ಮತ್ತೆ ರಸ್ತೆಗಿಳಿಯಲಿದೆ Yamaha Rx100 : ಏನಿದರ ವಿಶೇಷತೆ, ಇಲ್ಲಿದೆ ತಿಳಿದುಕೊಳ್ಳಿ

Yamaha Rx100 : ಒಂದಾನೊಂದು ಕಾಲದಲ್ಲಿ ಭಾರಿ ಸದ್ದು ಮಾಡಿದ್ದ ಯಮಹಾ  rx100 ಈಗ ಮತ್ತೆ ಮಾರುಕಟ್ಟೆ ಗೆ ತರಬೇಕೆಂದು ಕಂಪನಿ ಮುಂದಾಗಿದೆ. ಬೈಕ್ ದರ, ವಿಶೇಷತೆ ಯಾವಾಗ ಬರಲಿದೆ ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿ. 

Written by - Zee Kannada News Desk | Last Updated : Feb 28, 2024, 04:47 PM IST
  • ಒಂದಾನೊಂದು ಕಾಲದಲ್ಲಿ ಭಾರಿ ಸದ್ದು ಮಾಡಿದ್ದ ಯಮಹಾ rx100 ಈಗ ಮತ್ತೆ ಮಾರುಕಟ್ಟೆ ಗೆ ತರಬೇಕೆಂದು ಕಂಪನಿ ಮುಂದಾಗಿದೆ
  • ಬೈಕ್ ನ ಪ್ರೊಡಕ್ಷನ್ ನಿಂತಿದ್ದರೂ ಕೂಡ ಅದರ ಡಿಮ್ಯಾಂಡ್ ಏನು ಕಡಿಮೆಯಾಗಿಲ್ಲ. ಅದೆಷ್ಟೋ ಜನರ ಬಹು ಬೇಡಿಕೆಯ ಬೈಕ್ ಇದಾಗಿದೆ.
  • ಆದರೆ ಯಮಹಾ ಇಂಡಿಯಾ ಅಧ್ಯಕ್ಷ ಇಶಿನ್ ಚಿಹಾನಾ RX 100 ಮತ್ತೆ ಕಾಣಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.
ಮತ್ತೆ ರಸ್ತೆಗಿಳಿಯಲಿದೆ Yamaha Rx100  : ಏನಿದರ ವಿಶೇಷತೆ, ಇಲ್ಲಿದೆ ತಿಳಿದುಕೊಳ್ಳಿ title=

Speciality Yamaha Rx100 : ಕೆಲವು ವರ್ಷಗಳ ಹಿಂದೆ  Yamaha Rx100 ಯುವಕರ ಪಾಲಿಗೆ ಅದೊಂದು ರಥವಾಗಿತ್ತು, ಎಲ್ಲೆಂದರಲ್ಲಿ Rx100 ಬೈಕ್ ಗಳದ್ದೇ ಸದ್ದು, ಅದು ಯುವಕರ ಪಾಲಿನ ಕಿಂಗ್ ಆಗಿತ್ತು. ಬೈಕ್ ನ ಪ್ರೊಡಕ್ಷನ್ ನಿಂತಿದ್ದರೂ ಕೂಡ ಅದರ ಡಿಮ್ಯಾಂಡ್ ಏನು ಕಡಿಮೆಯಾಗಿಲ್ಲ. ಅದೆಷ್ಟೋ ಜನರ ಬಹು ಬೇಡಿಕೆಯ ಬೈಕ್ ಇದಾಗಿದೆ. 

 ಕಳೆದ ಕೆಲವು ವರ್ಷಗಳ ಹಿಂದೆ ಇದರ ಮಾರಾಟವನ್ನು ಕಂಪನಿ ಸಂಪೂರ್ಣವಾಗಿ ನಿಲ್ಲಿಸಲಾಗಿದ್ದು, ಇದೀಗ ಮತ್ತೆ ಮರು ಆರಂಭಿಸಲು ಕಂಪನಿ ಮುಂದಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಯುವಪೀಳಿಗೆಯ ಯುವಕರಲ್ಲಿ ಮಂದಹಾಸ ಮೂಡಿಸಿದೆ. ಹಾಗಾದರೆ ಇದು ಯಾವಾಗ ಪ್ರಾರಂಭವಾಗಲಿದೆ ಹಾಗೂ ದರ, ಹೊಸ ವಿಶೇಷತೆಗಳನ್ನು ತಿಳಿಯಿರಿ

ಇದನ್ನು ಓದಿ : ಹಿರಿಯ ನಟ ಕೆ. ಶಿವರಾಮ್ ಅವರಿಗೆ ಹೃದಯಾಘಾತ : ಚಿಂತಾಜನಕ ಸ್ಥಿತಿ, ಆಸ್ಪತ್ರೆಗೆ ದಾಖಲು

