ಜನರಿಗೆ ಸುಸ್ಥಿರ ಸಾರ್ವಜನಿಕ ಸಾರಿಗೆ ಒದಗಿಸಲು ಮುಂದಾದ Alstom 

ಆಲ್ ಸ್ಟಂನಿಂದ ಲೋ ಎಮಿಷನ್ ಅಕ್ಸೆಸ್ ಟು ಪಬ್ಲಿಕ್ ಟ್ರಾನ್ಸ್ ಪೋರ್ಟ್(ಎಲ್.ಇ.ಎ.ಪಿ.) ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಬೆಂಗಳೂರಿನ ಮೆಟ್ರೋ ಸ್ಟೇಷನ್ ಗಳಿಗೆ ಕೊನೆಯ ಹಂತದ ಸುಸ್ಥಿರ ಕನೆಕ್ಟಿವಿಟಿ ಹೆಚ್ಚಿಸುವ ನಿಟ್ಟಿನಲ್ಲಿ ಮುಂದಾಗಿದೆ.ಡಬ್ಲ್ಯೂ.ಆರ್.ಐ. ಇಂಡಿಯಾ ಬೆಂಬಲಿತ ಲೀಪ್ ನಮ್ಮ ಮೆಟ್ರೋದ ಲಭ್ಯತೆ ಸುಧಾರಿಸಲಿದೆ ಮತ್ತು ಜನರಿಗೆ ಸುಸ್ಥಿರ ಸಾರ್ವಜನಿಕ ಸಾರಿಗೆಯ ಮಾದರಿ ಆಯ್ಕೆ ಮಾಡಿಕೊಳ್ಳಲು ಉತ್ತೇಜಿಸುತ್ತದೆ 

Written by - Zee Kannada News Desk | Last Updated : Feb 28, 2024, 06:06 PM IST
  • ಬೆಂಗಳೂರು ವಿಶ್ವದ ಅತ್ಯಂತ ವಾಹನದಟ್ಟಣೆಯ ನಗರಗಳಲ್ಲಿ ಒಂದಾಗಿದೆ ಮತ್ತು ಅತ್ಯಂತ ಹೆಚ್ಚಿನ ಸಂಖ್ಯೆಯ ಖಾಸಗಿ ಕಾರುಗಳನ್ನು ಹೊಂದಿದೆ.
  • ಶೇ.70ರಷ್ಟು ಪ್ರಯಾಣಿಕರು ಬೆಂಗಳೂರು ಮೆಟ್ರೋಗೆ ಕೊನೆಯ ಹಂತದ ಸಂಪರ್ಕದ ಕೊರತೆಯಿಂದ ಹಿಂಜರಿಯುತ್ತಾರೆ ಎಂದು ಹೇಳಿದೆ.
  • ಮಹಿಳೆಯರು ಮೆಟ್ರೋ ಸಂಚಾರ ಮಾಡುವವರ ಪ್ರಮುಖ ಪಾಲು ಹೊಂದಿದ್ದು
ಜನರಿಗೆ ಸುಸ್ಥಿರ ಸಾರ್ವಜನಿಕ ಸಾರಿಗೆ ಒದಗಿಸಲು ಮುಂದಾದ Alstom  title=

ಬೆಂಗಳೂರು: ಆಲ್ ಸ್ಟಂನಿಂದ ಲೋ ಎಮಿಷನ್ ಅಕ್ಸೆಸ್ ಟು ಪಬ್ಲಿಕ್ ಟ್ರಾನ್ಸ್ ಪೋರ್ಟ್(ಎಲ್.ಇ.ಎ.ಪಿ.) ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಬೆಂಗಳೂರಿನ ಮೆಟ್ರೋ ಸ್ಟೇಷನ್ ಗಳಿಗೆ ಕೊನೆಯ ಹಂತದ ಸುಸ್ಥಿರ ಕನೆಕ್ಟಿವಿಟಿ ಹೆಚ್ಚಿಸುವ ನಿಟ್ಟಿನಲ್ಲಿ ಮುಂದಾಗಿದೆ.ಡಬ್ಲ್ಯೂ.ಆರ್.ಐ. ಇಂಡಿಯಾ ಬೆಂಬಲಿತ ಲೀಪ್ ನಮ್ಮ ಮೆಟ್ರೋದ ಲಭ್ಯತೆ ಸುಧಾರಿಸಲಿದೆ ಮತ್ತು ಜನರಿಗೆ ಸುಸ್ಥಿರ ಸಾರ್ವಜನಿಕ ಸಾರಿಗೆಯ ಮಾದರಿ ಆಯ್ಕೆ ಮಾಡಿಕೊಳ್ಳಲು ಉತ್ತೇಜಿಸುತ್ತದೆ 

