New Google Tool: ಅಪ್ರಾಪ್ತರಿಗಾಗಿ ಹೊಸ ಪರಿಕರ ಬಿಡುಗಡೆ ಮಾಡಿದ ಗೂಗಲ್, 18ಕ್ಕಿಂತ ಕಡಿಮೆ ವಯಸ್ಸಿನವರು ಮಾಡಬಹುದು ಈ ಕೆಲಸ

Google Default Upload Setting Tool - ತನ್ನ ಆಪ್ ಬಳಕೆ ಮಾಡುವ ಅಪ್ರಾಪ್ತ್ರರ ಸುರಕ್ಷತೆಯನ್ನು ಇನ್ಸ್ಟಾಗ್ರಾಮ್ ಹೆಚ್ಚಿಸಿದ ಬಳಿಕ ಇದೀಗ Google ಕೂಡ ಡಿಫಾಲ್ಟ್ ಅಪ್ಲೋಡ್ ಸೆಟ್ಟಿಂಗ್ ಟೂಲ್ ಅನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ Google Search, YouTube Kids, YouTube, Google Assistant ಹಾಗೂ ಇತರೆ ಶಾಮೀಲಾಗಿವೆ. 

Written by - Nitin Tabib | Last Updated : Aug 11, 2021, 06:17 PM IST
  • ಅಪ್ರಾಪ್ತರಿಗಾಗಿ ಡಿಫಾಲ್ಟ್ ಅಪ್ಲೋಡ್ ಸೆಟ್ಟಿಂಗ್ ಟೂಲ್ ಬಿಡುಗಡೆಗೊಳಿಸಿದ ಗೂಗಲ್.
  • 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಬಳಕೆದಾರರು ತಮ್ಮ ಚಿತ್ರವನ್ನು ಗೂಗಲ್ ನಿಂದ ತೆಗೆದುಹಾಕಬಹುದು.
  • ಈ ಬದಲಾವಣೆಯಿಂದ ಯುವಕರಿಗೆ ತನ್ನ ಭಾವಚಿತ್ರದ ಮೇಲೆ ಆನ್ಲೈನ್ ನಿಯಂತ್ರಣ ಸಾಧಿಸುವ ಅವಕಾಶ ಸಿಗಲಿದೆ.
New Google Tool: ಅಪ್ರಾಪ್ತರಿಗಾಗಿ ಹೊಸ ಪರಿಕರ ಬಿಡುಗಡೆ ಮಾಡಿದ ಗೂಗಲ್, 18ಕ್ಕಿಂತ ಕಡಿಮೆ ವಯಸ್ಸಿನವರು ಮಾಡಬಹುದು ಈ ಕೆಲಸ title=
Google Default Upload Setting Tool (File Photo)

ನವದೆಹಲಿ: Google Default Upload Setting Tool - ಮಕ್ಕಳಿಗೆ ಸುರಕ್ಷಿತ ಆನ್‌ಲೈನ್ ಅನುಭವವನ್ನು ಒದಗಿಸಲು, ಮುಂಬರುವ ವಾರಗಳಲ್ಲಿ ಡೀಫಾಲ್ಟ್ ಅಪ್‌ಲೋಡ್ ಸೆಟ್ಟಿಂಗ್‌ಗಳ (Google Privacy Setting)  ಟೂಲ್ ಅನ್ನು ಹೊರತರುವುದಾಗಿ ಗೂಗಲ್ ಘೋಷಿಸಿದೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಬಳಕೆದಾರರು ಅಥವಾ ಅವರ ತಂದೆ-ತಾಯಿ ಅಥವಾ ಪೋಷಕರು ತಮ್ಮ ಚಿತ್ರಗಳನ್ನು Google ನಿಂದ ತೆಗೆದುಹಾಕಬಹುದು. ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಗೂಗಲ್, "ಚಿತ್ರವನ್ನು 'ಸರ್ಚ್'ನಿಂದ ತೆಗೆದು ಹಾಕುವುದರಿಂದ ಅದು ವೆಬ್ ನಿಂದ ತೆಗೆದು ಹಾಕುವುದಿಲ್ಲ ಆದರೆ,  ಈ ಬದಲಾವಣೆಯು ಯುವಜನರಿಗೆ ಆನ್‌ಲೈನ್‌ನಲ್ಲಿ ತಮ್ಮ ಚಿತ್ರದ ಮೇಲೆ ಹಿಡಿತ ಸಾಧಿಸಲು ಸಹಾಯ ಮಾಡುತ್ತದೆ ಎಂದು ನಾವು ನಂಬುತ್ತೇವೆ." ಎಂದಿದೆ.

