Nothing Phone 1: ಕೇವಲ ರೂ.9999 ಕ್ಕೆ ಖರೀದಿಸಿ ಪಾರದರ್ಶಕ ವಿನ್ಯಾಸದ ಈ ಸ್ಮಾರ್ಟ್ ಫೋನ್!

Noting Phone 1 Price Cut: ಫ್ಲಿಪ್ ಕಾರ್ಟ್ ಹಾಗೂ ಅಮೆಜಾನ್ ಎರಡೂ ವೇದಿಕೆಗಳ ಮೇಲೆ ನಥಿಂಗ್ ಫೋನ್ 1 ಅನ್ನು ಭಾರಿ ಬಂಪರ್ ಡಿಸ್ಕೌಂಟ್ ಮತ್ತು ಎಕ್ಸ್ ಚೇಂಜ್ ಆಫರ್ ಅಡಿ ಕೇವಲ ರೂ.9999ಕ್ಕೆ ಮಾರಾಟಕ್ಕಿಡಲಾಗಿದೆ. ಯಾವ ವೇದಿಕೆಯ ಮೇಲೆ ಆಗ್ಗದ ದರದಲ್ಲಿ ಸಿಗುತ್ತಿದೆ ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Nov 28, 2022, 08:19 PM IST
  • ಈ ಫೋನ್ ಇದೀಗ ಇ-ಕಾಮರ್ಸ್ ವೇದಿಕೆಗಳಲ್ಲಿ ಭಾರಿ ಡಿಸ್ಕೌಂಟ್ ನಲ್ಲಿ ಸಿಗುತ್ತಿದೆ.
  • ಫ್ಲಿಪ್ ಕಾರ್ಟ್ ಹಾಗೂ ಅಮೆಜಾನ್ ಎರಡೂ ವೇದಿಕೆಗಳಲ್ಲಿ
  • ನಥಿಂಗ್ ಫೋನ್ ಮೇಲೆ ಭಾರಿ ರಿಯಾಯಿತಿ ಮತ್ತು ಎಕ್ಸ್ ಚೇಂಜ್ ಆಫರ್ ನೊಂದಿಗೆ ಸಿಗುತ್ತಿದೆ.
Nothing Phone 1: ಕೇವಲ ರೂ.9999 ಕ್ಕೆ ಖರೀದಿಸಿ ಪಾರದರ್ಶಕ ವಿನ್ಯಾಸದ ಈ ಸ್ಮಾರ್ಟ್ ಫೋನ್! title=
Nothing Phone 1

Noting Phone 1 Offer: ಇದೇ ವರ್ಷ ನಥಿಂಗ್ ಕಂಪನಿ ತನ್ನ ಯುನಿಕ್ ವಿನ್ಯಾಸ ಹಾಗೂ ಅದ್ಭುತ ಪರ್ಫಾರ್ಮೆನ್ಸ್ ಇರುವ ತನ್ನ ಮೊಟ್ಟಮೊದಲ ನಥಿಂಗ್ ಫೋನ್ 1 ಅನ್ನು ಬಿಡುಗಡೆ ಮಾಡಿತ್ತು. ಈ ಫೋನ್ ಇದೀಗ ಇ-ಕಾಮರ್ಸ್ ವೇದಿಕೆಗಳಲ್ಲಿ ಭಾರಿ ಡಿಸ್ಕೌಂಟ್ ನಲ್ಲಿ ಸಿಗುತ್ತಿದೆ. ಫ್ಲಿಪ್ ಕಾರ್ಟ್ ಹಾಗೂ ಅಮೆಜಾನ್ ಎರಡೂ ವೇದಿಕೆಗಳಲ್ಲಿ ನಥಿಂಗ್ ಫೋನ್ ಮೇಲೆ ಭಾರಿ ರಿಯಾಯಿತಿ ಮತ್ತು ಎಕ್ಸ್ ಚೇಂಜ್ ಆಫರ್ ನೊಂದಿಗೆ ಸಿಗುತ್ತಿದೆ. ಎಕ್ಸ್ ಚೇಂಜ್ ಆಫರ್ ಅಡಿ  ಈ ಫೋನ್ ಅನ್ನು ನೀವು 9999 ಕ್ಕೆ ಖರೀದಿಸಬಹುದು. ಒಂದು ವೇಳೆ ನೀವೂ ಕೂಡ ಈ ಪಾರದರ್ಶಕ ಸ್ಮಾರ್ಟ್ ಫೋನ್ ಖರೀದಿಸಲು ಡಿಸ್ಕೌಂಟ್ ಗಾಗಿ ಕಾಯುತ್ತಿದ್ದರೆ, ಇದು ನಿಮಗೆ ಸರಿಯಾದ ಅವಕಾಶವಾಗಿದೆ. ಹಾಗಾದರೆ ಯಾವ ವೇದಿಕೆಯ ಮೇಲೆ ಅಗ್ಗದ ದರದಲ್ಲಿ ಈ ಫೋನ್ ಸಿಗುತ್ತಿದೆ ತಿಳಿದುಕೊಳ್ಳೋಣ ಬನ್ನಿ,

ನಥಿಂಗ್ ಫೋನ್ ಫ್ಲಿಪ್ ಕಾರ್ಟ್ ಕೊಡುಗೆ
ರೂ.37999 ಎಂಆರ್ಪಿ ಇರುವ ನಥಿಂಗ್ ಫೋನ್ 1 (ಕಪ್ಪು, 8ಜಿಬಿ+128ಜಿಬಿ) ಫ್ಲಿಪ್ ಕಾರ್ಟ್ ವೇದಿಕೆಯ ಮೇಲೆ ಶೇ.27 ರಷ್ಟು ರಿಯಾಯ್ತಿಯೊಂದಿಗೆ ರೂ.27,499ಕ್ಕೆ ಮಾರಾಟ ಮಾಡಲಾಗುತ್ತಿದೆ. ವಿಶೇಷವಾಗಿ ಸಿಕ್ಯೋರ್ ಪ್ಯಾಕೆಜಿಂಗ್ ಕಾಸ್ಟ್ ರೂಪದಲ್ಲಿ ರೂ.29 ನ್ನು ನೀವು ಹೆಚ್ಚುವರಿಯಾಗಿ ಪಾವತಿಸಬೇಕು.

