Tech News : ಸ್ಯಾಮ್ ಸಂಗ್ ನ ಈ ಫೋನ್ ನಲ್ಲಿದೆಯಂತೆ ಸಮಸ್ಯೆ ; ಕಂಪನಿ ವಿರುದ್ಧ ದಾಖಲಾಯಿತು ಕೇಸ್
ಎಕ್ಸ್‌ಡಿಎ ಡೆವಲಪರ್ ವರಿ ಪ್ರಕಾರ, ಗ್ಯಾಲಕ್ಸಿ ಎಸ್ 20 ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿನ ವ್ಯಾಪಕ ನ್ಯೂನತೆಗಳನ್ನು ಸ್ಯಾಮ್‌ಸಂಗ್ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಲಾ ಫರ್ಮ್ ಹಡ್ಜೆನ್ಸ್ ಬೆರ್ಮನ್ ಹೇಳಿದೆ.
ನವದೆಹಲಿ : ಟೆಕ್ ದಿಗ್ಗಜ್ಜ ಸ್ಯಾಮ್ ಸಂಗ್ (Samsung) ವಿರುದ್ಧ ಪ್ರಕರಣ ದಾಖಲಾಗಿದೆ. ಕಂಪನಿಯು ತನ್ನ ಪ್ರಮುಖ ಗ್ಯಾಲಕ್ಸಿ ಎಸ್ 20 ಸರಣಿ (Samsung Flagship Galaxy S20 series ) ರಿಯೆರ್ ಕ್ಯಾಮೆರಾ ಸೆಟ್ ಅಪ್ ನಲ್ಲಿ ಕಡಿಮೆ ಗುಣಮಟ್ಟದ ಗ್ಲಾಸ್ ಬಳಸಿರುವ ಆರೋಪ ಕಂಪನಿ ವಿರುದ್ಧ ಕೇಳಿ ಬಂದಿದೆ.
ಎಕ್ಸ್‌ಡಿಎ ಡೆವಲಪರ್ ವರಿ ಪ್ರಕಾರ, ಗ್ಯಾಲಕ್ಸಿ ಎಸ್ 20 (Galaxy S20) ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿನ ವ್ಯಾಪಕ ನ್ಯೂನತೆಗಳನ್ನು ಸ್ಯಾಮ್‌ಸಂಗ್ (Samsung) ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಲಾ ಫರ್ಮ್ ಹಡ್ಜೆನ್ಸ್ ಬೆರ್ಮನ್ ಹೇಳಿದೆ. ಈ ಫೋನಿನ ಸಾಮಾನ್ಯ ಬಳಕೆಯ ಸಮಯದಲ್ಲೂ ಕ್ಯಾಮೆರಾ ಮಾಡ್ಯೂಲ್ ನ ಮೇಲಿರುವ ರಕ್ಷಣಾತ್ಮಕ ಶೆಲ್ ಇದ್ದಕ್ಕಿದಂತೆ ಬಂದ್ ಆಗಿ ಬಿಡುತ್ತದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ : Coronavirusಗೆ ಅಂತ್ಯ ಹಾಡಲು Molecule ಅನ್ವೇಷಿಸಿದ Tech Mahindra, ಪೇಟೆಂಟ್ ಗೆ ಅರ್ಜಿ
ಕಂಪನಿ ಮೇಲಿದೆ ವಂಚನೆ ಸೇರಿದಂತೆ ಈ ಆರೋಪಗಳು :
ಸ್ಯಾಮ್‌ಸಂಗ್ ವಿರುದ್ಧ ವಂಚನೆ ಸೇರಿದಂತೆ ವಾರಂಟಿ (Warranty) ಉಲ್ಲಂಘನೆ ಮತ್ತು ಹಲವಾರು ಗ್ರಾಹಕ ಸಂರಕ್ಷಣಾ ಕಾನೂನುಗಳ ಉಲ್ಲಂಘನೆ ಆರೋಪವಿದೆ. ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಎಸ್ 20 (Samsung Galaxy S20) ಅನ್ನು 'ವೃತ್ತಿಪರ' ದರ್ಜೆಯ ಕ್ಯಾಮೆರಾದೊಂದಿಗೆ ಬಳಕೆದಾರರಿಗೆ ಹೈಎಂಡ್ ಆಯ್ಕೆಯಾಗಿ ಮಾರಾಟ ಮಾಡಿತ್ತು. ಕಂಪನಿಯು ಪ್ರತಿ ಡಿವೈಸ್ ಮೇಲೆ 1,600 ವರೆಗೆ ಡಾಲರ್ ವರೆಗೆ ಶುಲ್ಕ ವಿಧಿಸಿದೆ ಎಂದು ಲಾಫರ್ಮ್ ಮ್ಯಾನೆಜಿಂಗ್ ಪಾರ್ಟ್ ನರ್ ಸ್ಟೀವ್ ಬರ್ಮನ್ ಹೇಳಿದ್ದಾರೆ.
ಸ್ಯಾಮ್ಸಂಗ್ ತನ್ನ ಸ್ಮಾರ್ಟ್ಫೋನ್ (Smartphone) ಶ್ರೇಣಿಯನ್ನು ರಿಯರ್ ಕ್ಯಾಮೆರಾ ಮಾಡ್ಯೂಲ್ ನ ಗ್ಲಾಸ್ ನಲ್ಲಿರುವ ದೋಷಗಳೊಂದಿಗೆ ಮಾರಾಟ ಮಾಡಿದೆ ಎಂದು ಲಾ ರ್ಮ್ ಹೇಳಿದೆ. ಯಾವುದೇ ಬಾಹ್ಯ ಬಲವನ್ನು ಅನ್ವಯಿಸದಿದ್ದರೂ ಸಹ, ಈ ಫೋನಿನಲ್ಲಿ ಈ ನ್ಯೂನತೆ ಕಂಡು ಬರುತ್ತದೆ ಎಂದು ಅದು ಹೇಳಿದೆ. ಇನ್ನು ಗ್ಯಾಲಕ್ಸಿ ಸಿ 20 ಸೀರಿಸ್ ಅನ್ನು ಲಾಂಚ್ ಮಾಡಿ ಮಾರಾಟ (Sale) ಮಾಡಿದ ನಾಲ್ಕೇ ದಿನಗಳಲ್ಲಿ ಫೋನಿನಲ್ಲಿರುವ ಈ ನ್ಯೂನತೆಯ ಬಗ್ಗೆ ವರದಿಯಾಗಿತ್ತು.
ಇದನ್ನೂ ಓದಿ : Google Pay NFC Service: ಶೀಘ್ರದಲ್ಲಿಯೇ ಭಾರತದಲ್ಲಿ Google Pay ಬಳಕೆದಾರರು NFC ಬಳಸಿ ಸಂಪರ್ಕರಹಿತ UPI ಪೇಮೆಂಟ್ ಮಾಡಬಹುದು
ಗ್ರಾಹಕರ ಪ್ರಕಾರ, ಕಂಪನಿ ವಾರಂಟಿ ಅಡಿಯಲ್ಲಿ ಈ ಸಮಸ್ಯೆಯನ್ನು ಸರಿಪಡಿಸಲು ಕೂಡಾ ನಿರಾಕರಿಸುತ್ತಿದೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.