ಈ ಘೋಷಣೆ ಮಾಡಿದ ಗೂಗಲ್
ಮಕ್ಕಳ ವಯಸ್ಸು, ಲಿಂಗ ಅಥವಾ ಹಿತಾಸಕ್ತಿಗಳನ್ನು ಆಧರಿಸಿ Google ಇನ್ನು ಮುಂದೆ Ad Targetingಗೆ  ಅನುಮತಿಸುವುದಿಲ್ಲ. 'ನಾವು ವಯಸ್ಸಿನ ಪ್ರತಿ ಸೂಕ್ಷ್ಮ ಜಾಹೀರಾತು ವರ್ಗಗಳನ್ನು ಹದಿಹರೆಯದವರಿಗೆ ತೋರಿಸುವುದನ್ನು ತಡೆಯಲು ಭದ್ರತಾ ಕ್ರಮಗಳನ್ನು ವಿಸ್ತರಿಸುತ್ತೇವೆ ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರ ಲಿಂಗ ಅಥವಾ ಆಸಕ್ತಿಗಳ ಆಧಾರದ ಮೇಲೆ ಜಾಹೀರಾತು ಗುರಿಯನ್ನು ನಿಲ್ಲಿಸಲಿದ್ದೇವೆ' ಎಂದು ಗೂಗಲ್ ಘೋಷಿಸಿದೆ. ಮಕ್ಕಳ ಯೂಟ್ಯೂಬ್ ಅಪ್‌ಲೋಡ್‌ಗಳು ಕೂಡ ಅತ್ಯಂತ ಖಾಸಗಿ ಸೆಟ್ಟಿಂಗ್‌ಗೆ ಕ್ರಮೇಣ ಡೀಫಾಲ್ಟ್ ಆಗುತ್ತವೆ ಎಂದು ಗೂಗಲ್ ಹೇಳಿದೆ.

13-17 ವಯಸ್ಸಿನವರಿಗಾಗಿ ಬದಲಾಗಲಿದೆ ಡಿಫಾಲ್ಟ್ ಅಪ್ಲೋಡ್ ಸೆಟ್ಟಿಂಗ್
ನಾವು ಡೀಫಾಲ್ಟ್ ಅಪ್‌ಲೋಡ್ ಸೆಟ್ಟಿಂಗ್ ಅನ್ನು 13-17 ವಯಸ್ಸಿನ ಹದಿಹರೆಯದವರಿಗೆ (YouTube ನಲ್ಲಿ) ಲಭ್ಯವಿರುವ ಅತ್ಯಂತ ಖಾಸಗಿ ಆಯ್ಕೆಯಾಗಿ ಬದಲಾಯಿಸಲಿದ್ದೇವೆ. ಮುಂಬರುವ ತಿಂಗಳುಗಳಲ್ಲಿ ಗೂಗಲ್ ಈ ಅಪ್‌ಡೇಟ್‌ಗಳನ್ನು ಜಾಗತಿಕವಾಗಿ ತನ್ನ ಉತ್ಪನ್ನಗಳಿಗೆ ಬಿಡುಗಡೆ ಮಾಡಲಿದೆ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ-ಈ Smartphoneಗಳಲ್ಲಿ ಮುಂದಿನ ತಿಂಗಳಿನಿಂದ ಕಾರ್ಯ ನಿರ್ವಹಿಸುವುದಿಲ್ಲ Gmail, YouTube ಸೇರಿದಂತೆ ಈ ಆ್ಯಪ್ ಗಳು

