ಅದೃಷ್ಟವನ್ನೇ ಬದಲಾಯಿಸಿತು ಸೇಲ್ ನಲ್ಲಿ ಖರೀದಿಸಿದ ಬಟ್ಟಲು..!

ಕಳೆದ ವರ್ಷ ನ್ಯೂ ಹೆವನ್  ಪ್ರದೇಶದ ಸೇಲ್  ವೊಂದರಲ್ಲಿ ಈ ಬಟ್ಟಲನ್ನು ಖರೀಸಿದ್ದಾರೆ. ಆದರೆ ಖರೀದಿ ವೇಳೆ ಈ ಬೌಲ್ ಇಷ್ಟೊಂದು ಬೆಲೆ ಬಾಳುತ್ತದೆ ಎಂದು ವ್ಯಕ್ತಿಗೆ ತಿಳಿದಿರಲಿಲ್ಲ..   

Written by - Ranjitha R K | Last Updated : Mar 4, 2021, 03:35 PM IST
  • ಕೋಟಿ ಕೋಟಿ ಬೆಲೆಬಾಳುತ್ತಿದೆ ರಸ್ತೆ ಬದಿಯಲ್ಲಿ ಖರೀದಿಸಿದ ಬಟ್ಟಲು
  • ಖರೀದಿಸಿದ್ದು 2,500 ರೂಗಳಿಗೆ ಮಾರಾಟವಾಗುತ್ತಿರುವುದು ಕೋಟಿಗಳಲ್ಲಿ
  • 15ನೇ ಶತಮಾನಕ್ಕೆ ಸೇರಿದೆಯಂತೆ ಕಲಾಕೃತಿಯ ಬಟ್ಟಲು
 ಅದೃಷ್ಟವನ್ನೇ ಬದಲಾಯಿಸಿತು ಸೇಲ್ ನಲ್ಲಿ ಖರೀದಿಸಿದ ಬಟ್ಟಲು..! title=
15ನೇ ಶತಮಾನಕ್ಕೆ ಸೇರಿದೆಯಂತೆ ಕಲಾಕೃತಿಯ ಬಟ್ಟಲು (photo twitter)

ವಾಷಿಂಗ್ಟನ್ : ರಸ್ತೆಬದಿಯ ಸೇಲ್ ನಲ್ಲಿ ಕೇವಲ 35 ಡಾಲರ್ ಅಂದರೆ 2500ಗೆ ಖರೀದಿಸಿದ ಬೌಲ್ ವ್ಯಕ್ತಿಯ ಅದೃಷ್ಟವನ್ನು ರಾತೋರಾತ್ರಿ ಬದಲಾಯಿಸಿದೆ. ಅಮೆರಿಕದ ಕನೆಕ್ಟಿಕಟ್‌ನಲ್ಲಿ (Connecticut) ವಾಸಿಸುತ್ತಿದ್ದ ವ್ಯಕ್ತಿ ಸೇಲ್ ನಲ್ಲಿ ಖರೀದಿಸಿದ ಬೌಲ್ (Bowl), ಚೀನಾದ ಅಮೂಲ್ಯ ಕಲಾಕೃತಿಯನ್ನು ಒಳಗೊಂಡಿದೆ. ಈ ಬೌಲ್ ಈಗ ಸುಮಾರು ಮೂರರಿಂದ ಐದು ಡಾಲರ್ ವರೆಗೆ ಬೆಲೆ ಬಾಳುತ್ತದೆ. ಬಿಳಿ ಬಣ್ಣದ ಬಟ್ಟಲಿನ ಮೇಲೆ ನೀಲಿ ಬಣ್ಣದ ಹೂವುಗಳ ಕಲಾಕೃತಿಯಿದೆ.  6 ಇಂಚು ವ್ಯಾಸದ ಈ ಬೌಲ್ ಅನ್ನು ಶೀಘ್ರದಲ್ಲೇ ಹರಾಜಿಗೆ (Auction) ಇಡಲಾಗುವುದು.

ಜಗತ್ತಿನಲ್ಲಿ ಅಂತಹ 6 ಬಟ್ಟಲುಗಳು ಮಾತ್ರ ಇವೆ : 
ಈ ಬಟ್ಟಲನ್ನು ಖರೀಸಿದ ವ್ಯಕ್ತಿ ಹಳೆಯ ಕಲಾಕೃತಿಗಳನ್ನು ಇಷ್ಟಪಡುತ್ತಾರೆ. ಈ ಕಾರಣದಿಂದ ಕಳೆದ ವರ್ಷ ನ್ಯೂ ಹೆವನ್ (New Haven Area) ಪ್ರದೇಶದ ಸೇಲ್ (sale) ವೊಂದರಲ್ಲಿ ಈ ಬಟ್ಟಲನ್ನು ಖರೀಸಿದ್ದಾರೆ. ಆದರೆ ಖರೀದಿ ವೇಳೆ ಈ ಬೌಲ್ ಇಷ್ಟೊಂದು ಬೆಲೆ ಬಾಳುತ್ತದೆ ಎಂದು ವ್ಯಕ್ತಿಗೆ ತಿಳಿದಿರಲಿಲ್ಲ.. ಈ ಬೌಲ್ (Bowl) ಅತ್ಯಂತ ಅಪರೂಪದ್ದಾಗಿದ್ದು,  ಅಂತಹ 7 ಬೌಲ್ ಗಳನ್ನು ಮಾತ್ರ  ತಯಾರಿಸಲಾಗಿತ್ತು.

