ಬೆಂಗಳೂರು: ಟೆಲಿಕಾಂ ಇತಿಹಾಸದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದ ರಿಲಯನ್ಸ್ ಜಿಯೋ ಇದೀಗ ತನ್ನ ಬಳಕೆದಾರರಿಗಾಗಿ ಭರ್ಜರಿ ಕೊಡುಗೆಗಳನ್ನು ಪರಿಚಯಿಸಿದೆ. ರಿಲಯನ್ಸ್ ಜಿಯೋದ ಕೆಲವು ಆಯ್ದ ಪೋಸ್ಟ್‌ಪೇಯ್ಡ್ ಯೋಜನೆಗಳಲ್ಲಿ ಗ್ರಾಹಕರಿಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ನಂತಹ ಒಟಿಟಿಗಳ ಚಂದಾದಾರಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ನೀವೂ ಕೂಡ ಜಿಯೋ ಪೋಸ್ಟ್‌ಪೇಯ್ಡ್ ಗ್ರಾಹಕರಾಗಿದ್ದರೆ, ಯಾವ ಯಾವ ಪ್ಲಾನ್ ಗಳಲ್ಲಿ ಒಟಿಟಿಗಳ ಚಂದಾದಾರಿಕೆ ಉಚಿತವಾಗಿ ಲಭ್ಯವಿದೆ ಎಂದು ತಿಳಿಯಿರಿ.


COMMERCIAL BREAK
SCROLL TO CONTINUE READING

ಜಿಯೋದ ₹999 ಪೋಸ್ಟ್‌ಪೇಯ್ಡ್ ಪ್ಲಾನ್:
* ಈ ಯೋಜನೆಯಲ್ಲಿ 200ಜಿಬಿ ಡೇಟಾ ಜೊತೆಗೆ, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಉಚಿತ ಎಸ್ಎಂಎಸ್ ಸೌಲಭ್ಯಗಳು ಲಭ್ಯವಾಗಲಿವೆ. 
* Netflix, Amazon Prime ಮತ್ತು Jio ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆ ಪ್ರಯೋಜನವೂ ಲಭ್ಯವಾಗಲಿದೆ.


ಇದನ್ನೂ ಓದಿ- Flipkart Valentine Day Sale: ಪ್ರೇಮಿಗಳ ದಿನಕ್ಕೆ ಕಡಿಮೆ ಬೆಲೆಯಲ್ಲಿ ಸೂಪರ್ ಗಿಫ್ಟ್ ನೀಡಬೇಕೇ ? ಹಾಗಿದ್ದರೆ ಇಲ್ಲಿದೆ ಭರ್ಜರಿ ಸೇಲ್


ರಿಲಯನ್ಸ್ ಜಿಯೋದ ₹ 799 ಪೋಸ್ಟ್‌ಪೇಯ್ಡ್ ಯೋಜನೆ:
>> ಜಿಯೋ ಫ್ಯಾಮಿಲಿ ಪ್ಲಾನ್‌ನೊಂದಿಗೆ ಬರುವ ಜಿಯೋದ ₹ 799 ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ರಡು ಜಿಯೋ ಸಿಮ್‌ಗಳನ್ನು ಒದಗಿಸುತ್ತದೆ. 
>> ಇದರಲ್ಲಿ 150 ಡೇಟಾ, ಅನಿಯಮಿತ ಕರೆ ಮತ್ತು ನಿತ್ಯ 100 ಫ್ರೀ ಎಸ್ಎಂಎಸ್ ಸೌಲಭ್ಯವೂ ಲಭ್ಯವಿದೆ. 
>> ಈ ಯೋಜನೆಯಲ್ಲಿ, ಬಳಕೆದಾರರು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಪಡೆಯುತ್ತಾರೆ.


ಜಿಯೋದ ₹599 ಪೋಸ್ಟ್‌ಪೇಯ್ಡ್ ಯೋಜನೆ ವಿವರಗಳು:
* ಜಿಯೋದ ಈ ಯೋಜನೆಯಲ್ಲಿ ಗ್ರಾಹಕರು 100ಜಿಬಿ ಡೇಟಾ ಪ್ರಯೋಜನವನ್ನು ಪಡೆಯಲಿದ್ದಾರೆ. ಡೇಟಾ ಮುಗಿದ ನಂತರ, ಪ್ರತಿ ಜಿಬಿಗೆ 10 ರೂ. ಪಾವತಿಸಬೇಕಾಗುತ್ತದೆ.
* ಈ ಯೋಜನೆಯಲ್ಲಿ ಅನ್ಲಿಮಿಟೆಡ್ ಕಾಲ್, ಪ್ರತಿ ದಿನ 100 ಉಚಿತ ಎಸ್ಎಂಎಸ್ ಸೌಲಭ್ಯವೂ ಲಭ್ಯವಾಗಲಿದೆ. 
* ಇದಲ್ಲದೆ, ಬಳಕೆದಾರರು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯ ಬಂಡಲ್ ಕೂಡ ಲಭ್ಯವಾಗಲಿದೆ.


ಇದನ್ನೂ ಓದಿ- Solar generator: ಈ ಒಂದು ಸಾಧನ ಅಳವಡಿಸಿ ಸಾಕು, ವಿದ್ಯುತ್ ಬಿಲ್ ಕಟ್ಟಲೇ ಬೇಕಿಲ್ಲ.!


ಜಿಯೋದ ₹399 ಪೋಸ್ಟ್‌ಪೇಯ್ಡ್ ಯೋಜನೆ:
>> ಜಿಯೋದ ಈ ಕಡಿಮೆ ಬೆಲೆಯ ಯೋಜನೆಯಲ್ಲಿ ಗ್ರಾಹಕರಿಗೆ 75ಜಿಬಿ ಡೇಟಾ ಲಭ್ಯವಿದೆ. ಡೇಟಾ ಮುಗಿದ ನಂತರ, ಜಿಯೋ ಪ್ರತಿ ಜಿಬಿಗೆ 10 ರೂ. ಪಾವತಿಸಬೇಕಾಗುತ್ತದೆ.
>> ಇದರೊಂದಿಗೆ ಅನಿಯಮಿತ ಕರೆ ಮತ್ತು ಪ್ರತಿದಿನ 100 ಉಚಿತ ಎಸ್ಎಂಎಸ್ ಕೂಡ ಲಭ್ಯವಾಗಲಿದೆ.
>> ಈ ಯೋಜನೆಯಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆ ಪ್ರಯೋಜನವೂ ಲಭ್ಯವಾಗಲಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.