ಮುಂಬರುವ ತಿಂಗಳುಗಳಲ್ಲಿ, ನಾವು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸೈನ್ ಇನ್ ಬಳಕೆದಾರರಿಗೆ ಸುರಕ್ಷಿತ ಹುಡುಕಾಟವನ್ನು ಸಕ್ರೀಯಗೊಳಿಸುತ್ತಿದ್ದೇವೆ. ಇದು ಹದಿಹರೆಯದವರಿಗೆ ಹೊಸ ಖಾತೆಗಳನ್ನು ಸ್ಥಾಪಿಸಲು ಡೀಫಾಲ್ಟ್ ಸೆಟ್ಟಿಂಗ್ ಆಗಿರಲಿದೆ. ಗೂಗಲ್ (Google News) ಅಸಿಸ್ಟೆಂಟ್‌ನಲ್ಲಿ, ಕಂಪನಿಯು ಮುಂಬರುವ ತಿಂಗಳುಗಳಲ್ಲಿ ಹೊಸ ಡೀಫಾಲ್ಟ್ ಭದ್ರತೆಯನ್ನು ಪರಿಚಯಿಸಲಿದೆ. ಯಾವ ಆಪ್‌ಗಳು ನಮ್ಮ ಕುಟುಂಬ ನೀತಿಗಳಿಗೆ ಅನುಸಾರವಾಗಿರುತ್ತವೆ ಎಂಬುದನ್ನು ಪೋಷಕರಿಗೆ ತಿಳಿಸುವ ಹೊಸ ಸುರಕ್ಷತಾ ವಿಭಾಗವನ್ನು ಕೂಡ ಹೊರತರುವುದಾಗಿ ಗೂಗಲ್ ಹೇಳಿದೆ.

ಇದನ್ನೂ ಓದಿ- Google ಮೂಲಕ ಕುಳಿತಲ್ಲೇ ಸಂಪಾದಿಸಿ 50 ಸಾವಿರ ರೂಪಾಯಿ, ಮಾಡಬೇಕಾಗಿರುವುದು ಇಷ್ಟೇ

ಅಪ್ಲಿಕೇಶನ್‌ಗಳು ತಾವು ಸಂಗ್ರಹಿಸಿದ ಡೇಟಾವನ್ನು ಹೇಗೆ ಹೆಚ್ಚು ವಿವರವಾಗಿ ಬಳಸುತ್ತವೆ ಎಂಬುದನ್ನು ಬಹಿರಂಗಪಡಿಸಬೇಕು, ಇದರಿಂದ ಆ ಆಪ್ ಡೌನ್‌ಲೋಡ್ ಮಾಡುವ ಮೊದಲು ತಮ್ಮ ಮಗುವಿಗೆ ಸೂಕ್ತವಾದುದನ್ನು ನಿರ್ಧರಿಸಲು ಪೋಷಕರಿಗೆ ಅನುವು ಸಹಾಯ ಸಿಗಲಿದೆ ಎಂದು ಕಂಪನಿ ಹೇಳಿದೆ. ಕಂಪನಿಯು YouTube ನಲ್ಲಿ, ಬ್ರೇಕ್ ಮತ್ತು ಬೆಡ್ಟೈಮ್ ರಿಮೈಂಡರ್‌ಗಳನ್ನು ಸಕ್ರೀಯಗೊಳಿಸಲಿದೆ ಮತ್ತು 18 ವರ್ಷದೊಳಗಿನ ಬಳಕೆದಾರರಿಗೆ ಆಟೋಪ್ಲೇ ಅನ್ನು ಆಫ್ ಮಾಡುವುದಾಗಿ ಹೇಳಿದೆ. ಯೂಟ್ಯೂಬ್ ಕಿಡ್ಸ್‌ನಲ್ಲಿ (Google For Kids) ಆಟೋಪ್ಲೇ ಆಯ್ಕೆಯನ್ನು ಸೇರಿಸುವುದಾಗಿ ಹೇಳಿರುವ ಕಂಪನಿ ಪೋಷಕರಿಗೆ ಅವರ ಕುಟುಂಬಕ್ಕೆ ಸರಿಯಾದ ಆಯ್ಕೆಯನ್ನು  ಆರಿಸಲು  ಅದನ್ನುಸಕ್ರೀಯಗೊಳಿಸುವ ಮೊದಲು ಪೂರ್ವ ನಿಯೋಜಿತವಾಗಿ ಡಿಫಾಲ್ಟ್ (Google Default Settings) ಆಫ್ ಮಾಡುವುದಾಗಿ ಹೇಳಿದೆ.

ಇದನ್ನೂ ಓದಿ -Google Location History - ಈ ಸಂಗತಿಗಳು Googleಗೆ ನಿಮ್ಮ ಬಗೆಗಿನ ಎಲ್ಲ ಮಾಹಿತಿ ಒದಗಿಸುತ್ತವೆ. ಈ ರೀತಿ ಬ್ಲಾಕ್ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ  

Trending News