ಉದ್ಯೋಗಿಗಳ ಕೆಲಸಕ್ಕೆ ಕತ್ತರಿ ಹಾಕಿದ eBay!4% ರಷ್ಟು ಉದ್ಯೋಗಿಗಳ ವಜಾಕ್ಕೆ ನಿರ್ಧಾರ

eBay layoffs : eBay 500 ಉದ್ಯೋಗಿಗಳ ವಜಾಕ್ಕೆ ನಿರ್ಧರಿಸಿದೆ.  4% ರಷ್ಟು ಉದ್ಯೋಗಿಗಳ ಕಡಿತಕ್ಕೆ ತೀರ್ಮಾನಿಸಿದೆ. ಕಂಪನಿಯ ಒಟ್ಟು ಉದ್ಯೋಗಿಗಳ ಸಂಖ್ಯೆಯ 4% ದಷ್ಟು ನೌಕರರನ್ನು ವಜಾ ಮಾಡುವುದಾಗಿ ಹೇಳಿದೆ.    

Written by - Ranjitha R K | Last Updated : Feb 13, 2023, 11:50 AM IST
  • 2023 ರಲ್ಲಿ ಉದ್ಯೋಗಿಗಳನ್ನು ವಜಾ ಮಾಡುವ ಬಗ್ಗೆ ಘೋಷಿಸಿದ ಇಬೇ ಇಂಕ್
  • 4% ದಷ್ಟು ನೌಕರರನ್ನು ವಜಾ ಮಾಡುವುದಾಗಿ ಹೇಳಿದೆ.
  • ಆರ್ಥಿಕ ಸ್ಥಿತಿ ಗತಿಗಳನ್ನು ವಿಶ್ಲೇಷಿಸಿದ ನಂತರ ಕಂಪನಿಯಿಂದ ಈ ನಿರ್ಧಾರ
ಉದ್ಯೋಗಿಗಳ ಕೆಲಸಕ್ಕೆ ಕತ್ತರಿ ಹಾಕಿದ  eBay!4% ರಷ್ಟು  ಉದ್ಯೋಗಿಗಳ ವಜಾಕ್ಕೆ ನಿರ್ಧಾರ  title=

eBay layoffs : ಗೂಗಲ್, ಅಮೆಜಾನ್, ಮೆಟಾ, ಮೈಕ್ರೋಸಾಫ್ಟ್ ಮತ್ತು ಇತರರು ಸೇರಿದಂತೆ ಹಲವಾರು ಟೆಕ್ ದೈತ್ಯ ಕಂಪನಿಗಳು ಈಗಾಗಲೇ 2023 ರಲ್ಲಿ ಉದ್ಯೋಗಿಗಳನ್ನು ವಜಾ ಮಾಡುವ ಬಗ್ಗೆ ಘೋಷಿಸಿದೆ.  ಇ-ಕಾಮರ್ಸ್ ಸಂಸ್ಥೆ ಇಬೇ ಇಂಕ್ ಕೂಡಾ ಜಾಗತಿಕವಾಗಿ 500 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಕಂಪನಿಯ ಒಟ್ಟು ಉದ್ಯೋಗಿಗಳ ಸಂಖ್ಯೆಯ 4% ದಷ್ಟು ನೌಕರರನ್ನು ವಜಾ ಮಾಡುವುದಾಗಿ ಹೇಳಿದೆ. 

ವರದಿಯ ಪ್ರಕಾರ, eBay CEO Jamie Iannone ಯಾವ ಉದ್ಯೋಗಿಗಳನ್ನು ವಜಾ ಮಾಡಲಾಗುತ್ತದೆಯೋ ಅವರೊಂದಿಗೆ ಮೆಮೊವನ್ನು ಹಂಚಿಕೊಂಡಿದ್ದಾರೆ. ಕಳೆದ ಹಲವಾರು ತಿಂಗಳುಗಳಿಂದ ಆರ್ಥಿಕ ಸ್ಥಿತಿ ಗತಿಗಳನ್ನು ವಿಶ್ಲೇಷಿಸಿದ ನಂತರ ಕಂಪನಿಯು ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ. 

ಇದನ್ನೂ ಓದಿ : Maruti Cars: ಅಗ್ಗದ ದರದಲ್ಲಿ ಲಕ್ಸುರಿ ಫೀಲ್ ನೀಡುವ ಕಾರುಗಳಿವು.!

