ಈ ದೇಶದಲ್ಲಿ ಪತ್ತೆಯಾಗಿದೆ ಕೊರೊನಾಗಿಂತಲೂ ಅಪಾಯಕಾರಿ ವೈರಸ್. WHO ನಿಂದ ಅಲರ್ಟ್ ಜಾರಿ

Marburg Virus: ಆಫ್ರಿಕಾ ದೇಶವಾಗಿರುವ ಈಕ್ವಟೋರಿಯಲ್ ಗಿನಿಯಾದಲ್ಲಿ ಕೊರೊನಾ ವೈರಸ್ ಗಿಂತ ಒಂದು ಅಪಾಯಕಾರಿ ವೈರಸ್ ಪತ್ತೆಯಾಗಿದೆ. ಈ ಸೊಂಕಿನಿಂದ ಅಲ್ಲಿ ಇದುವರೆಗೆ 9 ಜನ ಸಾವನ್ನಪ್ಪಿದ್ದಾರೆ.  

Written by - Nitin Tabib | Last Updated : Feb 14, 2023, 07:41 PM IST
  • ಈಕ್ವಟೋರಿಯಲ್ ಗಿನಿಯಾದಲ್ಲಿ ಕಂಡುಬಂದಿರುವ ಈ ಮಾರ್ಬರ್ಗ್ ವೈರಸ್‌ನ ಲಕ್ಷಣಗಳು
  • ಎಬೋಲಾ ವೈರಸ್‌ನಂತೆಯೇ ಇವೆ ಮತ್ತು ಹೆಚ್ಚಿನ ಸಂಖ್ಯೆಯ ಜನರು ಇದರಿಂದ ಸೋಂಕಿಗೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ.
  • ಮಾರ್ಬರ್ಗ್ ವೈರಸ್ನ ಸಾಮಾನ್ಯ ಲಕ್ಷಣಗಳು ಜ್ವರ ಮತ್ತು ಎದೆ ನೋವು.
ಈ ದೇಶದಲ್ಲಿ ಪತ್ತೆಯಾಗಿದೆ ಕೊರೊನಾಗಿಂತಲೂ ಅಪಾಯಕಾರಿ ವೈರಸ್. WHO ನಿಂದ ಅಲರ್ಟ್ ಜಾರಿ title=
ಕೊರೊನಾಗಿಂತ ಅಪಾಯಕಾರಿ ಹೊಸ ವೈರಸ್ ಪತ್ತೆ

Marburg Virus Fatility Ratio: ಕೊರೊನಾವೈರಸ್‌ನ ವಿನಾಶ ಇನ್ನೂ ಮುಗಿದಿಲ್ಲ ಎನ್ನುವಷ್ಟರಲ್ಲಿ ಆಫ್ರಿಕಾದ ಈಕ್ವಟೋರಿಯಲ್ ಗಿನಿಯಾದಲ್ಲಿ ಹೊಸ ವೈರಸ್ ಕದತಟ್ಟಿದೆ. ಮಾರ್ಬರ್ಗ್ ಹೆಸರಿನ ಈ ವೈರಸ್ ಸೋಂಕಿನಿಂದ ಅಲ್ಲಿ ಇದುವರೆಗೆ 9 ಜನರು ಸಾವನ್ನಪ್ಪಿದ್ದಾರೆ ಮತ್ತು ಇದು ಕೋವಿಡ್ -19 ಗಿಂತ ಹೆಚ್ಚು ಅಪಾಯಕಾರಿಯಾಗಿದೆ ಎನ್ನಲಾಗುತ್ತಿದೆ.

ಮಾರ್ಬರ್ಗ್ ವೈರಸ್‌ನ ಲಕ್ಷಣಗಳು ಎಬೋಲಾ ವೈರಸ್‌ನಂತೆಯೇ ಇವೆ
ಈಕ್ವಟೋರಿಯಲ್ ಗಿನಿಯಾದಲ್ಲಿ ಕಂಡುಬಂದಿರುವ ಈ ಮಾರ್ಬರ್ಗ್ ವೈರಸ್‌ನ ಲಕ್ಷಣಗಳು ಎಬೋಲಾ ವೈರಸ್‌ನಂತೆಯೇ ಇವೆ ಮತ್ತು ಹೆಚ್ಚಿನ ಸಂಖ್ಯೆಯ ಜನರು ಇದರಿಂದ ಸೋಂಕಿಗೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ. ಮಾರ್ಬರ್ಗ್ ವೈರಸ್ನ ಸಾಮಾನ್ಯ ಲಕ್ಷಣಗಳು ಜ್ವರ ಮತ್ತು ಎದೆ ನೋವು. ಇದು ಎಷ್ಟು ಅಪಾಯಕಾರಿ ಎಂದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದಿದ್ದರೆ ರೋಗಿಯ ಸಾವು ಕೂಡ ಸಂಭವಿಸುವ ಸಾಧ್ಯತೆ ಇದೆ.

