡಾಫೋನ್-ಐಡಿಯಾ ಯಾವುದು ಉತ್ತಮ?
Prepaid Recharge Plan: 130 ರೂ.ಗಿಂತ ಕಡಿಮೆ ಬೆಲೆಯಲ್ಲಿ ಅನಿಯಮಿತ ಕರೆ-ಇಂಟರ್ನೆಟ್ ಜೊತೆಗೆ ಸಿಗಲಿದೆ ಹಲವು ಪ್ರಯೋಜನ title=
Prepaid Recharge Plan

ನವದೆಹಲಿ: ಕಡಿಮೆ ಹಣ ಖರ್ಚು ಮಾಡುವ ಮೂಲಕ ನೀವು ಉಚಿತ ಕರೆ ಮತ್ತು ಹೆಚ್ಚಿನ ಇಂಟರ್ನೆಟ್ ಡೇಟಾದ ಲಾಭವನ್ನು ಪಡೆಯಲು ಬಯಸಿದರೆ, ಈ ಸುದ್ದಿ ನಿಮಗಾಗಿ. ಇಂದು ನಾವು ಅಂತಹ ಕೆಲವು ಪ್ರಿಪೇಯ್ಡ್ ಯೋಜನೆಗಳ (Prepaid Recharge Plan) ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಅದು ನಿಮ್ಮ ಬಜೆಟ್‌ನಲ್ಲಿ ಮಾತ್ರವಲ್ಲ, ಹೆಚ್ಚಿನ ವೇಗದ 4G ಇಂಟರ್‌ನೆಟ್‌ನೊಂದಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.

ಯಾವಾಗ ಹೆಚ್ಚು ಅನುಕೂಲವಾಗುತ್ತದೆ:
ವಾಸ್ತವವಾಗಿ, ತಮ್ಮ ಗ್ರಾಹಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ದೈತ್ಯ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ (Reliance Jio), ಏರ್‌ಟೆಲ್ (Airtel) ಮತ್ತು ವೊಡಾಫೋನ್-ಐಡಿಯಾ (vi) ಅಗ್ಗದ ಯೋಜನೆಗಳನ್ನು ಆರಂಭಿಸಿವೆ. ಇದರ ಬೆಲೆ 130 ರೂಪಾಯಿಗಿಂತ ಕಡಿಮೆ. ಹೌದು, ಈ ಯೋಜನೆಗಳಿಂದ ಲಭ್ಯವಿರುವ ಪ್ರಯೋಜನಗಳನ್ನು ಜನರು ಇಷ್ಟಪಡುತ್ತಿದ್ದಾರೆ ಮತ್ತು ಈ ಯೋಜನೆಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ  ಹೆಚ್ಚಾಗತೊಡಗಿದೆ.

ಇದನ್ನೂ ಓದಿ- Redmi 10 ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳು ಸೋರಿಕೆ, ಇದರ ವಿಶೇಷತೆ ಇಲ್ಲಿದೆ

ಏರ್ಟೆಲ್ 129 ರೂ. ಯೋಜನೆ:
ಏರ್‌ಟೆಲ್‌ನ (Airtel) 129 ರೂ.  ಪ್ಲಾನ್ ಅನ್ನು ಸಕ್ರಿಯಗೊಳಿಸಿದಾಗ, ಗ್ರಾಹಕರು 1 ಜಿಬಿ ಇಂಟರ್ನೆಟ್ ಡೇಟಾ ಮತ್ತು ಉಚಿತ ಅನಿಯಮಿತ ಕರೆಗಳನ್ನು ಪಡೆಯುತ್ತಾರೆ. ಈ ಯೋಜನೆಯ ವ್ಯಾಲಿಡಿಟಿ 24 ದಿನಗಳು. ಗಮನಿಸಬೇಕಾದ ಸಂಗತಿಯೆಂದರೆ, ಡೇಟಾವು ಪ್ರತಿದಿನ ಲಭ್ಯವಿಲ್ಲ, ಆದರೆ ಇದು ಒಟ್ಟಿಗೆ ಅನ್ವಯವಾಗುತ್ತದೆ. ಇದಲ್ಲದೇ, ಬಳಕೆದಾರರು 300 ಉಚಿತ SMS ಸೌಲಭ್ಯವನ್ನು ಸಹ ಪಡೆಯುತ್ತಾರೆ. ಇದು ಮಾತ್ರವಲ್ಲ, ಪ್ರೈಮ್ ವೀಡಿಯೋ 30 ದಿನಗಳ ಉಚಿತ ಪ್ರಯೋಗ, ವಿಂಕ್ ಮ್ಯೂಸಿಕ್ ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್‌ಗೆ ಚಂದಾದಾರಿಕೆ ಮತ್ತು ಉಚಿತ ಹಲೋ ಟ್ಯೂನ್ಸ್‌ನಂತಹ ಪ್ರಯೋಜನಗಳನ್ನು ಸಹ ನೀವು ಇದರಲ್ಲಿ ಪಡೆಯುತ್ತೀರಿ.