ಈ ಕಾರ್ಯಕ್ರಮದ ಪ್ರಾಯೋಗಿಕ ಹಂತದಲ್ಲಿ 12 ಇ-ಆಟೊಗಳನ್ನು ಯಲಚೇನಹಳ್ಳಿ ಮತ್ತು ಇಂದಿರಾನಗರ ಸ್ಟೇಷನ್ ಗಳಲ್ಲಿ ನಿಯೋಜಿಸಲಾಗಿದ್ದು ಪ್ರತಿ ಸ್ಟೇಷನ್ ನಿಂದ 4 ಕಿ.ಮೀ. ಸುತ್ತಲಿನ ಪ್ರದೇಶಗಳಲ್ಲಿ ಪ್ರಯಾಣಿಕರಿಗೆ ಸೇವೆ ಒದಗಿಸುತ್ತವೆ ಈ ಸಂಪೂರ್ಣ ಮಹಿಳೆಯರು ಚಾಲಿಸುವ ವಿದ್ಯುಚ್ಛಾಲಿತ ಆಟೊರಿಕ್ಷಾಗಳನ್ನು ಆಲ್ ಸ್ಟಂ ಸಸ್ಟೇನಬಿಲಿಟಿ ಇನ್ ಕ್ಯುಬೇಷನ್  ಪ್ರೋಗ್ರಾಮ್ ಅಡಿಯಲ್ಲಿ ಮಾರ್ಗದರ್ಶನ ನೀಡುವ ಸ್ಟಾರ್ಟಪ್ ಮೆಟ್ರೋರೈಡ್ ನಿರ್ವಹಿಸುತ್ತದೆ.

ಫೆಬ್ರವರಿ 28, 2024: ಸ್ಮಾರ್ಟ್ ಮತ್ತು ಸುಸ್ಥಿರ ಮೊಬಿಲಿಟಿಯ ಜಾಗತಿಕ ಮುಂಚೂಣಿಯ ಆಲ್ ಸ್ಟಂ ಲೋ ಎಮಿಷನ್ ಅಕ್ಸೆಸರ್ ಟು ಪಬ್ಲಿಕ್ ಟ್ರಾನ್ಸ್ ಪೋರ್ಟ್(ಲೀಪ್) ಕಾರ್ಯಕ್ರಮವನ್ನು ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಅಡಿಯಲ್ಲಿ ಪ್ರಾರಂಭಿಸಿದ್ದು ಈ ಕಾರ್ಯಕ್ರಮವು ಕೊನೆಯ ಹಂತದ ಸಂಪರ್ಕವನ್ನು ಸಾಧ್ಯವಾಗಿಸುವ, ಹೆಚ್ಚಿನ ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸುವ ಗುರಿ ಹೊಂದಿದೆ. ಕಾರ್ಯಕ್ರಮದ ಪ್ರಾಯೋಗಿಕ ಹಂತದ ಭಾಗವಾಗಿ ನಮ್ಮ ಮೆಟ್ರೋದ ಯಲಚೇನಹಳ್ಳಿ ಮತ್ತು ಇಂದಿರಾನಗರ ಸ್ಟೇಷನ್ ಗಳಿಂದ ಕೊನೆಯ ಹಂತದ ಸೇವೆಗೆ ವಿದ್ಯುಚ್ಛಾಲಿತ ಆಟೊರಿಕ್ಷಾಗಳನ್ನು ಮೆಟ್ರೋರೈಡ್ ನಿಯೋಜಿಸಿದೆ. ನಗರದ ಮೊಬಿಲಿಟಿ ಕ್ಷೇತ್ರದಲ್ಲಿ ಮಹಿಳೆಯರನ್ನು ಉತ್ತೇಜಿಸಲು ಮತ್ತು ಒಳಗೊಳ್ಳಲು ಪ್ರತಿನಿತ್ಯದ ಸಂಚಾರಕ್ಕೆ ಎಐ-ಸನ್ನದ್ಧ ಇವಿ ರೈಡ್ ಪರಿಹಾರವಾಗಿರುವ ಮೆಟ್ರೋರೈಡ್ 25 ಮಹಿಳಾ ಚಾಲಕರನ್ನು ಈ ಪ್ರದೇಶದಲ್ಲಿ ವಿದ್ಯುಚ್ಛಾಲಿತ ರಿಕ್ಷಾಗಳ ಚಾಲನೆ ಮಾಡಲು ತರಬೇತಿ ನೀಡಲಾಗಿದೆ. ಈ ರೈಡ್ ಗಳನ್ನು ಮೆಟ್ರೋರೈಡ್ ಆಪ್ ಮೂಲಕ ಕಾಯ್ದಿರಿಸಬಹುದು. 

