ನವದೆಹಲಿ : ಅಮೆಜಾನ್ (Amazon)ದೇಶದ ಅತ್ಯಂತ ಜನಪ್ರಿಯ ಆನ್‌ಲೈನ್ ಶಾಪಿಂಗ್ (Online shopping) ಸೈಟ್‌ಗಳಲ್ಲಿ ಒಂದಾಗಿದೆ. ವಾರ್ಷಿಕ ಸೇಲ್ , ಹಬ್ಬದ ಕೊಡುಗೆಗಳು ಮತ್ತು ರಿಯಾಯಿತಿಗಳ ಜೊತೆಯಲ್ಲಿ, ಅಮೆಜಾನ್ ತನ್ನ ಮೊಬೈಲ್ ಆಪ್ ಬಳಕೆದಾರರಿಗೆ ದಿನನಿತ್ಯ ಅನೇಕ ವಿಶೇಷ ಕೊಡುಗೆಗಳನ್ನು (Amazon offer) ನೀಡುತ್ತಿದೆ. ಅನೇಕ ಉತ್ಪನ್ನಗಳಲ್ಲಿ ಲಭ್ಯವಿರುವ ಈ ಕೊಡುಗೆಗಳು 24 ಗಂಟೆಗಳವರೆಗೆ ಮಾತ್ರ ಮಾನ್ಯವಾಗಿರುತ್ತವೆ ಮತ್ತು ಇವುಗಳನ್ನು ದಿನದ ಅಮೆಜಾನ್ ಡೀಲ್ ಎಂದು ಕರೆಯಲಾಗುತ್ತದೆ. 


COMMERCIAL BREAK
SCROLL TO CONTINUE READING

ವಿವೋ ಇತ್ತೀಚಿನ 5G ಸ್ಮಾರ್ಟ್ ಫೋನ್  ಮೇಲೆ 24 ಸಾವಿರ ರೂಪಾಯಿಗಳ ರಿಯಾಯಿತಿ :  
Vivo X60 5G ಯನ್ನು ಈ ವರ್ಷ 42,990 ಬೆಲೆಯಲ್ಲಿ ಬಿಡುಗಡೆಯಾಯಿತು. ಈ 128GB RAM ಸ್ಮಾರ್ಟ್ ಫೋನ್ ಅನ್ನು ಡೀಲ್ ಆಫ್ ದಿ ಡೇಯಲ್ಲಿ (Amazon deal of the day) 24 ಸಾವಿರದವರೆಗೆ ರಿಯಾಯಿತಿ ದರದಲ್ಲಿ ಖರೀದಿಸಬಹುದು. ಪ್ರತಿಯೊಬ್ಬರೂ ಈ ಫೋನಿನಲ್ಲಿ 8 ಸಾವಿರ ರಿಯಾಯಿತಿ ಸಿಗುತ್ತಿದೆ. ಅಂದರೆ ಈ ಫೋನ್ ಬೆಲೆ 34,990ಯಷ್ಟಾಗುತ್ತದೆ. ಇದರ ಮೇಲೆ ನಡೆಯುತ್ತಿರುವ ಎಕ್ಸ್ಚೇಂಜ್ ಆಫರ್ ನ ಸಂಪೂರ್ಣ ಲಾಭವನ್ನು ಪಡೆದರೆ, 15,750 ರೂ. ವರೆಗೆ ಉಳಿಸಬಹುದು. ಇದರೊಂದಿಗೆ, ಅನೇಕ ಬ್ಯಾಂಕ್ ಕೊಡುಗೆಗಳು(Bank offers)  ಮತ್ತು ಕ್ಯಾಶ್‌ಬ್ಯಾಕ್ (cashback) ಅವಕಾಶಗಳು ಕೂಡಾ ಸಿಗಲಿದೆ. 


ಇದನ್ನೂ ಓದಿ : WhatsApp ಬಳಕೆದಾರರಿಗೆ ಸಿಹಿ ಸುದ್ದಿ : ನಿಮಗಾಗಿ ವಾಟ್ಸಾಪ್ ತರುತ್ತಿದೆ ಭರ್ಜರಿ ಫೀಚರ್! 


