ಟ್ವಿಟ್ಟರ್ ಗೆ ಹೊಸ ಸಿಇಒ ಪರಿಚಯಿಸಿದ ಎಲೋನ್ ಮಸ್ಕ್ !
Twitter New CEO : ಎಲೋನ್ ಮಸ್ಕ್ ಟ್ವಿಟರ್‌ಗೆ ಹೊಸ CEO ಅನ್ನು ಕಂಡುಕೊಂಡಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿಯೇ ಹೊಸ CEOವನ್ನು ಪರಿಚಯಿಸಿದ್ದಾರೆ.
Twitter New CEO : ಎಲೋನ್ ಮಸ್ಕ್ ಟ್ವಿಟರ್‌ಗೆ ಹೊಸ CEO ಅನ್ನು ಕಂಡುಕೊಂಡಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿಯೇ ಹೊಸ CEOವನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಹೊಸ ಸಿಇಒ ಫೋಟೋ ಹಂಚಿಕೊಂಡಿರುವ ಎಲೋನ್ ಮಸ್ಕ್ "The new CEO of Twitter is amazing" ಎಂದು ಹೇಳಿದ್ದಾರೆ.
ಆದರೆ ಟ್ವಿಟರ್‌ನ ಹೊಸ ಸಿಇಒ ಯಾವುದೇ ವ್ಯಕ್ತಿ ಅಲ್ಲ ಬದಲಾಗಿ ನಾಯಿ. ಹೌದು ಎಲೋನ್ ಮಸ್ಕ್, ತಮ್ಮ ಮುದ್ದಿನ ನಾಯಿ, ಫ್ಲೋಕಿಯನ್ನು ಟ್ವಿಟರ್ ನ ಸಿಇಒ ಎಂದು ಕರೆದಿದ್ದಾರೆ. ಈ ನಾಯಿ ಫ್ಲೋಕಿಗೆ ಶಿಬಾ ಇನು ಎಂಬ ಇನ್ನೊಂದು ಹೆಸರು ಕೂಡಾ ಇದೆ. ನಾಯಿಯನ್ನು CEO ಎಂದು ಹೇಳಿದ ಬಳಿಕ ಎಲೋನ್ ಮಸ್ಕ್ ತಮ್ಮ ನಾಯಿಯನ್ನು ಹೊಗಳಿದ್ದಾರೆ. He’s great with numbers! ಎಂದು ಮಸ್ಕ್ ಬರೆದುಕೊಂಡಿದ್ದಾರೆ.
ಈ ದೇಶದಲ್ಲಿ ಪತ್ತೆಯಾಗಿದೆ ಕೊರೊನಾಗಿಂತಲೂ ಅಪಾಯಕಾರಿ ವೈರಸ್. WHO ನಿಂದ ಅಲರ್ಟ್ ಜಾರಿ
ಎಲೋನ್ ಮಸ್ಕ್ ಅವರ ಈ ಟ್ವೀಟ್ ಅನ್ನು ಇಲ್ಲಿಯವರೆಗೆ ಸುಮಾರು 10.6 ಮಿಲಿಯನ್ ಜನ ವೀಕ್ಷಿಸಿದ್ದು, 20 ಸಾವಿರ ಜನರು ಲೈಕ್ ಮಾಡಿದ್ದಾರೆ. ಟ್ವಿಟರ್ ಅನ್ನು44 ಬಿಲಿಯನ್ ಡಾಲರ್ ಗೆ ಖರೀದಿಸಿದ ನಂತರ ಎಲೋನ್ ಮಸ್ಕ್ ಅದರ CEO ಆಗಿದ್ದರು. ತಾನು ಸಿಇಒ ಆಗುತ್ತಿದ್ದಂತೆಯೇ ಪರಾಗ್ ಅಗರ್ವಾಲ್ ಸೇರಿದಂತೆ ಅನೇಕ ಜನರನ್ನು ಸೇವೆಯಿಂದ ಬಿಡುಗಡೆ ಮಾಡಿದ್ದರು.
Valentine's Day Doodle 2023: ನೀರಿನ ಹನಿಗಳ ಮೂಲಕ ಪ್ರೀತಿಯ ಸಂದೇಶ ಸಾರಿದ ಗೂಗಲ್
ತೆಗೆದುಹಾಕಲಾಗುವುದು ಉಚಿತ ನೀಲಿ ಟಿಕ್ :
ಇತ್ತೀಚೆಗೆ, ಎಲೋನ್ ಮಸ್ಕ್ ಟ್ವಿಟರ್‌ನ ಉಚಿತ ಬ್ಲೂ ಟಿಕ್‌ಗಳನ್ನು ತೆಗೆದುಹಾಕಲಾಗುವುದು ಎಂದು ಹೇಳಿದ್ದಾರೆ. ಉಚಿತ ಬ್ಲೂ ಟಿಕ್ ಹೊಂದಿರುವವರು ನಿಜವಾಗಿಯೂ ಭ್ರಷ್ಟರು ಎಂದು ಎಲೋನ್ ಮಸ್ಕ್ ಹೇಳಿದ್ದಾರೆ. ಉಚಿತ ಬಳಕೆದಾರರಿಂದ ಶೀಘ್ರದಲ್ಲೇ ಬ್ಲೂ ಟಿಕ್ ಅನ್ನು ಹಿಂಪಡೆಯಲಾಗುವುದು ಎಂದು ಹೇಳಿದ್ದಾರೆ. ಎಲೋನ್ ಮಸ್ಕ್ ಟ್ವೀಟ್ ಮೂಲಕ ಈ ಮಾಹಿತಿ ನೀಡಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...