No description available.

ಇದನ್ನೂ ಓದಿ: 2 ಎಕರೆಯಲ್ಲಿ ಪೇರು ಹಣ್ಣು ಬೆಳೆದು 30 ಲಕ್ಷ ರೂ ಆದಾಯ: ನಿಡೋಣಿ ರೈತನ ಯಶೋಗಾಥೆ..!  

ಈ ಕಾರ್ಯಕ್ರಮವನ್ನು ಆಲ್ ಸ್ಟಂ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಒಲಿವಿಯರ್ ಲಾಯ್ಸನ್ ಉದ್ಘಾಟಿಸಿದರು, ಡಬ್ಲ್ಯೂ.ಆರ್.ಐ. ಇಂಡಿಯಾದ ಫೆಲೋ ಶ್ರೀ ಶ್ರೀನಿವಾಸ ಅಲವಳ್ಳಿ, ಸ್ಟೇಟ್ ಇನ್ಸ್ ಟಿಟ್ಯೂಟ್ ಫಾರ್ ದಿ  ಟ್ರಾನ್ಸ್ ಫಾರ್ಮೇಷನ್ ಆಫ್ ಕರ್ನಾಟಕ ಉಪಾಧ್ಯಕ್ಷ ಶ್ರೀ ರಾಜೀವ್ ಗೌಡ, ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್(ಕನೆಕ್ಟಿವಿಟಿ ಅಂಡ್ ಅಸೆಟ್ ಮ್ಯಾನೇಜ್ಮೆಂಟ್) ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀಮತಿ ಕಲ್ಪನಾ ಕಟಾರಿಯಾ. ಈ ಕಾರ್ಯಕ್ರಮ ಪ್ರಾರಂಭ ಕುರಿತು ಆಲ್ ಸ್ಟಂ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಒಲಿವಿಯರ್ ಲಾಯ್ಸನ್, “ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರಸ್ತೆಯ ಚಲನೆಯ ಸವಾಲುಗಳನ್ನು ಸುಲಭಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಸುಸ್ಥಿರ ಚಲನೆಯಲ್ಲಿ ನಾಯಕರಾಗಿ ಲೀಪ್ ಗಿಂತಲೂ ಸಾರ್ವಜನಿಕ ಸಾರಿಗೆ ಉತ್ತೇಜಿಸಲು ಬೇರೆ ಉತ್ತಮ ವಿಧಾನವಿಲ್ಲ. ಡಬ್ಲ್ಯೂ.ಅರ್.ಐ. ಇಂಡಿಯಾದೊಂದಿಗೆ ನಮ್ಮ ಸಹಯೋಗ ಮತ್ತು ಆಲ್ ಸ್ಟಂ ಮಾರ್ಗದರ್ಶನದ ಸ್ಟಾರ್ಟಪ್ ಮೆಟ್ರೋರೈಡ್ ಅನ್ನು ಒಳಗೊಂಡಿರುವ ಮೂಲಕ ನಾವು ಕೊನೆಯ ಹಂತದ ಕನೆಕ್ಟಿವಿಟಿಯ ಅಂತರವನ್ನು ತುಂಬುತ್ತಿದ್ದೇವೆ. ಒಟ್ಟಿಗೆ ನಾವು ಮೆಟ್ರೋ ಅನುಭವ ಉನ್ನತೀಕರಸುವ ಆವಿಷ್ಕಾರ ಮತ್ತು ಪರಿಣಿತಿಯನ್ನು ಅನುಷ್ಠಾನಗೊಳಿಸಲಿದ್ದು ಮೆಟ್ರೋ ಅನುಭವವನ್ನು ಹೆಚ್ಚು ಲಭ್ಯ, ದಕ್ಷ ಮತ್ತು ಪರಿಸರ ಸ್ನೇಹಿಯಾಗಿಸುತ್ತೇವೆ” ಎಂದರು. 