ಒನ್‌ಪ್ಲಸ್ ಸ್ಮಾರ್ಟ್ ಟಿವಿ ಮೇಲೆ ಸಿಗಲಿದೆ ರಿಯಾಯಿತಿ :  
OnePlus 32 ಇಂಚು  HD Ready LED Smart Android TV ಯನ್ನು 19,999 ರೂ . ಬದಲಿಗೆ  15,999 ರೂ.ಗಳಿಗೆ ಖರೀದಿಸಬಹುದು. ಎಕ್ಸ್‌ಚೇಂಜ್ ಆಫರ್‌ನೊಂದಿಗೆ  3,820 ರೂ. ವರೆಗೆ ಉಳಿತಾಯ ಮಾಡಬಹುದು. ಕೋಟಕ್ ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳನ್ನು (ICICI Bank Card) ಬಳಸಿದರೆ 2,000 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಕೂಡಾ ಪಡೆಯಬಹುದು. HSBC ಕ್ಯಾಶ್‌ಬ್ಯಾಕ್ ಕಾರ್ಡ್ ಬಳಸಿ, 5% ದಷ್ಟು ತ್ವರಿತ ರಿಯಾಯಿತಿ ಸಿಗಲಿದೆ. 


ವೈರ್ಡ್ ಇಯರ್‌ಫೋನ್‌ಗಳ ಮೇಲೆ 79% ರಿಯಾಯಿತಿ :  
pTron Boom Ultima 4D ಡ್ಯುಯಲ್ ಡ್ರೈವರ್, ಇನ್ ಇಯರ್ ಗೇಮಿಂಗ್ ವೈರ್ಡ್ ಹೆಡ್‌ಫೋನ್‌ಗಳಲ್ಲಿ 79% ರಿಯಾಯಿತಿ ಸಿಗಲಿದೆ. 1900  ರೂಪಾಯಿ ಬೆಲೆಯ ಈ ಇಯರ್‌ಫೋನ್‌ಗಳನ್ನು ಕೇವಲ 399 ರೂ.ಗಳಿಗೆ ನಿಮ್ಮದಾಗಿಸಿಕೊಳ್ಳಬಹುದು. ಇದರ ಮೇಲೆ ಕ್ಯಾಶ್‌ಬ್ಯಾಕ್ ಅವಕಾಶಗಳು ಮತ್ತು ಕೆಲವು ಬ್ಯಾಂಕ್ ಆಫರ್ ಗಳು ಸಹಾ ಸಿಗಲಿದೆ.  


ಇದನ್ನೂ ಓದಿ : No Internet From Tomorrow: ನಾಳೆಯಿಂದ ಹಲವು ಸಾಧನಗಳಲ್ಲಿ Internet ಕೆಲಸ ಮಾಡುವುದನ್ನು ನಿಲ್ಲಿಸಲಿದೆ!


ನೀವು ಇಂದು ಮಾತ್ರ ಬಳಸಬಹುದಾದ ಹಲವು ಕೊಡುಗೆಗಳಿವೆ. ಅಮೆಜಾನ್‌ನ ಡೀಲ್‌ ಆಫ್‌ ಡೇ ಆಫರ್‌ನಲ್ಲಿ, ನಿಮಗೆ ಬೇಕಾದ ಸರಕುಗಳ ಮೇಲೆ  ಭಾರೀ ರಿಯಾಯಿತಿಗಳನ್ನು ಪಡೆಯಬಹುದು. ಹಾಗೆಯೇ, ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon great Indian Festival sale) ಕೂಡ ಅಕ್ಟೋಬರ್ 3 ರಿಂದ ಆರಂಭವಾಗಲಿದೆ.  ಅಮೆಜಾನ್ ಮೊಬೈಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ಆಫರ್ ಗಳ ಲಾಭವನ್ನು ಪಡೆದುಕೊಳ್ಳಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.