ಇದೀಗ ಯಮಹಾ ತನ್ನ ಐಕಾನಿಕ್ RX100 ಅನ್ನು ದೊಡ್ಡ ಎಂಜಿನ್‌ನೊಂದಿಗೆ ಮರುಪ್ರಾರಂಭಿಸಲು ಯೋಜಿಸುತ್ತಿದೆ. ಯಮಹಾ RX100 ರಸ್ತೆಗಿಳಿಯಿತು ಎಂದರೆ ಸಾಕು ಪಕ್ಕದಲ್ಲಿ ಸಾವಿರ ದೊಡ್ಡ ದೊಡ್ಡ ಕಂಪನಿಗಳ ಬೈಕ್‌ಗಳು ಹೋದರೂ ಕೂಡ, ಜನರ ಕಣ್ಣು ಮಾತ್ರ RX100 ಕಡೆಗೆ ಇರುತ್ತದೆ ಎನ್ನುವ ಮಟ್ಟಿಗೆ RX100 ಸದ್ದು ಮಾಡಿತ್ತು. 

RX 100 ಉತ್ತರಾಧಿಕಾರಿಯು ಅದರ ಹಿಂದಿನ ಕೆಲವು ವಿನ್ಯಾಸ ಅಂಶಗಳನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಇದರ ಬೆಲೆ 1.25 ಲಕ್ಷದಿಂದ 1.50 ಲಕ್ಷದವರೆಗೆ ಇರಬಹುದು. ಆದರೆ ಯಮಹಾ ಈ ಬಗ್ಗೆ ಇನ್ನೂ ಖಚಿತಪಡಿಸಿಲ್ಲ. ವರದಿಗಳ ಪ್ರಕಾರ, RX 100 ಹೆಸರಿನ ಬೈಕ್‌ ಕಾಣೆಯಾಗಿರಬಹುದು. ಆದರೆ, ಇದರ ಮಾದರಿಯಲ್ಲೇ ದೊಡ್ಡ 225.9 cc ಎಂಜಿನ್ ಅನ್ನು ಹೊಂದಿರುವ ಬೈಕ್‌ ರಸ್ತೆಗಳಿಯಲಿದೆ. ಈ ಬೈಕ್ ಪ್ರಭಾವಶಾಲಿ 20.1 bhp ಪವರ್ ಮತ್ತು 19.93 Nmನ ಗರಿಷ್ಠ ಟಾರ್ಕ್ ಅನ್ನು ಪುನರುತ್ಪಾದಿಸುತ್ತದೆ.

ಇದನ್ನು ಓದಿ :  ವಿದ್ಯಾಪತಿ'ಗೆ ಜೋಡಿಯಾದ ಉಪಾಧ್ಯಕ್ಷ ಸುಂದರಿ..ನಾಗಭೂಷಣ್ ಚಿತ್ರಕ್ಕೆ ಮಲೈಕಾ ವಸುಪಾಲ್ ನಾಯಕಿ

ಇಂತಹ ವರದಿ ಬಂದಿರುವುದು ಇದೇ ಮೊದಲೇನಲ್ಲ. 2022ರಲ್ಲಿಯೂ ಯಮಹಾ RX100ನ ಹೊಸ ಮಾದರಿ ಬರಲಿದೆ ಎನ್ನವ ಬಗ್ಗೆಯೂ ವರದಿಯಾಗಿತ್ತು. ಆದರೆ ಇದುವರೆಗೂ ಆರ್‌ಎಕ್ಸ್‌ ನ ಅಂತಾ ಯಾವುದೇ ಹೊಸ ಮಾದರಿ ಬಂದಿಲ್ಲ.

ಆದರೆ ಯಮಹಾ ಇಂಡಿಯಾ ಅಧ್ಯಕ್ಷ ಇಶಿನ್ ಚಿಹಾನಾ RX 100 ಮತ್ತೆ ಕಾಣಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ. RX 100 ತನ್ನ ಪ್ರಸ್ತುತ ಹೆಸರನ್ನು ಉಳಿಸಿಕೊಳ್ಳುತ್ತದೆ ಮತ್ತು  ಅದರ ಜಾಗಕ್ಕೆ ಬೇರೆ ಮೋಟಾರ್ ಸೈಕಲ್ ಇರುವುದಿಲ್ಲ. ಸಂಸ್ಥೆಯು ಈ ಲಾಂಛನವನ್ನು ಮರುಪರಿಚಯಿಸಲು ಉದ್ದೇಶಿಸಿರುವುದರಿಂದ ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News