Whatsapp Story: ನಿಮ್ಮ ವಾಟ್ಸಾಪ್ ಸ್ಟೋರಿಯನ್ನು ಯಾರಾದರೂ ಡೌನ್ಲೋಡ್ ಮಾಡಬಹುದು!
ನಿಮ್ಮ ವಾಟ್ಸಾಪ್ ಸ್ಟೋರಿಯನ್ನು ಯಾರಾದರೂ ಸುಲಭವಾಗಿ ಡೌನ್‌ಲೋಡ್ ಮಾಡಬಹುದು
ಬೆಂಗಳೂರು: ವಾಟ್ಸಾಪ್‌ನ ಸ್ಟೇಟಸ್ನಲ್ಲಿ ನಾವು ಹಾಕುವ ಫೋಟೋ ಅಥವಾ ವಿಡಿಯೋಗಳು 24 ಗಂಟೆಗಳಲ್ಲಿ ಕಣ್ಮರೆಯಾಗುತ್ತವೆ. ಆದರೆ ಯಾರೂ ಬೇಕಾದರೂ ಅದನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ನಿಮ್ಮ ವಾಟ್ಸಾಪ್ ಸಂಪರ್ಕದಲ್ಲಿರುವ ಯಾರಾದರೂ ನಿಮ್ಮ ವಾಟ್ಸಾಪ್ ಸ್ಟೋರಿಯನ್ನು (Whatsapp Story) ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಅದನ್ನು ಯಾರಿಗಾದರೂ ಕಳುಹಿಸಬಹುದು.
ವಾಟ್ಸಾಪ್ ಸ್ಟೋರಿಯನ್ನು (Whatsapp Story) ಯಾರಾದರೂ ಸುಲಭವಾಗಿ ಡೌನ್‌ಲೋಡ್ ಮಾಡಬಹುದು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಅದು ನಿಮ್ಮ ಮೊಬೈಲ್‌ನಲ್ಲಿ ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗುತ್ತದೆ.
ಇದನ್ನೂ ಓದಿ- WhatsApp New Update- ಇನ್ಮುಂದೆ ವಾಟ್ಸಾಪ್‌ನಿಂದಲೂ ಉತ್ತಮ ಗುಣಮಟ್ಟದ ಫೋಟೋಗಳನ್ನು ಕಳುಹಿಸಬಹುದು
ವಾಟ್ಸಾಪ್‌ನ ಸ್ಟೇಟಸ್ನಲ್ಲಿ ಹಾಕಿರುವ ಫೋಟೋ ಅಥವಾ ವಿಡಿಯೋವನ್ನು ನೀವು ತೆರೆದು ನೋಡಿದರೆ ಸಾಕು ಅದು ಸ್ವಯಂಚಾಲಿತವಾಗಿ ನಿಮ್ಮ ಫೋನ್‌ನಲ್ಲಿ ಸೇವ್ ಆಗುತ್ತೆ. ಡೌನ್‌ಲೋಡ್ ಮಾಡಲು ನೀವು ಏನನ್ನೂ ಮಾಡಬೇಕಾಗಿಲ್ಲ. ಆದರೆ ನೀವು ಆ ಫೋಟೋವನ್ನು ಫೋನ್‌ನಲ್ಲಿ ಎಲ್ಲಿ ನೋಡಬಹುದು ಎಂದು ಕಂಡು ಹಿಡಿಯಬೇಕಾಗುತ್ತದೆ. ಅದರ ಸಂಪೂರ್ಣ ಪ್ರಕ್ರಿಯೆಯನ್ನು ನಾವು ನಿಮಗೆ ಹೇಳಲಿದ್ದೇವೆ. 6 ಹಂತಗಳಲ್ಲಿ ನೀವು ವಾಟ್ಸಾಪ್ (Whatsapp) ಸ್ಟೋರಿಯಿಂದ ಡೌನ್‌ಲೋಡ್ ಆದ ಫೋಟೋ ಎಲ್ಲಿದೆ ಎಂದು ನೋಡಬಹುದು ...
ಇದನ್ನೂ ಓದಿ- WhatsApp ಕರೆಗಳನ್ನು ರೆಕಾರ್ಡ್ ಮಾಡಲು ಇದು ಸುಲಭ ವಿಧಾನ, ಇಲ್ಲಿದೆ ಸಂಪೂರ್ಣ ಪ್ರಕ್ರಿಯೆ
ಡೌನ್‌ಲೋಡ್ ಮಾಡಿದ ವಾಟ್ಸಾಪ್ ಸ್ಟೋರಿಯನ್ನು ಹೇಗೆ ನೋಡಬೇಕೆಂದು ಹಂತ ಹಂತವಾಗಿ ತಿಳಿಯಿರಿ:
1. ಮೊದಲು ನೀವು ವಾಟ್ಸಾಪ್ ಸ್ಟೋರೀಸ್‌ಗೆ ಹೋಗಿ ನಿಮ್ಮ ಸಂಪರ್ಕದಲ್ಲಿರುವ ಯಾರದ್ದಾದರೂ ಸ್ಟೇಟಸ್ ನಿಂದ ಫೋಟೋ ನೋಡುತ್ತೀರಿ.
2. ಅದರ ನಂತರ ಫೈಲ್ ಮ್ಯಾನೇಜರ್‌ಗೆ ಹೋಗಿ ಸೆಟ್ಟಿಂಗ್‌ಗಳ ಮೇಲೆ ಕ್ಲಿಕ್ ಮಾಡಿ.
3. ಮೇಲ್ಭಾಗದಲ್ಲಿ ಗುಪ್ತ ಫೈಲ್‌ಗಳನ್ನು ತೋರಿಸು ಆಯ್ಕೆಯನ್ನು ಸಕ್ರಿಯಗೊಳಿಸಿ.
4. ಫೈಲ್ ಮ್ಯಾನೇಜರ್‌ನಲ್ಲಿಯೇ ವಾಟ್ಸಾಪ್ ಫೋಲ್ಡರ್ ತೆರೆಯಿರಿ ಮತ್ತು ಮೀಡಿಯಾಕ್ಕೆ ಹೋಗಿ.
5. ಅಲ್ಲಿ ನೀವು ಯಾರ ಹೆಸರಿನ ಸ್ಟೇಟಸ್ ಪರಿಶೀಲಿಸಿದ್ದೀರೋ ಅವರ ಫೋಲ್ಡರ್ ಅನ್ನು ನೋಡುತ್ತೀರಿ, ನೀವು ಅದನ್ನು ತೆರೆದ ತಕ್ಷಣ, ನೀವು ನೋಡಿದ ವಾಟ್ಸಾಪ್ ಸ್ಟೋರಿಯ ಫೋಟೋವನ್ನು ನೀವು ನೋಡುತ್ತೀರಿ. ಅಷ್ಟೇ ಅಲ್ಲ ನೀವು ಅದನ್ನು ಬೇರೆಯವರಿಗೂ ಕಳುಹಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.