T20 ವಿಶ್ವಕಪ್ ಶುರುವಾಗುತ್ತಿದ್ದಂತೆ ಗ್ರಾಹಕರಿಗೆ ಜಿಯೋ ಶಾಕ್!

Reliance Jio Removes Disney + Hotstar: ಟಿ 20 ವಿಶ್ವಕಪ್ ಪ್ರಾರಂಭವಾಗುತ್ತಿದ್ದಂತೆ ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ದೊಡ್ಡ ಹೊಡೆತ ನೀಡಿದೆ. ಪ್ರಿಪೇಯ್ಡ್ ಯೋಜನೆಗಳ ನಂತರ, ಇದೀಗ ಅಗ್ಗದ ಪೋಸ್ಟ್‌ಪೇಯ್ಡ್ ಯೋಜನೆಗಳಿಂದಲೂ ಸಹ  ಡಿಸ್ನಿ + ಹಾಟ್‌ಸ್ಟಾರ್ ಪ್ರಯೋಜನವನ್ನು ತೆಗೆದುಹಾಕಲಾಗಿದೆ. 

Written by - Yashaswini V | Last Updated : Oct 19, 2022, 10:06 AM IST
  • ಟಿ20 ವಿಶ್ವಕಪ್ ಶುರುವಾಗುತ್ತಿದ್ದಂತೆ ಗ್ರಾಹಕರಿಗೆ ಜಿಯೋ ಶಾಕ್!
  • ಪ್ರಿಪೇಯ್ಡ್ ಯೋಜನೆಗಳಂತೆ, ಟೆಲ್ಕೊದ ಯಾವುದೇ ಪೋಸ್ಟ್‌ಪೇಯ್ಡ್ ಯೋಜನೆಗಳಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಪ್ರಯೋಜನಗಳು ಗೋಚರಿಸುವುದಿಲ್ಲ.
  • ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಯೋಜನೆಗಳಿಂದ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಪ್ರಯೋಜನಗಳನ್ನು ತೆಗೆದುಹಾಕಲು ಕಾರಣ ಏನೆಂಬುದರ ಬಗ್ಗೆಯೂ ಜಿಯೋ ಯಾವುದೇ ಮಾಹಿತಿ ನೀಡಿಲ್ಲ.
T20 ವಿಶ್ವಕಪ್ ಶುರುವಾಗುತ್ತಿದ್ದಂತೆ ಗ್ರಾಹಕರಿಗೆ ಜಿಯೋ  ಶಾಕ್! title=
Reliance Jio Plans

Reliance Jio Removes Disney + Hotstar:  ಭಾರತದ ಪ್ರಮುಖ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಇತ್ತೀಚೆಗೆ ತನ್ನ ಎಲ್ಲಾ ಪ್ರಿಪೇಯ್ಡ್ ಯೋಜನೆಗಳಿಂದ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಪ್ರಯೋಜನವನ್ನು ತೆಗೆದುಹಾಕಿದೆ. ಈಗ ಕೇವಲ ಎರಡು ಪ್ರಿಪೇಯ್ಡ್ ಯೋಜನೆಗಳಲ್ಲಿ ಮಾತ್ರ ಡಿಸ್ನಿ+ ಹಾಟ್‌ಸ್ಟಾರ್ ಕೊಡುಗೆಗಳು ತಮ್ಮ ಪ್ರೀಮಿಯಂ ಚಂದಾದಾರಿಕೆಯೊಂದಿಗೆ ಲಭ್ಯವಾಗಲಿದೆ. 

ಪ್ರಿಪೇಯ್ಡ್ ಯೋಜನೆಗಳಂತೆ, ಟೆಲ್ಕೊದ ಯಾವುದೇ ಪೋಸ್ಟ್‌ಪೇಯ್ಡ್ ಯೋಜನೆಗಳಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಪ್ರಯೋಜನಗಳು ಗೋಚರಿಸುವುದಿಲ್ಲ. ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಯೋಜನೆಗಳಿಂದ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಪ್ರಯೋಜನಗಳನ್ನು ತೆಗೆದುಹಾಕಲು ಕಾರಣ ಏನೆಂಬುದರ ಬಗ್ಗೆಯೂ ಜಿಯೋ ಯಾವುದೇ ಮಾಹಿತಿ ನೀಡಿಲ್ಲ.

