Smart TV Just At Rs 99: ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ದೀಪಾವಳಿ ಸೇಲ್ ಆರಂಭವಾಗಿದೆ. ಈ ಸೇಲ್ ದೀಪಾವಳಿಯ ಒಂದು ದಿನದ ಮೊದಲು ಅಕ್ಟೋಬರ್ 23 ರವರೆಗೆ ನಡೆಯಲಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು ಮತ್ತು ಅನೇಕ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ನೀವು ಕಡಿಮೆ ಬಜೆಟ್ನಲ್ಲಿ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಯೋಚಿಸುತ್ತಿದ್ದರೆ ಇಂತಹ ಆಫರ್ ಮತ್ತೆ ಸಿಗಲ್ಲ. 14,499 ರೂ. ಮೌಲ್ಯದ ಥಾಮ್ಸನ್‌ನ 32-ಇಂಚಿನ ಸ್ಮಾರ್ಟ್ ಟಿವಿಯನ್ನು   ದೀಪಾವಳಿ ಕೊಡುಗೆಯಾಗಿ  99 ರೂ.ಗಳಿಗೆ  ಖರೀದಿಸಬಹುದು. ಏನಿದು ಆಫರ್ ಎಂದು ತಿಳಿಯಿರಿ.


COMMERCIAL BREAK
SCROLL TO CONTINUE READING

ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್- ಥಾಮ್ಸನ್ 9A ಸರಣಿ 32 ಇಂಚಿನ ಸ್ಮಾರ್ಟ್ ಟಿವಿ ಕೊಡುಗೆಗಳು ಮತ್ತು ರಿಯಾಯಿತಿಗಳು:
ಥಾಮ್ಸನ್ 9A ಸರಣಿಯ 32 ಇಂಚಿನ ಸ್ಮಾರ್ಟ್ ಟಿವಿಯ ಪ್ರಾರಂಭಿಕ ಬೆಲೆ 14,499 ರೂ. ಆಗಿದೆ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್ ಟಿವಿಯನ್ನು 8,999 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ, ಇದರಲ್ಲಿ ಇನ್ನೂ ಹಲವು ಕೊಡುಗೆಗಳು ಲಭ್ಯವಿದ್ದು ಇದರಿಂದಾಗಿ ಟಿವಿ ಬೆಲೆ  ಗಮನಾರ್ಹವಾಗಿ ಇಳಿಕೆ ಆಗಲಿದೆ.


ಇದನ್ನೂ ಓದಿ- Electric Water Heater: ಚಳಿಗಾಲದಲ್ಲಿ ಬಿಸಿ ನೀರಿಗಾಗಿ ಟ್ಯಾಪ್‌ನೊಂದಿಗೆ ಫಿಟ್ ಮಾಡಿ ಈ ಎಲೆಕ್ಟ್ರಿಕ್ ವಾಟರ್ ಹೀಟರ್


ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್- ಥಾಮ್ಸನ್ 9A ಸರಣಿ 32 ಇಂಚಿನ ಸ್ಮಾರ್ಟ್ ಟಿವಿ ಬ್ಯಾಂಕ್ ಆಫರ್:
ಥಾಮ್ಸನ್ 9A ಸರಣಿಯ 32 ಇಂಚಿನ ಸ್ಮಾರ್ಟ್ ಟಿವಿಯನ್ನು ಖರೀದಿಸಲು ನೀವು ಎಸ್ಬಿಐ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, ನೀವು 900 ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತೀರಿ. ಅದರ ನಂತರ ಟಿವಿ ಬೆಲೆ 8,099 ರೂ. ಗಳಿಗೆ ಲಭ್ಯವಾಗಲಿದೆ. ಆದರೆ, ಈ ಸೇಲ್ ನಲ್ಲಿ ಸ್ಮಾರ್ಟ್ ಟಿವಿ ಖರೀದಿಯಲ್ಲಿ ಎಕ್ಸ್ ಚೇಂಜ್ ಆಫರ್ ಕೂಡ ಇದ್ದು, ಇದರಿಂದ ಟಿವಿಯ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ. 


ಇದನ್ನೂ ಓದಿ- ಫ್ಲಿಪ್‌ಕಾರ್ಟ್‌ನಲ್ಲಿ 42-ಇಂಚಿನ ಸ್ಮಾರ್ಟ್ ಟಿವಿ ಕೇವಲ 2,499 ರೂ.ಗೆ ಖರೀದಿಸಿ


ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್-  ಥಾಮ್ಸನ್ 9A ಸರಣಿ 32 ಇಂಚಿನ ಸ್ಮಾರ್ಟ್ ಟಿವಿ ಎಕ್ಸ್‌ಚೇಂಜ್ ಆಫರ್:
ಥಾಮ್ಸನ್ 9A ಸರಣಿಯ 32 ಇಂಚಿನ ಸ್ಮಾರ್ಟ್ ಟಿವಿಯಲ್ಲಿ ರೂ.8000 ವಿನಿಮಯ ಕೊಡುಗೆ ಇದೆ. ನಿಮ್ಮ ಹಳೆಯ ಟಿವಿಯನ್ನು ನೀವು ವಿನಿಮಯ ಮಾಡಿಕೊಂಡರೆ, ನಿಮಗೆ ಇಷ್ಟು ರಿಯಾಯಿತಿ ಸಿಗುತ್ತದೆ, ಆದರೆ ನಿಮ್ಮ ಹಳೆಯ ಟಿವಿ ಉತ್ತಮ ಸ್ಥಿತಿಯಲ್ಲಿದ್ದರೆ ಮತ್ತು ಮಾದರಿಯು ಇತ್ತೀಚಿನದಾಗಿದ್ದರೆ ಮಾತ್ರ ನೀವು 8,000 ರೂ. ಗಳ ವಿನಿಮಯ ಕೊಡುಗೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ರೀತಿಯಾಗಿ ನೀವು ಎಲ್ಲಾ ಕೊಡುಗೆಯ ಲಾಭವನ್ನು ಪಡೆಯಲು ಸಮರ್ಥರಾದರೆ 32 ಇಂಚಿನ ಸ್ಮಾರ್ಟ್ ಟಿವಿಯನ್ನು ಕೇವಲ 99 ರೂ.ಗಳಿಗೆ ಖರೀದಿಸಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.