iPhone 15: ಹೀಗಿರುತ್ತೆ ನೋಡಿ ಐಫೋನ್ 15, ಮೊದಲ ಫೋಟೋ ರಿವೀಲ್ ಮಾಡಿದ ಆ್ಯಪಲ್!
ಐಫೋನ್ 15 ಸ್ಮಾರ್ಟ್‍ಫೋನ್ ಫ್ಲಾಟ್ ಬಾಡಿ ಬದಲಿಗೆ ಕರ್ವ್ಡ್ ಎಡ್ಜ್ ನಲ್ಲಿ ಲಭ್ಯವಿರಲಿದೆ. ಆದರೆ ಇದರ ವಿನ್ಯಾಸವು ಹೇಗಿರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೊಸ ಮಾಹಿತಿಯ ಪ್ರಕಾರ ವಿನ್ಯಾಸದಲ್ಲಿ ಹಲವು ಬದಲಾವಣೆ ಕಾಣಬಹುದೆಂದು ನಿರೀಕ್ಷಿಸಲಾಗಿದೆ.
ನವದೆಹಲಿ: Apple iPhone 14 ಬಿಡುಗಡೆ ಮಾಡಿ ಕೆಲವೇ ತಿಂಗಳುಗಳು ಕಳೆದಿವೆ. ಈ ಸರಣಿಯ ಎಲ್ಲಾ 4 ಮಾದರಿಗಳು ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿವೆ. ಖರೀದಿಸಿದ ಬಹುತೇಕ ಜನರಿಗೆ ಐಫೋನ್ 14 ಸರಣಿ ತುಂಬಾ ಇಷ್ಟವಾಗಿದೆ. ಈಗ ಐಫೋನ್ 15 ಸ್ಮಾರ್ಟ್‍ಫೋನ್ ಬಗ್ಗೆ ಚರ್ಚೆಗಳು ಪ್ರಾರಂಭವಾಗಿವೆ. ಇದರ ಬಗ್ಗೆ ಹಲವು ವದಂತಿಗಳು ಸಹ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಸೋರಿಕೆಯ ಮಾಹಿತಿ ಪ್ರಕಾರ ಐಫೋನ್ 15ರ ವಿನ್ಯಾಸವು ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ಈ ಫೋನ್‌ನ ಮೂಲೆಯಲ್ಲಿ ಕರ್ವ್ ಡಿಸ್ಪ್ಲೇ ಕಂಡುಬರುತ್ತದೆ. ಐಫೋನ್ 15 ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯಿರಿ.
ಐಫೋನ್ 15ನಲ್ಲಿ ವಿಭಿನ್ನ ವಿನ್ಯಾಸ
ಐಫೋನ್‌ನಲ್ಲಿ ಹೊಸ ವಿನ್ಯಾಸ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆಪಲ್ iPhone 12ರಿಂದ ಒಂದೇ ವಿನ್ಯಾಸ ನೀಡುತ್ತಿದೆ. ಇತ್ತೀಚಿನ ವರದಿಯ ಪ್ರಕಾರ iPhone 15ಸರಣಿಯು ವಿಭಿನ್ನ ವಿನ್ಯಾಸದಲ್ಲಿ ಬರಲಿದೆಯಂತೆ. ಇದರ ವಿನ್ಯಾಸಕ್ಕೆ ನೀವು ಫಿದಾ ಆಗುವುದು ಗ್ಯಾರಂಟಿ ಅಂತಾ ಹೇಳಲಾಗುತ್ತಿದೆ.
ಇದನ್ನೂ ಓದಿ: ಫೆಬ್ರವರಿ 2023 ರಲ್ಲಿ ಈ ಕಾರುಗಳನ್ನು ಸ್ಥಗಿತಗೊಳಿಸಲಿದೆ ಹೋಂಡಾ !
ಐಫೋನ್ 15ನಲ್ಲಿ ಕರ್ವ್ಡ್ ಎಡ್ಜ್
ಐಫೋನ್‌ಗಳಲ್ಲಿ ಟೈಟಾನಿಯಂ ಬಾಡಿ ಲಭ್ಯವಿರುತ್ತದೆ, ಇದು ಸಾಧನವನ್ನು ಮತ್ತಷ್ಟು ಹಗುರಗೊಳಿಸುತ್ತದೆ ಎಂದು ಹೇಳಲಾಗುತ್ತಿದೆ. ಪ್ರಮಾಣಿತ ಮಾದರಿಗಳಿಗೆ ಹೋಲಿಸಿದರೆ ಪ್ರೊ ಮಾದರಿಗಳು ಅಲ್ಯೂಮಿನಿಯಂ ಬಾಡಿ ಬಳಸಬಹುದು. ವಿನ್ಯಾಸದ ಹೊರತಾಗಿ ವೈಶಿಷ್ಟ್ಯಗಳಲ್ಲಿಯೂ ಹಲವು ಬದಲಾವಣೆಗಳನ್ನು ಕಾಣಬಹುದು ಅಂತಾ ವರದಿಯಾಗಿದೆ. ಫೋನ್‌ಗಳು 3nm ಪ್ರಕ್ರಿಯೆಯನ್ನು ಬಳಸಿಕೊಂಡು ತಯಾರಿಸಲಾದ ಹೊಸ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಇದಲ್ಲದೆ ಈ ಹೊಸ ಸಾಧನಗಳು ಲೈಟ್ನಿಂಗ್ ಪೋರ್ಟ್ ಬದಲಿಗೆ USB-C ಪೋರ್ಟ್ ಅನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Xiaomi ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ ಸ್ಟೈಲಿಶ್ ವಿನ್ಯಾಸದ Waterproof Smartphone
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.