ಬೆಂಗಳೂರು : 2016ರಲ್ಲಿ,  ಏರ್‌ಪಾಡ್‌ಗಳನ್ನು ಪ್ರಾರಂಭಿಸುವ ಮೂಲಕ ಆಪಲ್ ಹೆಡ್‌ಫೋನ್‌ಗಳ ಜಗತ್ತನ್ನೇ ಬದಲಾಯಿಸಿತು. ಅಂದಿನಿಂದ, ಏರ್‌ಪಾಡ್‌ಗಳು ವೈರ್‌ಲೆಸ್ ಹೆಡ್‌ಫೋನ್‌ಗಳ ಜಗತ್ತಿನಲ್ಲಿ ಮುಂಚೂಣಿಯಲ್ಲಿವೆ. ಅವುಗಳ ಬೆಲೆ ಸ್ವಲ್ಪ ದುಬಾರಿಯಾದರೂ ಜನ ತುಂಬಾ ಇಷ್ಟಪಟ್ಟು ಖರೀದಿಸುತ್ತಾರೆ. ಈಗ ಆಪಲ್ ತನ್ನ ಮುಂಬರುವ ಏರ್‌ಪಾಡ್‌ಗಳೊಂದಿಗೆ ವೈರ್‌ಲೆಸ್ ಇಯರ್‌ಬಡ್‌ಗಳು ಅಥವಾ ಹೆಡ್‌ಫೋನ್‌ಗಳ ಜಗತ್ತಿಗೆ ಹೊಸ ರೂಪ ನೀಡಲು ಹೊರಟಿದೆ. ಟಿಮ್ ಕುಕ್ ಅವರ ಕಂಪನಿ ಆಪಲ್ ಈಗ ಇಯರ್‌ಬಡ್‌ಗಳಿಗೆ ಹೋದ ಅರ್ಥ ನೀಡಲು ಹೊರಟಿದೆ.


COMMERCIAL BREAK
SCROLL TO CONTINUE READING

ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಆಪಲ್ ತನ್ನ ಮುಂಬರುವ ಏರ್‌ಪಾಡ್‌ಗಳಲ್ಲಿ ಕ್ಯಾಮೆರಾವನ್ನು ಇನ್ಸ್ಟಾಲ್ ಮಾಡಲಿದೆ ಎಂದು ಹೇಳಲಾಗುತ್ತಿದೆ.ಹೆಚ್ಚುವರಿಯಾಗಿ, ಈ ಏರ್‌ಪಾಡ್‌ಗಳು ಹೆಚ್ಚು ಸುಧಾರಿತ ಕೃತಕ ಬುದ್ಧಿಮತ್ತೆ (AI) ಮತ್ತು ಆರೋಗ್ಯ ಸೆನ್ಸರ್ ನೊಂದಿಗೆ ಬರಲಿದೆ. 


ಇದನ್ನೂ ಓದಿ : ಜನರಿಗೆ ಸುಸ್ಥಿರ ಸಾರ್ವಜನಿಕ ಸಾರಿಗೆ ಒದಗಿಸಲು ಮುಂದಾದ Alstom 


ಏರ್‌ಪಾಡ್‌ಗಳಲ್ಲಿ ಕ್ಯಾಮೆರಾದ ಅವಶ್ಯಕತೆ ಏನು?: 
ವರದಿಯ ಪ್ರಕಾರ, ಆಪಲ್ ತನ್ನ ಹೊಸ ಏರ್‌ಪಾಡ್‌ಗಳಲ್ಲಿ ಸಣ್ಣ ಕ್ಯಾಮೆರಾವನ್ನು ಇನ್ಸ್ಟಾಲ್ ಮಾಡುವ ಚಿಂತನೆ ನಡೆಸಿದೆ. ಈ ಕ್ಯಾಮೆರಾಗಳು  ಯಾವುದೇ ಫ್ರೇಮ್ ಅಥವಾ ಲೆನ್ಸ್ ಇಲ್ಲದೆ ಸ್ಮಾರ್ಟ್ ಗ್ಲಾಸ್‌ಗಳಂತಹ ಪ್ರಯೋಜನಗಳನ್ನು ಒದಗಿಸುತ್ತವೆ. ಈ  ಪ್ರಾಜೆಕ್ಟ್ ಗೆ "B798" ಎಂದು ಹೆಸರಿಸಲಾಗಿದೆ.ಆಪಲ್ ಇಂಜಿನಿಯರ್‌ಗಳು ಇಯರ್‌ಬಡ್‌ಗಳಲ್ಲಿ ಕಡಿಮೆ-ರೆಸಲ್ಯೂಶನ್ ಕ್ಯಾಮೆರಾ ಸೆನ್ಸರ್ ಗಳನ್ನು ಇಂದಿನ ಏರ್‌ಪಾಡ್‌ಗಳಂತೆಯೇ ಇರಿಸಲು ಒಂದು ಮಾರ್ಗವನ್ನು ಹುಡುಕುತ್ತಿದ್ದಾರೆ ಎಂದು ವರದಿ ಹೇಳುತ್ತದೆ. ಈ ಕ್ಯಾಮೆರಾಗಳು ಮಾಹಿತಿಯನ್ನು ಸಂಗ್ರಹಿಸಬಹುದು.ಇದನ್ನು ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ಸಂಸ್ಕರಿಸಲಾಗುತ್ತದೆ ಮತ್ತು ನಿಮ್ಮ ದೈನಂದಿನ ಜೀವನವನ್ನು ಸುಲಭಗೊಳಿಸಲು ಇದು ಸಹಾಯ ಮಾಡುತ್ತದೆ.