ಇದನ್ನೂ ಓದಿ : Coronavirus : ಇಲ್ಲೀಗ ಮಾಸ್ಕ್ ಧರಿಸುವುದು ಅನಿವಾರ್ಯವಲ್ಲ

ಮಾರ್ಚ್ 17ರಂದು ನಡೆಯಲಿದೆ ಹರಾಜು :
ಮಾರ್ಚ್ 17 ರಂದು ನ್ಯೂಯಾರ್ಕ್‌ನಲ್ಲಿ (Newyork) ಈ ಬೌಲ್ ಅನ್ನು ಹರಾಜಿಗೆ ಇಡಲಾಗುವುದು.  ವರದಿಯ ಪ್ರಕಾರ, ಅಮೂಲ್ಯವಾದ ಚೀನೀ ಕಲಾಕೃತಿಗಳನ್ನು ಖರೀದಿಸಿದ ವ್ಯಕ್ತಿಯು ಸೋಥೆಬಿಗೆ ಇಮೇಲ್ ಮೂಲಕ ತನ್ನ ಮಾಹಿತಿಯನ್ನು ಕಳುಹಿಸಿದ್ದಾನೆ. 

ಮಿಂಗ್ ಅವಧಿಯ ಬೌಲ್ : 
ಈ ಬೌಲ್ ಬಗ್ಗೆ ಮಾಹಿತಿ ನೀಡಿದ ಸೋಥೆಬಿ (Sotheby) ಹಿರಿಯ ಉಪಾಧ್ಯಕ್ಷ ಮ್ಯಾಕ್ಅಟೀರ್ (McAteer), ನಾವು ಆ ಬೌಲ್ ಅನ್ನು ನೋಡಿದ ಕೂಡಲೇ ಈ ಬೌಲ್ ನ ವಿಶೇಷತೆಯನ್ನು ಕಂಡು ಕೊಂಡೆವು ಎಂದಿದ್ದಾರೆ. ಈ ಬೌಲ್ 15ನೆಯ ಶತಮಾನದಲ್ಲಿ ತಯಾರಿಸಲ್ಪಟ್ಟಿದೆ.  ಬೌಲ್ನ ಚಿತ್ರಕಲೆ, ಅದರ ಆಕಾರ, ನೀಲಿ ಬಣ್ಣವನ್ನು ಗಮನಿಸಿದರೆ, ಇದು  15 ನೇ ಶತಮಾನದಲ್ಲಿ ತಯಾರಿಸಲ್ಪಟ್ಟ ಬೌಲ್ ಎಂದು ತಿಳಿಯುತ್ತದೆ ಎಂದಿದ್ದಾರೆ. ಈ  ಬಗ್ಗೆ ಯಾವುದೇ ವೈಜ್ಞಾನಿಕ ಪರೀಕ್ಷೆ ನಡೆಸಿಲ್ಲ. ಬೌಲ್ ನ ವಿನ್ಯಾಸ, ಬಣ್ಣ, ಮತ್ತು ಸ್ಪರ್ಶದಿಂದಲೇ ಇದು ಕ್ರಿ.ಶ 1400ರಲ್ಲಿ ಅಂದರೆ ಮಿಂಗ್ ಅವಧಿಯಲ್ಲಿ (Ming period) ತಯಾರಿಸಲ್ಪಟ್ಟ ಬೌಲ್ ಎಂಬ ನಿರ್ಧಾರಕ್ಕೆ ಬರಲಾಗಿದೆ.

ಇದನ್ನೂ ಓದಿ : Indian Driving Licence: ಈ 15 ದೇಶಗಳಲ್ಲಿ ಚಿಂತೆ ಬಿಟ್ಟು ವಾಹನ ಓಡಿಸಿ, ಆದ್ರೆ Indian DL ನಿಮ್ಹತ್ರ ಇರಲಿ

ಹೆಚ್ಚಿನ ಬಟ್ಟಲುಗಳು ಮ್ಯೂಸಿಯಂನಲ್ಲಿವೆ: 
ಈ  ಬೌಲ್ ಅನ್ನು ಕ್ರಿ.ಶ 1400 ರಲ್ಲಿ ಯೋಂಗಲ್ ಚಕ್ರವರ್ತಿಯ ಆಳ್ವಿಕೆಯಲ್ಲಿ ರಚಿಸಲಾಗಿದೆ. ಈ ರೀತಿಯ ಕೇವಲ 6 ಬಟ್ಟಲುಗಳು ಮಾತ್ರ ಉಳಿದಿವೆ. ಈ ಪೈಕಿ 5 ಬಟ್ಟಲುಗಳು ಬೇರೆ ಬೇರೆ ಮ್ಯೂಸಿಯಂಗಳಲ್ಲಿವೆ. ತೈವಾನ್‌ನ ನ್ಯಾಷನಲ್ ಪ್ಯಾಲೇಸ್ ಮ್ಯೂಸಿಯಂನಲ್ಲಿ ಎರಡು, ಲಂಡನ್ ಮ್ಯೂಸಿಯಂನಲ್ಲಿ ಎರಡು ಮತ್ತು ಟೆಹ್ರಾನ್‌ನ ನ್ಯಾಷನಲ್ ಮ್ಯೂಸಿಯಂನಲ್ಲಿ (Musium) ಅಂತಹ ಒಂದು ಬೌಲ್ ಇವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News