ಬೆಂಗಳೂರು ವಿಶ್ವದ ಅತ್ಯಂತ ವಾಹನದಟ್ಟಣೆಯ ನಗರಗಳಲ್ಲಿ ಒಂದಾಗಿದೆ ಮತ್ತು ಅತ್ಯಂತ ಹೆಚ್ಚಿನ ಸಂಖ್ಯೆಯ ಖಾಸಗಿ ಕಾರುಗಳನ್ನು ಹೊಂದಿದೆ. ಮೆಟ್ರೋ ಸೇವೆಯು ಹಲವು ವರ್ಷಗಳಿಂದ ತೀವ್ರವಾಗಿ ವಿಸ್ತರಿಸುತ್ತಿದ್ದು ಇತ್ತೀಚಿನ ಡಬ್ಲ್ಯೂ.ಆರ್.ಐ. ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ಶೇ.70ರಷ್ಟು ಪ್ರಯಾಣಿಕರು ಬೆಂಗಳೂರು ಮೆಟ್ರೋಗೆ ಕೊನೆಯ ಹಂತದ ಸಂಪರ್ಕದ ಕೊರತೆಯಿಂದ ಹಿಂಜರಿಯುತ್ತಾರೆ ಎಂದು ಹೇಳಿದೆ. ಮಹಿಳೆಯರು ಮೆಟ್ರೋ ಸಂಚಾರ ಮಾಡುವವರ ಪ್ರಮುಖ ಪಾಲು ಹೊಂದಿದ್ದು ಅವರು ಅಸುರಕ್ಷಿತ ಮತ್ತು ಅನನುಕೂಲದ ಕೊನೆಯ ಹಂತದ ಸಂಪರ್ಕಗಳು ಮತ್ತು ಪುರುಷ ಪ್ರಧಾನ ಸಾರಿಗೆ ಕಾರ್ಯಪಡೆಯಲ್ಲಿ ತೀವ್ರವಾದ ಕಡಿಮೆ ಪ್ರಾತಿನಿಧ್ಯದ ಸಮಸ್ಯೆ ಎದುರಿಸುತ್ತಿದ್ದಾರೆ. ಲೀಪ್ ಈ ಸಮಸ್ಯೆಗಳನ್ನು ಎದುರಿಸಲು ಮಹಿಳೆಯರಿಗೆ ಬೆಂಗಳೂರು ಮೆಟ್ರೋ ಲಭ್ಯತೆ ಹೆಚ್ಚಿಸುವಂತೆ ಮಾಡುವುದೇ ಅಲ್ಲದೆ ಸಾರಿಗೆಯ ಉದ್ಯೋಗಪಡೆಯಲ್ಲಿ ಚಾಲಕಿಯರಾಗಿ ಅವರ ಭಾಗವಹಿಸುವಿಕೆ ಹೆಚ್ಚಿಸುವ ಮೂಲಕ ಹೆಚ್ಚು ಅವರನ್ನು ಒಳಗೊಳ್ಳುವ ಮತ್ತು ಸುಸ್ಥಿರ ನಗರ ಚಲನೆಯ ವ್ಯಾಪ್ತಿ ತರುವ ಉದ್ದೇಶ ಹೊಂದಿದೆ.