ಇದನ್ನೂ ಓದಿ- ವಾಟ್ಸಾಪ್‌ನ ಈ ಆವೃತ್ತಿಗಳನ್ನು ತಕ್ಷಣ ಅನ್‌ಇನ್‌ಸ್ಟಾಲ್ ಮಾಡಿಕೊಳ್ಳಿ .! ತಪ್ಪಿದ್ದಲ್ಲ ಅಪಾಯ

ಟಿ20 ವಿಶ್ವಕಪ್ ಶುರುವಾಗುತ್ತಿದ್ದಂತೆ ಗ್ರಾಹಕರಿಗೆ ಜಿಯೋ  ಶಾಕ್!
ಟಿ20 ವಿಶ್ವಕಪ್ ಈಗಾಗಲೇ ಪ್ರಾರಂಭವಾಗಿದೆ ಮತ್ತು ಜಿಯೋ ಅದರ ಬಗ್ಗೆ ಗಮನಹರಿಸದಿರುವುದು ವಿಚಿತ್ರವಾಗಿದೆ. ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ (Vi) ಈ ಯೋಜನೆಗಳನ್ನು ನೀಡುವುದನ್ನು ಮುಂದುವರೆಸಿದೆ. ಸಾಮಾನ್ಯವಾಗಿ ಹೆಚ್ಚು ದುಬಾರಿಯಾಗಿರುವ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಬಂಡಲ್ ಪ್ರಿಪೇಯ್ಡ್ ಪ್ಲಾನ್‌ಗಳಿಗೆ ಬದಲಾಯಿಸಲು ಬಳಕೆದಾರರನ್ನು ಉತ್ತೇಜಿಸಲು ಇದು ಜಿಯೋದ ಕಾರ್ಯತಂತ್ರದ ಕ್ರಮವಾಗಿರಬಹುದು ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- Instagram Reels: ಭಾರತೀಯ ಬಳಕೆದಾರರಿಗೆ ದೀಪಾವಳಿ ಗಿಫ್ಟ್, ಈ ರೀತಿ ರೀಲ್ಸ್ ಮಾಡಿ ಲಕ್ಷಾಂತರ ರೂ. ಸಂಪಾದಿಸಿ

ಶೀಘ್ರದಲ್ಲೇ ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆ:
ಜಿಯೋದ ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಬಳಕೆದಾರರಿಗೆ ಇನ್ನು ಮುಂದೆ ತಮ್ಮ ಯೋಜನೆಗಳೊಂದಿಗೆ  Dinsey + Hotstar ಮೊಬೈಲ್ ಪ್ರಯೋಜನ ಲಭ್ಯವಾಗುವುದಿಲ್ಲ. ಆದರೆ, ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ಗಳೊಂದಿಗೆ ಹೊಸ ಯೋಜನೆಗಳನ್ನು ಶೀಘ್ರದಲ್ಲೇ ಪ್ರಾರಂಭಿಸಬಹುದು ಎಂದು ಹೇಳಲಾಗುತ್ತಿದೆ.

ವಾಸ್ತವವಾಗಿ, ಜಿಯೋ ಐಪಿಎಲ್ ಸಮಯದಲ್ಲಿ ಜಿಯೋ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಪ್ರಯೋಜನವನ್ನು ತಂದಿತು ಮತ್ತು ಸಾಕಷ್ಟು ಜನಪ್ರಿಯವಾಯಿತು. ಅದರ ನಂತರ ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ ಕಂಪನಿಗಳೂ ಕೂಡ ಅದೇ ರೀತಿಯ ತಂತ್ರವನ್ನು ರೂಪಿಸಿದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News