ಇದನ್ನೂ ಓದಿ-WhatsApp ಬಳಕೆದಾರರಿಗೊಂದು ಸಂತಸದ ಸುದ್ದಿ!

ಅಲರ್ಟ್ ಜಾರಿಗೊಳಿಸಿದ WHO
ಮಾರ್ಬರ್ಗ್ ವೈರಸ್ ಸೋಂಕಿನ ಹಿನ್ನೆಲೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಕೆಯನ್ನು ಜಾರಿಗೊಳಿಸಿದ್ದು, ಜನರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದೆ. WHO ಹೇಳಿಕೆಯ ಪ್ರಕಾರ, ಸಂಪರ್ಕ ಪತ್ತೆಹಚ್ಚುವಿಕೆ, ಸೋಂಕಿತ ಜನರ ಪ್ರತ್ಯೇಕತೆ ಮತ್ತು ರೋಗದ ಲಕ್ಷಣಗಳನ್ನು ತೋರಿಸುವ ಜನರ ಚಿಕಿತ್ಸೆ ಮತ್ತು ಆರೈಕೆಗಾಗಿ ಪೀಡಿತ ಜಿಲ್ಲೆಗಳಲ್ಲಿ ಮುಂಗಡ ತಂಡಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ-Nothing Phone 1 ಮೇಲೆ ಭಯಂಕರ ಡಿಸ್ಕೌಂಟ್! ನೀವು ನಿಮ್ಮ ಕನಸಲ್ಲೂ ಊಹಿಸಿರಲಿಕ್ಕಿಲ್ಲ...

ಸಾವಿನ ಪ್ರಮಾಣವು ಶೇ.88 ರಷ್ಟಿದೆ
ಮಾರ್ಬರ್ಗ್ ವೈರಸ್ ತುಂಬಾ ಅಪಾಯಕಾರಿ ಮತ್ತು ಅದರ ಸೋಂಕಿನ ನಂತರ ಸಾವಿನ ಪ್ರಮಾಣವು ಶೇ.88 ರಷ್ಟಕ್ಕೆ ಹೋಗಬಹುದು ಎನ್ನಲಾಗಿದೆ. ಮಾರ್ಬರ್ಗ್ ವೈರಸ್ ಸೋಂಕು ವೇಗವಾಗಿ ಹರಡುತ್ತದೆ ಎಂದು WHO ನ ಪ್ರಾದೇಶಿಕ ನಿರ್ದೇಶಕ ಡಾ. ಮತಾಶಿದಿವೋ ಮೊಯಿತಿ, ವೈರಸ್ ಹರಡುವುದನ್ನು ತಡೆಯಲು, WHO ಆರೋಗ್ಯ ತುರ್ತು ತಜ್ಞರು, ಸೋಂಕು ನಿಯಂತ್ರಣ ತಂಡಗಳು, ಲ್ಯಾಬ್‌ಗಳು ಮತ್ತು ಸಂವಹನ ಬೆಂಬಲ ವ್ಯವಸ್ಥೆಗಳನ್ನು ನಿಯೋಜಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ-Valentine's Day Offer: ತನ್ನ ಗ್ರಾಹಕರಿಗೆ 5ಜಿಬಿವರೆಗೆ ಉಚಿತ ಡೇಟಾ ಜೊತೆಗೆ 5000 ರೂ. ಗೆಲ್ಲುವ ಅವಕಾಶ ಕಲ್ಪಿಸುತ್ತಿದೆ ಈ ಟೆಲಿಕಾಂ ಕಂಪನಿ

ಮಾರ್ಬರ್ಗ್ ವೈರಸ್ ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ
ಮಾರ್ಬರ್ಗ್ ವೈರಸ್ ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. ನಂತರ ಇದು ಸೋಂಕಿತ ರೋಗಿಯ ದೈಹಿಕ ದ್ರವಗಳು, ಮೇಲ್ಮೈಗಳು ಮತ್ತು ವಸ್ತುಗಳ ನೇರ ಸಂಪರ್ಕದ ಮೂಲಕ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಈ ವೈರಸ್ ಚಿಕಿತ್ಸೆಗಾಗಿ ಇದುವರೆಗೆ ಯಾವುದೇ ಲಸಿಕೆ ಅಥವಾ ಚಿಕಿತ್ಸೆ ಇದುವರೆಗೆ ಪತ್ತೆಯಾಗಿಲ್ಲ, ಆದರೂ ಕೂಡ, ಸಮಯೋಚಿತ ಚಿಕಿತ್ಸೆಯು ರೋಗಿಯ ಜೀವವನ್ನು ಉಳಿಸಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News