ಕಂಪನಿಯ ಈ ನಿರ್ಧಾರದಿಂದ "ತನ್ನ ಗ್ರಾಹಕರಿಗೆ ಉತ್ತಮ ಅನುಭವವನ್ನು ಒದಗಿಸಲು  ಸಾಧ್ಯವಾಗುತ್ತದೆ ಎನ್ನುವುದು ಕಂಪನಿ ಅಭಿಪ್ರಾಯ.  eBay  ಮೆಮೊರಾಂಡಂನಲ್ಲಿ ಉಲ್ಲೇಖಿಸಿರುವ ಹಾಗೆ ಸಂಸ್ಥೆಯ ಈ ನಿರ್ಧಾರ "ಹೆಚ್ಚು ಪ್ರಭಾವಕ್ಕೆ ಒಳಗಾಗಿರುವ ವಿಭಾಗದಲ್ಲಿ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ. 

"ಈ ಬದಲಾವಣೆಯು ನಮಗೆ ಹೆಚ್ಚಿನ ಸಂಭಾವ್ಯ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಮತ್ತು ಹೊಸ ತಂತ್ರಜ್ಞಾನಗಳನ್ನು ಅಳವಡಿಸಲು ಹೆಚ್ಚು ಅವಕಾಶ ನೀಡುತ್ತದೆ ಎಂದು Iannone ತನ್ನ ಉದ್ಯೋಗಿಗಳಿಗೆ ನೀಡಿದ ಒಂದು ಸಂದೇಶದಲ್ಲಿ ಹೇಳಿದ್ದಾರೆ.    

ಗೋಲ್ಡ್‌ಮನ್ ಸ್ಯಾಚ್ಸ್ ಗ್ರೂಪ್ ಇಂಕ್ ಮತ್ತು ಆಲ್ಫಾಬೆಟ್ ಇಂಕ್ ಸೇರಿದಂತೆ ಹಲವಾರು ಯುಎಸ್ ಮೂಲದ ಕಂಪನಿಗಳು ಈಗಾಗಲೇ ನೌಕರರನ್ನು ಸೇವೆಯಿಂದ ವಜಾಗೊಳಿಸಿವೆ. ಈ ಕ್ರಮವು ಹೆಚ್ಚಿನ ಹಣದುಬ್ಬರದಿಂದ  ಕಂಪನಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಇತ್ತೀಚೆಗೆ, ಜೂಮ್ ಅನೇಕ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ. ವೀಡಿಯೊ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್ ಸುಮಾರು 1,300 ಉದ್ಯೋಗಿಗಳನ್ನು ಅಥವಾ ಅದರ ಸುಮಾರು 15% ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿದೆ. 

ಇದನ್ನೂ ಓದಿ : Nothing Phone 1 ಮೇಲೆ ಭಯಂಕರ ಡಿಸ್ಕೌಂಟ್! ನೀವು ನಿಮ್ಮ ಕನಸಲ್ಲೂ ಊಹಿಸಿರಲಿಕ್ಕಿಲ್ಲ...

ಸ್ಟಾರ್ಟಪ್‌ಗಳು ಮತ್ತು ಮಧ್ಯಮ ಗಾತ್ರದ ಸಂಸ್ಥೆಗಳು ಮಾತ್ರವಲ್ಲದೆ, ಅಮೆಜಾನ್, ಮೈಕ್ರೋಸಾಫ್ಟ್ ಮತ್ತು ಗೂಗಲ್ ಪೇರೆಂಟ್ ಆಲ್ಫಾಬೆಟ್‌ನಂತಹ ಟೆಕ್ ದೈತ್ಯರು ಸಹ ಈ ಕ್ರಮವನ್ನು ಅನುಸರಿಸುತ್ತಿದ್ದಾರೆ. ಟ್ರ್ಯಾಕಿಂಗ್ ಸೈಟ್ Layoffs.fyi ಪ್ರಕಾರ, 2023 ರಲ್ಲಿ, 312 ಟೆಕ್ ಕಂಪನಿಗಳು 97,020 ಉದ್ಯೋಗಿಗಳನ್ನು ವಜಾಗೊಳಿಸಿವೆ. ಜಾಗತಿಕ ಆರ್ಥಿಕ ಹಿಂಜರಿತದ ನಡುವೆ ವೆಚ್ಚವನ್ನು ನಿರ್ವಹಿಸಲು ಈ ಸಂಸ್ಥೆಗಳು ಉದ್ಯೋಗ ಕಡಿತವನ್ನು ಘೋಷಿಸಿವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News