ನವದೆಹಲಿ : ಪ್ರಸಿದ್ಧ ಇ-ಕಾಮರ್ಸ್ ಸೈಟ್ ಅಮೆಜಾನ್‌ನಲ್ಲಿ SmartPhone Upgrade Days Sale ಪ್ರಾರಂಭವಾಗಿದೆ. ಈ ಸೇಲ್ ನಲ್ಲಿ ನಿಮ್ಮ ನೆಚ್ಚಿನ ಸ್ಮಾರ್ಟ್‌ಫೋನ್‌ ಮೇಲೆ ಶೇಕಡಾ 40 ರಷ್ಟು ರಿಯಾಯಿತಿ ಪಡೆಯಬಹುದು. ಇದು ಮಾತ್ರವಲ್ಲ, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುವುದಾದರೆ,  1,250 ರೂ.ಗಳ ತ್ವರಿತ ರಿಯಾಯಿತಿ ಕೂಡಾ ಸಿಗಲಿದೆ. 


COMMERCIAL BREAK
SCROLL TO CONTINUE READING

ಜುಲೈ 8 ರವರೆಗೆ ಮುಂದುವರೆಯಲಿದೆ ಡೀಲ್ : 
ಅಮೆಜಾನ್ (Amazon)ಪ್ರಕಾರ, ಈ ಸೇಲ್  ಗುರುವಾರ ರಾತ್ರಿ 11.59 ರವರೆಗೆ ಮುಂದುವರಿಯಲಿದೆ. ನಿಮ್ಮ ನೆಚ್ಚಿನ ಫೋನ್‌ ಗಳ ಮೇಲೆ ರಿಯಾಯಿತಿ ಪಡೆಯಬೇಕಾದರೆ ಅಥವಾ ಆಫರ್ ನ ಲಾಭ ಪಡೆಯಬೇಕಾದರೆ ಆದಷ್ಟು ಬೇಗ ಆರ್ಡರ್  ಮಾಡಬೇಕಾಗುತ್ತದೆ.  


ಇದನ್ನೂ ಓದಿ : World's Smallest 4G Smartphone: ಅನಾವರಣಗೊಂಡ ವಿಶ್ವದ ಅತ್ಯಂತ ಚಿಕ್ಕ 4G ಸ್ಮಾರ್ಟ್ಫೋನ್ Money Mist


Oneplus ಸ್ಮಾರ್ಟ್ ಫೋನ್ ಗಳ ಮೇಲೆ ಸಿಗಲಿದೆ ಆಫರ್ : 
ಒನ್‌ಪ್ಲಸ್‌ನ ಸ್ಮಾರ್ಟ್‌ಫೋನ್ (Oneplus smartphone) ಖರೀದಿ ಮೇಲೆ ಬಂಪರ್ ರಿಯಾಯಿತಿಯೊಂದಿಗೆ ಇಎಂಐ (EMI) ಆಯ್ಕೆಯನ್ನು ಸಹ ನೀಡಲಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಒನ್‌ಪ್ಲಸ್ ನಾರ್ಡ್ ಸಿಇ ಸಹ ಈ ಮಾರಾಟದಲ್ಲಿ ಸೇರ್ಪಡೆಯಾಗಿದೇ. ಇದರ ಆರಂಭಿಕ ಬೆಲೆ 22,999 ರೂ. ಇನ್ನು ಒನ್‌ಪ್ಲಸ್ 9 5 ಜಿ ಸರಣಿಯ ಫೋನ್ ಈ ಸೇಲ್ ನಲ್ಲಿ 39,999 ರೂಗಳಿಗೆ ಸಿಗಲಿದೆ. ಇದಲ್ಲದೆ, ಆಕರ್ಷಕ ಬ್ಯಾಂಕ್ ಕೊಡುಗೆಗಳೊಂದಿಗೆ (Bank offer) ನೀವು ಈ ಫೋನ್ ಗಳನ್ನೂ ಆರ್ಡರ್ ಮಾಡಬಹುದು. ಇವುಗಳ ಮೇಲೆ, 4,000 ರೂ.ಗಳವರೆಗೆ ರಿಯಾಯಿತಿ ಸಿಗಲಿದೆ.  


