ನವದೆಹಲಿ: ಕಿರು ವೀಡಿಯೊ ಅಪ್ಲಿಕೇಶನ್ ಟಿಕ್‌ಟಾಕ್ 2020 ರ ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಆಗಿದೆ. ಭಾರತ-ಚೀನಾ ಗಡಿ ವಿವಾದದ ನಂತರ ಈ ಚೀನೀ ವಿಡಿಯೋ ಆ್ಯಪ್ ಅನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಇದರ ಹೊರತಾಗಿಯೂ ಈ ಚೀನೀ ಅಪ್ಲಿಕೇಶನ್ ಗೂಗಲ್ (Google) ಮತ್ತು ಫೇಸ್ಬುಕ್ (Facebook) ನಂತಹ ದೊಡ್ಡ ಕಂಪನಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಿದೆ.


COMMERCIAL BREAK
SCROLL TO CONTINUE READING

ಅದ್ಭುತ ದಾಖಲೆಗಳನ್ನು ಮಾಡಿದ  ಟಿಕ್‌ಟಾಕ್ : 
ಟಿಕ್‌ಟಾಕ್ 2020 ರಲ್ಲಿ ವಿಶ್ವದಾದ್ಯಂತ 540 ಮಿಲಿಯನ್ ಡಾಲರ್ ಗಳಿಸಿದೆ. ಈ ಜನಪ್ರಿಯ ಅಪ್ಲಿಕೇಶನ್ ಅನ್ನು ಭಾರತದಲ್ಲಿ ನಿಷೇಧಿಸಲಾಗಿದ್ದರೂ ಟಿಕ್‌ಟಾಕ್ (TikTok) ಅನ್ನು ಇಡೀ ವಿಶ್ವದಲ್ಲಿ 85 ದಶಲಕ್ಷ ಬಾರಿ ಡೌನ್‌ಲೋಡ್ ಮಾಡಲಾಗಿದೆ. ಅದೇ ಸಮಯದಲ್ಲಿ, 60 ಕೋಟಿ ಜನರು ವಾಟ್ಸಾಪ್ ಅನ್ನು ಡೌನ್‌ಲೋಡ್ ಮಾಡಿದ್ದಾರೆ. 2020 ರಲ್ಲಿ 54 ಮಿಲಿಯನ್ ಬಾರಿ ಫೇಸ್‌ಬುಕ್ ಡೌನ್‌ಲೋಡ್ ಮಾಡಲಾಗಿದೆ.


ಇದನ್ನೂ ಓದಿ : 2020ರಲ್ಲಿ 250ಕ್ಕೂ ಹೆಚ್ಚು ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಭಾರತ: ಇಲ್ಲಿದೆ ಫುಲ್ ಲಿಸ್ಟ್


ಟೆಕ್ ಸೈಟ್ ಬಿಸಿನೆಸ್‌ಸೈಡರ್ ಪ್ರಕಾರ, ಡೇಟಿಂಗ್ ಅಪ್ಲಿಕೇಶನ್ ಟಿಂಡರ್  (Dating App Tinder) ಎರಡನೇ ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಆಗಿದೆ. ಟಿಂಡರ್ 2020 ರಲ್ಲಿ ಒಟ್ಟು 513 ಮಿಲಿಯನ್ ಆದಾಯವನ್ನು ಗಳಿಸಿದೆ. ಆಪ್ಟೋಪಿಯಾ (Apptopia) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಯೂಟ್ಯೂಬ್ ಎಂಬ ವಿಡಿಯೋ ಅಪ್ಲಿಕೇಶನ್ ಕಳೆದ ವರ್ಷ 478 ಮಿಲಿಯನ್ ಗಳಿಸಿದೆ. ಒಟಿಟಿ ಪ್ಲಾಟ್‌ಫಾರ್ಮ್ ಡಿಸ್ನಿ +  314 ಮಿಲಿಯನ್ ಗಳಿಸಿದೆ.


ಕಳೆದ ವರ್ಷ ಭಾರತ-ಚೀನಾ (India China) ಗಡಿ ವಿವಾದದ ನಂತರ ಸರ್ಕಾರವು 200ಕ್ಕೂ ಹೆಚ್ಚು ಚೀನೀ ಆ್ಯಪ್‌ಗಳನ್ನು ನಿಷೇಧಿಸಿತ್ತು ಎಂಬುದು ಗಮನಾರ್ಹ. ಆದಾಗ್ಯೂ, ಕಳೆದ ಹಲವಾರು ತಿಂಗಳುಗಳಿಂದ  ಚೀನಾದ ಅಪ್ಲಿಕೇಶನ್ ಟಿಕ್ ಟಾಕ್ ಅನ್ನು ಭಾರತದಲ್ಲಿ ಮರುಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಆದರೆ ಪ್ರಸ್ತುತ ಈ ವಿಷಯದಲ್ಲಿ ಭಾರತ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


ಇದನ್ನೂ ಓದಿ : ಚೀನಾದ ವಿಸ್ಮಯ! Tiktok ಮೇಲಿನ ನಿಷೇಧವನ್ನು ಹತ್ತೇ ದಿನದಲ್ಲಿ ಹಿಂಪಡೆದ ಪಾಕಿಸ್ತಾನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.