ಜಿಯೋ 129 ರೂ. ಯೋಜನೆ:
ರಿಲಯನ್ಸ್ ಜಿಯೋ (Reliance Jio) ಕೂಡ ಇತ್ತೀಚೆಗೆ ಮಾರುಕಟ್ಟೆಯಲ್ಲಿ 129 ರೂ. ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಈ ಯೋಜನೆಯ ವ್ಯಾಲಿಡಿಟಿ 28 ದಿನಗಳು. ಅಂದರೆ, ಏರ್‌ಟೆಲ್‌ಗಿಂತ 4 ದಿನಗಳು ಹೆಚ್ಚು. ಈ ಯೋಜನೆಯನ್ನು ಸಕ್ರಿಯಗೊಳಿಸುವ ಬಳಕೆದಾರರಿಗೆ ಒಟ್ಟು 2 GB ಡೇಟಾವನ್ನು ನೀಡಲಾಗುತ್ತದೆ. ಇದರೊಂದಿಗೆ, ನಿಮಗೆ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಸೌಲಭ್ಯವನ್ನು ಒದಗಿಸಲಾಗಿದೆ. ಇದಷ್ಟೇ ಅಲ್ಲ, 300 ಉಚಿತ ಎಸ್ಎಂಎಸ್ ಸೌಲಭ್ಯವನ್ನು ಸಹ ಗ್ರಾಹಕರಿಗೆ ನೀಡಲಾಗಿದೆ. ಇದಲ್ಲದೇ, ಜಿಯೋ ಟಿವಿ (JioTV), ಜಿಯೋ ಸಿನಿಮಾ (JioCinema), ಜಿಯೋ ನ್ಯೂಸ್ (JioNews), ಜಿಯೋ ಸೆಕ್ಯುರಿಟಿ (JioSecurity) ಮತ್ತು ಜಿಯೋಕ್ಲೌಡ್ (JioCloud) ನಂತಹ ಜಿಯೋ ಆಪ್ ಗಳ ಚಂದಾದಾರಿಕೆ ಉಚಿತವಾಗಿ ಲಭ್ಯವಿದೆ.

ಇದನ್ನೂ ಓದಿ- Airtel-Jioಗೆ ಟಕ್ಕರ್ ನೀಡುತ್ತಿದೆ Vodafone-Idea ದ ಈ ಪ್ಲಾನ್ , 56 ದಿನಗಳವರೆಗೆ ಸಿಗುತ್ತಿದೆ 4GB ಡೇಟಾ

Vi 129 ರೂ ಯೋಜನೆ:
ವೊಡಾಫೋನ್-ಐಡಿಯಾ (Vodafone-Idea) ಯೋಜನೆಯ ವ್ಯಾಲಿಡಿಟಿ 24 ದಿನಗಳು. ಈ ಪ್ಲಾನ್ ನಲ್ಲಿಯೂ ಜಿಯೋದಂತೆ ಒಟ್ಟು 2 ಜಿಬಿ ಡೇಟಾ ಲಭ್ಯವಿದೆ. ಈ ಯೋಜನೆಯಲ್ಲಿಯೂ, ಅನಿಯಮಿತ ಕರೆ ಸೌಲಭ್ಯವು ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಲಭ್ಯವಿದೆ. ಇದಲ್ಲದೇ, ನೀವು ಒಟ್ಟು 300 ಉಚಿತ SMS ಗಳನ್ನು ಪಡೆಯುತ್ತೀರಿ. ಆದಾಗ್ಯೂ, ಒಂದು ಪ್ರಯೋಜನವನ್ನು ಇಲ್ಲಿ ಕಡಿಮೆ ಮಾಡಲಾಗಿದೆ. ವೊಡಾಫೋನ್-ಐಡಿಯಾ ತನ್ನ  129 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಯಾವುದೇ OTT ಪ್ಲಾಟ್‌ಫಾರ್ಮ್ ಅಥವಾ ಆಪ್‌ಗಳಿಗೆ ಚಂದಾದಾರಿಕೆಯನ್ನು ನೀಡುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News