ಡಬ್ಲ್ಯೂ.ಆರ್.ಐ ಇಂಡಿಯಾದ ಫೆಲೋ ಶ್ರೀ ಶ್ರೀನಿವಾಸ್ ಅಲವಳ್ಳಿ, “ಆಲ್ ಸ್ಟಂ ಮತ್ತು ಮೆಟ್ರೋರೈಡ್ ಜೊತೆಯಲ್ಲಿ ನಮ್ಮ ಸಹಯೋಗವು ಸಾರ್ವಜನಿಕ ಸಾರಿಗೆಯಲ್ಲಿ ಡೇಟಾ ಪ್ರೇರಿತ ನಿರ್ಧಾರ ಕೈಗೊಳ್ಳುವಿಕೆಗೆ ಬದ್ಧತೆಯಿಂದ ಬಂದಿದೆ. ಭಾರತದ ಮೆಟ್ರೋ ಜಾಲದಲ್ಲಿರುವ ಕೊನೆಯ ಹಂತದ ಕನೆಕ್ಟಿವಿಟಿಯನ್ನು ನಿರ್ವಹಿಸುವಲ್ಲಿ ನಮ್ಮ ಜಂಟಿ ಪ್ರಯತ್ನಗಳು ಪ್ರಯಾಣಿಕರಿಗೆ ಸುರಕ್ಷಿತ, ಕಡಿಮೆ ವೆಚ್ಚದ ಮತ್ತು ಕಡಿಮೆ ಎಮಿಷನ್ ನ ಸಾರಿಗೆ ಮಾದರಿಯನ್ನು ನಗರದ ಒಳಗಡೆ ಪೂರೈಸುತ್ತದೆ. ದೈನಂದಿನ ಸಂಚಾರವನ್ನು ಕ್ರಾಂತಿಕಾರಕಗೊಳಿಸುವ ಆಚೆಗೂ ಲೀಪ್ ನಗರದ ಚಲನೆಯ ಅಂತರವನ್ನು ತುಂಬುವುದೇ ಅಲ್ಲದೆ ಸಾಮಾಜಿಕ ಆರ್ಥಿಕ ಬದಲಾವಣೆಗೆ ವೇಗ ನೀಡುವ ಮೂಲಕ ನಾವು ಸೇವೆ ಒದಗಿಸುವ ಸಮುದಾಯಗಳಿಗೆ ಸಕಾರಾತ್ಮಕ ಮತ್ತು ದೀರ್ಘಕಾಲೀನ ಪರಿಣಾಮಕ್ಕೆ ನಮ್ಮ ಬದ್ಧತೆಯನ್ನು ಎತ್ತಿ ತೋರಿಸುತ್ತದೆ” ಎಂದರು.No description available.  

ಲೀಪ್  ಯಶಸ್ಸಿನಲ್ಲಿ ಡಬ್ಲ್ಯೂ.ಆರ್.ಐ ಇಂಡಿಯಾದ ಪ್ರಮುಖ ಪಾತ್ರವು ವಿವರವಾದ ಪ್ರಯಾಣಿಕರ ಸಮೀಕ್ಷೆಗಳನ್ನು ನಡೆಸುವಲ್ಲಿ ಹಾಗೂ ಪ್ರಯಾಣಿಕರು ಮತ್ತು ಆಟೊ ಚಾಲಕರ ಆದ್ಯತೆಯ ಗುಂಪುಗಳಿಗೆ ಗುಂಪು ಚರ್ಚೆಗಳಿಗೆ ಅವಕಾಶ ನೀಡುವುದು ಒಳಗೊಂಡಿದೆ. ಅವರ ಪ್ರಸ್ತುತ ಬೆಂಬಲವು ಮೆಟ್ರೋರೈಡ್ ಜೊತೆಯಲ್ಲಿ ಲೀಪ್ ನ ಕಾರ್ಯ ನಿರ್ವಹಣೆಯ ಮಾದರಿಯ ವಿನ್ಯಾಸ ಮತ್ತು ಪರೀಕ್ಷಿಸುವಲ್ಲಿ ಹತ್ತಿರದ ಸಹಯೋಗಕ್ಕೆ ಶ್ರಮಿಸುವಲ್ಲಿ ಈ ಸೇವೆಯ ಪ್ರಗತಿಯ ಮೌಲ್ಯಮಾಪನ ಮಾಡುವಲ್ಲಿ ಮತ್ತು ಒಳನೋಟಗಳ ವಿಶ್ಲೇಷಣೆಯಲ್ಲಿಯೂ ವಿಸ್ತರಿಸಿದ್ದು ಅದು ಪ್ರಾಜೆಕ್ಟ್ ನ ಡೇಟಾ-ಪ್ರೇರಿತ ವಿಧಾನ ಮತ್ತು ಸಮಗ್ರ ಪರಿಣಾಮಕಾರಿತ್ವಕ್ಕೆ ಕೊಡುಗೆ ನೀಡಲು ನೆರವಾಗಿದೆ. 