ಮುಂದಿನ ವರ್ಷ AirPods Max ಪ್ರಾರಂಭ ಸಾಧ್ಯತೆ : 
ಈ ವರ್ಷದ ಕೊನೆಯಲ್ಲಿ ಆಪಲ್ ಹೊಸ ಏರ್‌ಪಾಡ್ಸ್ ಮ್ಯಾಕ್ಸ್ ಅನ್ನು ಪ್ರಾರಂಭಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಹೊಸ AirPods Max 'ಸ್ಥಿರ' USB-C ಪೋರ್ಟ್ ಅನ್ನು ಹೊಂದಿರುತ್ತದೆ ಎಂದು ವರದಿಗಳು ಸೂಚಿಸುತ್ತವೆ. ಹಳೆಯ ಪ್ರೊಸೆಸರ್‌ನಿಂದಾಗಿ ಹೆಡ್‌ಫೋನ್‌ಗಳು ಇನ್ನೂ ಅಡಾಪ್ಟಿವ್ ಆಡಿಯೊ ಫೀಚರ್ ಇರುವುದಿಲ್ಲ ಎನ್ನಲಾಗಿದೆ.  USB-C ಪೋರ್ಟ್ ಹೊರತುಪಡಿಸಿ, ಬೇರೆ ಯಾವುದೇ ಬದಲಾವಣೆಗಳು ಇರುವುದಿಲ್ಲ.


ಇದನ್ನೂ ಓದಿ : ಮತ್ತೆ ರಸ್ತೆಗಿಳಿಯಲಿದೆ Yamaha Rx100 : ಏನಿದರ ವಿಶೇಷತೆ, ಇಲ್ಲಿದೆ ತಿಳಿದುಕೊಳ್ಳಿ


ವರದಿಗಳ ಪ್ರಕಾರ, ಈ ವರ್ಷ ಬರಲಿರುವ ಹೊಸ AirPods Max ಕೆಲವು ಬದಲಾವಣೆಗಳನ್ನು ಹೊಂದಿರಬಹುದು. ಆದರೆ ಅವುಗಳು 'ಅಡಾಪ್ಟಿವ್ ಆಡಿಯೋ' ವೈಶಿಷ್ಟ್ಯವನ್ನು ಹೊಂದಿರುವುದಿಲ್ಲ. ಏಕೆಂದರೆ ಈ ವೈಶಿಷ್ಟ್ಯವು H2 ಚಿಪ್‌ನ ಸಂಸ್ಕರಣಾ ಶಕ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಫಾರ್ಸ್ಟ್ ಜನರೇಶನ್ ಏರ್‌ಪಾಡ್ಸ್ ಮ್ಯಾಕ್ಸ್ H1 ಚಿಪ್ ಅನ್ನು ಹೊಂದಿತ್ತು. ಅದಕ್ಕಾಗಿಯೇ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಅಡಾಪ್ಟಿವ್ ಆಡಿಯೋ ಪಡೆಯಲು ಸಾಧ್ಯವಾಗಲಿಲ್ಲ. ಮೂಲಗಳನ್ನು ನಂಬುವುದಾದರೆ ಹೊಸ ಏರ್‌ಪಾಡ್ಸ್ ಮ್ಯಾಕ್ಸ್ ಲೈಟ್ನಿಂಗ್ ಪೋರ್ಟ್ ಬದಲಿಗೆ ಯುಎಸ್‌ಬಿ-ಸಿ ಪೋರ್ಟ್ ಅನ್ನು ಚಾರ್ಜಿಂಗ್ ಮತ್ತು ಆಡಿಯೊಗಾಗಿ ಮಾತ್ರ ಹೊಂದಿರುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