Best Online Shopping Platform :ಸಾಮಾನ್ಯವಾಗಿ ಹೆಚ್ಚಿನ ಜನರು ಆನ್‌ಲೈನ್ ಶಾಪಿಂಗ್‌ಗಾಗಿ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಅನ್ನು ಬಳಸುತ್ತಾರೆ. ರಿಯಾಯಿತಿ ದರದಲ್ಲಿ ವಸ್ತುಗಳನ್ನು ಖರೀದಿಸಬಹುದು ಎನ್ನುವ ಉದ್ದೇಶದಿಂದಲೇ ಈ ಆಪ್ ಗಳನ್ನು ಬಳಸಲಾಗುತ್ತದೆ. ಆದರೆ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ಗಿಂತ ಕಡಿಮೆ ಬೆಲೆಯಲ್ಲಿ ಸರಕುಗಳನ್ನು ಮಾರಾಟ ಮಾಡುವ ಮತ್ತೊಂದು ಇ-ಕಾಮರ್ಸ್ ವೆಬ್‌ಸೈಟ್ ಇದೆ. ಇದು ಸರ್ಕಾರಿ ವೆಬ್‌ಸೈಟ್‌ ಆಗಿದ್ದು, ಪ್ರತಿ ವಸ್ತುವನ್ನು ಸಗಟು ದರದಲ್ಲಿ  ಮಾರಾಟ ಮಾಡಲಾಗುತ್ತದೆ. ಹಾಗಾಗಿ ಕಡಿಮೆ ದರದಲ್ಲಿ ಶಾಪಿಂಗ್ ಮಾಡುವ ಯೋಚನೆ ಇದ್ದರೆ,   ಈ ವೆಬ್‌ಸೈಟ್‌ ಉತ್ತಮ ಆಯ್ಕೆಯಾಗಬಹುದು.


COMMERCIAL BREAK
SCROLL TO CONTINUE READING

ಉತ್ತಮ  ಡೆಲಿವೆರಿ ವ್ಯವಸ್ಥೆ :
ಗವರ್ನಮೆಂಟ್ ಇ ಮಾರ್ಕೆಟ್‌ಪ್ಲೇಸ್ GEM ಹೆಸರಿನ ಈ ಸರ್ಕಾರಿ ಸರ್ಕಾರಿ ವೆಬ್‌ಸೈಟ್‌ ನಲ್ಲಿ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಇತರ ಇ-ಕಾಮರ್ಸ್ ವೆಬ್‌ಸೈಟ್‌ಗಳೊಂದಿಗೆ ಹೋಲಿಕೆ ಮಾಡಿದರೆ, ಇಲ್ಲಿ ಎಲ್ಲಾ ಉತ್ಪನ್ನಗಳನ್ನು ಅಗ್ಗದ ಬೆಲೆಗೆ ಖರೀದಿಸಬಹುದು. ಉತ್ಪನ್ನಗಳ ಗುಣಮಟ್ಟದಿಂದ ವಿತರಣೆಯವರೆಗೆ, ಸಂಪೂರ್ಣ ಪ್ರಕ್ರಿಯೆಯು ಉತ್ತಮವಾಗಿದೆ. ಇತರ ಪ್ಲಾಟ್‌ಫಾರ್ಮ್‌ಗಳಿಗೆ ಹೋಲಿಸಿದರೆ GEMನಲ್ಲಿ ಕಂಡುಬರುವ ಸರಕುಗಳು ಅಗ್ಗವಾಗಿವೆ ಎನ್ನುವುದು 2021-22 ರಲ್ಲಿ ನಡೆಸಿದ ಆರ್ಥಿಕ ಸಮೀಕ್ಷೆಯಿಂದ  ತಿಳಿದು ಬಂದಿದೆ.  
 
ಇದನ್ನೂ ಓದಿ :  Snake: ಹಾವನ್ನು ಮನೆಗೆ ಪ್ರವೇಶಿಸದಂತೆ ಹೇಗೆ ತಡೆಯಬೇಕು? ಪ್ರವೇಶಿಸಿದರೂ ಅದನ್ನು ಹೇಗೆ ಹೊರಹಾಕಬೇಕು?


ದರ ಮಾತ್ರವಲ್ಲದೆ ಗುಣಮಟ್ಟದಲ್ಲಿಯೂ ಉತ್ತಮ : 
ಕಡಿಮೆ ಬೆಲೆಯಿಂದಾಗಿ, ಉತ್ಪನ್ನದ ಗುಣಮಟ್ಟದ ಬಗ್ಗೆ ಅನೇಕ ಜನರ ಮನಸ್ಸಿನಲ್ಲಿ ಪ್ರಶ್ನೆ ಉದ್ಭವಿಸುತ್ತದೆ. ಆದರೆ ಇಲ್ಲಿ ಸಿಗುವ ಸರಕುಗಳು ಗುಣಮಟ್ಟದ ದೃಷ್ಟಿಯಿಂದಲೂ  ಅತ್ಯುತ್ತಮವಾಗಿವೆ. ಸಮೀಕ್ಷೆಯಲ್ಲಿ ಒಟ್ಟು 22 ಉತ್ಪನ್ನಗಳನ್ನು ಹೋಲಿಕೆ ಮಾಡಿ ನೋಡಲಾಗಿದ್ದು, ದರಗಳಲ್ಲಿನ ವ್ಯತ್ಯಾಸವು ದೊಡ್ಡ ಪ್ರಮಾಣದ್ದಾಗಿತ್ತು. ಹೀಗಾಗಿ ಇಲ್ಲಿ ಶಾಪಿಂಗ್ ಮಾಡಿದರೆ ಲಾಭವಾಗುವುದಂತೂ ಖಂಡಿತಾ. 


ಕೆಲವೇ ಜನರಿಗಿದೆ ಈ ವೆಬ್‌ಸೈಟ್‌ ಮಾಹಿತಿ : 
ಕೈಗಾರಿಕೆಗಳನ್ನು ಉತ್ತೇಜಿಸಲು ಸರ್ಕಾರವು ಈ ಸರ್ಕಾರಿ ವೇದಿಕೆಯನ್ನು ಪ್ರಾರಂಭಿಸಿದೆ .  ಈ ವೆಬ್‌ಸೈಟ್‌ ಆರಂಭವಾಗಿ ಹಲವು ವರ್ಷಗಲೇ ಕಳೆದಿದ್ದರೂ, ಈ ಸರ್ಕಾರಿ ಇ-ಮಾರುಕಟ್ಟೆಯ ಬಗ್ಗೆ ಇನ್ನೂ ಕೂಡಾ ಹೆಚ್ಚಿನ ಜನರಿಗೆ ಮಾಹಿತಿ ಇಲ್ಲ. 


ಇದನ್ನೂ ಓದಿ : Smartphone: ದೇಶದಲ್ಲಿಯೇ ಅತೀ ಅಗ್ಗದ ಬೆಲೆಗೆ ಮಾರಾಟವಾಗ್ತಿದೆ ಈ ಸ್ಮಾರ್ಟ್ ಫೋನ್: ಇಂದೇ ಖರೀದಿಸಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.