ಇದನ್ನೂ ಓದಿ: ಕಾಲೇಜು ಅಡಳಿತ ಮಂಡಳಿಯಿಂದ ಹಿಂಸೆ ಆರೋಪ: ಆತ್ಮಹತ್ಯೆಗೆ ವಿದ್ಯಾರ್ಥಿ ಶರಣು

ಆಲ್ ಸ್ಟಂ ಸಿ.ಎಸ್.ಆರ್. ಮಾರ್ಗದ ಮೂಲಕ ಕಾರ್ಯತಂತ್ರೀಯ ಸಹಯೋಗದ ಹೂಡಿಕೆಗಳಿಗೆ ತನ್ನ ಬದ್ಧತೆಯನ್ನು ನಿರೂಪಿಸಿದೆ. ಎನ್.ಆರ್.ಎಸ್.ಸಿ.ಇ.ಎಲ್ ಹಾಗೂ .ಐ.ಐ.ಎಂ. ಬೆಂಗಳೂರಿನ ಸ್ಟಾರ್ಟಪ್ ಗಳ ಇನ್ ಕ್ಯುಬೇಷನ್ ಕೇಂದ್ರದ ಸಹಯೋಗವು ಸ್ಟಾರ್ಟಪ್ ಗಳಿಗೆ ವಾತಾವರಣದ ಬದಲಾವಣೆಯನ್ನು ನಿಯಂತ್ರಿಸುವಲ್ಲಿ ಹಾಗೂ ಸುಸ್ಥಿರತೆ ಹಾಗೂ ಚಲನೆಯ ಸವಾಲುಗಳನ್ನು ಎದುರಿಸುವಲ್ಲಿ ಬೆಂಬಲಿಸುತ್ತದೆ. ಸಸ್ಟೇನಬಿಲಿಟಿ ಇನ್ ಕ್ಯುಬೇಷನ್ ‍ಪ್ರೋಗ್ರಾಮ್ ನ ಮೊದಲ ಸಮೂಹ ಕಾರ್ಯಕ್ರಮವಾಗಿದ್ದು ಹತ್ತು ಉದ್ಯಮಗಳನ್ನು ಯಶಸ್ವಿಯಾಗಿ ಆಯ್ಕೆ ಮಾಡಿದೆ ಮತ್ತು ಪೋಷಿಸಿದೆ ಮತ್ತು ಪ್ರಸ್ತುತ ನಡೆಯುತ್ತಿರುವ ಎರಡನೆಯ ಸಮೂಹ ಕಾರ್ಯಕ್ರಮವಾಗಿದೆ. 

ಇದರ ಮೇಲೆ ನಿರ್ಮಾಣ ಮಾಡಿದ ಆಲ್ ಸ್ಟಂ ತನ್ನ ಇಂಪ್ಯಾಕ್ಟ್ ಪಿಲ್ಲರ್ ಅಡಿಯಲ್ಲಿ ಲೀಪ್ ಪರಿಚಯಿಸಿದ್ದು ಕೊನೆಯ ಹಂತದ ಕನೆಕ್ಟಿವಿಟಿ ಸಮಸ್ಯೆಗಳನ್ನು ಪರಿಹರಿಸುವ ಗುರಿ ಹೊಂದಿದೆ ಮತ್ತು ಭಾರತದಲ್ಲಿ ಸುಸ್ಥಿರ ಚಲನೆಯ ಅಳವಡಿಕೆಯನ್ನು ಸು‍ಧಾರಿಸಲಿದೆ. ಈ ಕಾರ್ಯಕ್ರಮವು ಇತರೆ ಮೆಟ್ರೋ ನಿಲ್ದಾಣಗಳಿಗೂ ವಿಸ್ತರಿಸಲಿದ್ದು ಅದು ಹೈ-ಫ್ರೀಕ್ವೆನ್ಸಿ ಹಬ್ ಗಳಿಗೆ ಕನೆಕ್ಟಿವಿಟಿ ನೀಡಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಿಸಲು ನೆರವಾಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News