ಇದನ್ನೂ ಓದಿ-WhatsAppನ ಈ ಹೊಸ ವೈಶಿಷ್ಟ್ಯ ನಿಮ್ಮ ಚಾಟಿಂಗ್ ಅನುಭವವನ್ನೇ ಬದಲಾಯಿಸಲಿದೆ

ಇನ್ನೂ ಈ ಫೋನ್ ನಿಮ್ಮ ಬಜೆಟ್ ನಲ್ಲಿ ಕೂರುತ್ತಿಲ್ಲವೇ? ಪರವಾಗಿಲ್ಲ, ಏಕೆಂದರೆ, ಈ ಫೋನ್ ಅನ್ನು ನೀವು ಇನ್ನೂ ಅಗ್ಗದ ಬೆಲೆಯಲ್ಲಿ ಖರೀದಿಸಬಹುದು. ಹೌದು, ಎಕ್ಸ್ ಚೇಂಜ್ ಮಾಡಿಕೊಳ್ಳಲು ನಿಮ್ಮ ಬಳಿ ಹಳೆ ಫೋನ್ ಇದ್ದರೆ, ನೀವು ಎಕ್ಸ್ ಚೇಂಜ್ ಬೋನಸ್ ಲಾಭ ಕೂಡ ಪಡೆದುಕೊಳ್ಳಬಹುದು. ಈ ಲಾಭ ಪಡೆದು ನೀವು ಹೆಚ್ಚುವರಿಯಾಗಿ ರೂ.17,500 ಹೆಚ್ಚುವರಿ ಡಿಸ್ಕೌಂಟ್ ಪಡೆದುಕೊಳ್ಳಬಹುದು. ಅಂದರೆ, ರಿಯಾಯ್ತಿ ಮತ್ತು ಎಕ್ಸ್ ಚೇಂಜ್ ಕೊಡುಗೆ ಎರಡರ ಲಾಭ ಪಡೆದು ನೀವು ನಥಿಂಗ್ ಫೋನ್ 1 ಅನ್ನು ಕೇವಲ ರೂ.9999ಕ್ಕೆ ಖರೀದಿಸಬಹುದು. ಫ್ಲಿಪ್ ಕಾರ್ಟ್ ತನ್ನ ವೇದಿಕೆಯ ಮೇಲೆ ಹಲವು ಬ್ಯಾಂಕಿಂಗ್ ಕೊಡುಗೆಗಳನ್ನು ಸಹ ನೀಡುತ್ತದೆ. ಈ ಕೊಡುಗೆಗಳನ್ನು ನೀವು ಸೈಟ್ ಹಾಗೂ ಮೊಬೈಲ್ ಆಪ್ ನಲ್ಲಿ ನೋಡಬಹುದು.

ಇದನ್ನೂ ಓದಿ-Recharge Plan: ಕೇವಲ 25 ರೂ.ಗಳಲ್ಲಿ 2ಜಿಬಿ ಹೈಸ್ಪೀಡ್ ಇಂಟರ್ನೆಟ್

ಅಮೆಜಾನ್ ವೇದಿಕೆಯಲ್ಲಿ ನಥಿಂಗ್ ಫೋನ್ 1ರ ಬೆಲೆ ಎಷ್ಟು?
ಕಪ್ಪು ಬಣ್ಣದ 8ಜಿಬಿ RAM ಹಾಗೂ 128ಜಿಬಿ ಸ್ಟೋರೇಜ್ ಹೊಂದಿರುವ ನಥಿಂಗ್ ಫೋನ್ 1 ಅನ್ನು ನೀವು ಶೇ.20 ರಷ್ಟು ಡಿಸ್ಕೌಂಟ್ ಮೂಲಕ ರೂ.30,400 ಕ್ಕೆ ಖರೀದಿಸಬಹುದು. ಈ ಡಿಸ್ಕೌಂಟ್ ಹೊರತುಪಡಿಸಿ ರೂ.13,300 ಎಕ್ಸ್ ಚೇಂಜ್ ಬೋನಸ್ ಕೂಡ ನಿಮಗೆ ಲಭ್ಯವಿದೆ. ಈ ಎರಡೂ ಕೊಡುಗೆಗಳ ಲಾಭ ಪಡೆದು ನೀವು ಈ ಫೋನ್ ಅನ್ನು ಅಮೆಜಾನ್ ನಲ್ಲಿ ರೂ.17,100ಕ್ಕೆ ಖರೀದಿಸಬಹುದು. ಫ್ಲಿಪ್ ಕಾರ್ಟ್ ರೀತಿಯೇ ಅಮೆಜಾನ್ ಕೂಡ ತನ್ನ ವೇದಿಕೆಯ ಮೇಲೆ ಬ್ಯಾಂಕ್ ಕೊಡುಗೆಗಳನ್ನು ನೀಡುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News