Xiaomi ಸ್ಮಾರ್ಟ್‌ಫೋನ್‌ಗಳಲ್ಲೂ ಸಿಗಲಿದೆ ಉತ್ತಮ ಡೀಲ್‌ಗಳು:
ಈ ಸೇಲ್ ನಲ್ಲಿ  Xiaomiಯ ಸ್ಮಾರ್ಟ್‌ಫೋನ್ ಖರೀದಿಸುವುದಾದರೆ, ಡಿಸ್ಕೌಂಟ್ ನೊಂದಿಗೆ  ಆಕರ್ಷಕ ಎಕ್ಸ್ ಚೇಂಜ್ ಆಫರ್ ಕೂಡ ನೀಡಲಾಗುವುದು. ಯಾವುದೇ ಹಳೆಯ ಸ್ಮಾರ್ಟ್‌ಫೋನ್ (Smartphone) ಅನ್ನು Xiaomi ಯ ಪ್ರೀಮಿಯಂ ಸ್ಮಾರ್ಟ್‌ಫೋನ್ ಮಿ 11 ಎಕ್ಸ್‌ನೊಂದಿಗೆ ವಿನಿಮಯ ಮಾಡಿಕೊಳ್ಳಬಹುದು. ಇದಲ್ಲದೆ, ನೋ ಕಾಸ್ಟ್  ಇಎಂಐನ ಲಾಭವನ್ನು ಪಡೆದುಕೊಳ್ಳಬಹುದು. 


ಇದನ್ನೂ ಓದಿ: Android ಬಳಕೆದಾರರೇ ಗಮನಿಸಿ! ಫೇಸ್‌ಬುಕ್‌ನ ಲಾಗಿನ್ ಪಾಸ್‌ವರ್ಡ್ ಕದಿಯುತ್ತಿರುವ ಅಪ್ಲಿಕೇಶನ್‌ಗಳ ಬಗ್ಗೆ ಇರಲಿ ಎಚ್ಚರ


Samsung ಸ್ಮಾರ್ಟ್‌ಫೋನ್‌ ಮೇಲೆ ಭಾರಿ ರಿಯಾಯಿತಿ : 
ಆಯ್ದ ಸ್ಯಾಮ್‌ಸಂಗ್ (Samsung) ಸ್ಮಾರ್ಟ್‌ಫೋನ್‌ಗಳ ಮೇಲೆ  ಶೇಕಡಾ 25 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಇತ್ತೀಚೆಗೆ ಬಿಡುಗಡೆ ಮಾಡಿದ ಗ್ಯಾಲಕ್ಸಿ ಎಂ 32 ಅನ್ನು ರಿಯಾಯಿತಿ ಬೆಲೆಯಲ್ಲಿ ಪಡೆದುಕೊಳ್ಳ ಬಹುದು.  ಈ ಸೇಲ್ ನಲ್ಲಿ ಗ್ಯಾಲಕ್ಸಿ ಎಂ 31 ರ ಬೆಲೆ 16,999 ರೂ.ಗೆ ಏರಿದೆ. ಗ್ಯಾಲಕ್ಸಿ M51 ಅನ್ನು 8 ಸಾವಿರ ರೂಪಾಯಿಗಳ ರಿಯಾಯಿತಿಯೊಂದಿಗೆ ಖರೀದಿಸಬಹುದು.


ಐಫೋನ್‌ನಲ್ಲೂ 9 ಸಾವಿರಗಳ ರಿಯಾಯಿತಿ : 
ಅಮೆಜಾನ್ ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಸೇಲ್ ನಲ್ಲಿ (smartphone upgrade days), ಆಪಲ್ ಐಫೋನ್ ಅನ್ನು ರಿಯಾಯಿತಿಯೊಂದಿಗೆ ಖರೀದಿಸಬಹುದು. ಇದೇ ವೇಳೆ ವಿವೋ ಸ್ಮಾರ್ಟ್‌ಫೋನ್‌ಗಳಲ್ಲಿ 30% ರಿಯಾಯಿತಿ ಮತ್ತು 2500 ರೂ.ಗಳ ಎಕ್ಸ್ ಚೇಂಜ್ ಬೋನಸ್ ಸಿಗಲಿದೆ. ಇದಲ್ಲದೆ, ನೀವು OPPO ಸ್ಮಾರ್ಟ್‌ಫೋನ್‌ಗಳನ್ನು 35 ಪ್ರತಿಶತದವರೆಗೆ ರಿಯಾಯಿತಿಯಲ್ಲಿ ಖರೀದಿಸಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.